Karnataka Tourism: ಟ್ರೆಕ್ಕಿಂಗ್ ಪ್ರಿಯರ ಗಮನಕ್ಕೆ ! ಸ್ಕಂದಗಿರಿ ಮತ್ತು ಕೆಲವು ಸ್ಥಳಗಳ ಚಾರಣಕ್ಕೆ ಈ ವೆಬ್​ಸೈಟ್​ನಲ್ಲಿ ಬುಕಿಂಗ್ ಕಡ್ಡಾಯ

| Updated By: ನಯನಾ ರಾಜೀವ್

Updated on: Nov 04, 2022 | 4:59 PM

ವೀಕೆಂಡ್ ಬಂದೇ ಬಿಡ್ತು, ಕೆಲವರಿಗೆ ಶನಿವಾರ ಕೆಲವರಿಗೆ ಭಾನುವಾರ ಇನ್ನೂ ಕೆಲವರಿಗೆ ಎರಡೂ ದಿನವು ರಜೆ ಇರುತ್ತದೆ. ಹಾಗೆಯೇ ಈ ವೀಕೆಂಡ್​ನಲ್ಲಿ ಎಂಜಾಯ್ ಮಾಡಲು ಬೆಂಗಳೂರಿನ ಸುತ್ತಮುತ್ತಲ ಈ ಪ್ರದೇಶಗಳಿಗೆ ಟ್ರೆಕ್ಕಿಂಗ್ ಮಾಡಬಹುದು.

Karnataka Tourism: ಟ್ರೆಕ್ಕಿಂಗ್ ಪ್ರಿಯರ ಗಮನಕ್ಕೆ ! ಸ್ಕಂದಗಿರಿ ಮತ್ತು ಕೆಲವು ಸ್ಥಳಗಳ ಚಾರಣಕ್ಕೆ ಈ ವೆಬ್​ಸೈಟ್​ನಲ್ಲಿ ಬುಕಿಂಗ್ ಕಡ್ಡಾಯ
Skandagiri
Image Credit source: Our Backpack Tales
Follow us on

ವೀಕೆಂಡ್ ಬಂದೇ ಬಿಡ್ತು, ಕೆಲವರಿಗೆ ಶನಿವಾರ ಕೆಲವರಿಗೆ ಭಾನುವಾರ ಇನ್ನೂ ಕೆಲವರಿಗೆ ಎರಡೂ ದಿನವು ರಜೆ ಇರುತ್ತದೆ.
ಹಾಗೆಯೇ ಈ ವೀಕೆಂಡ್​ನಲ್ಲಿ ಎಂಜಾಯ್ ಮಾಡಲು ಬೆಂಗಳೂರಿನ ಸುತ್ತಮುತ್ತಲ ಈ ಪ್ರದೇಶಗಳಿಗೆ ಟ್ರೆಕ್ಕಿಂಗ್ ಮಾಡಬಹುದು. ಆದರೆ ಟ್ರೆಕ್ಕಿಂಗ್ ಮಾಡುವವರು ಈ ವೆಬ್​ಸೈಟ್​ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ.

ಸ್ಕಂದಗಿರಿ
ಸ್ಕಂದ ಗಿರಿಯು ಕಾಳಾವರ ದುರ್ಗ ಎಂದು ಪ್ರಸಿದ್ಧವಾಗಿದೆ, ಇದು ಮೈಸೂರು ಸಾಮ್ರಾಜ್ಯದ ಪ್ರಸಿದ್ಧ ಆಡಳಿತಗಾರ ಟಿಪ್ಪು ಸುಲ್ತಾನನ ಕಾಲದ ಬೆಟ್ಟದ ಕೋಟೆಯಾಗಿದೆ. ಈ ಪ್ರಾಚೀನ ರಚನೆಯು ಕರ್ನಾಟಕದ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಶ್ರೇಣಿಗಳ ಮೇಲೆ 1350 ಮೀಟರ್ ಎತ್ತರದಲ್ಲಿದೆ. ಪ್ರವಾಸಿಗರು ಸ್ಕಂದ ಗಿರಿಯಿಂದ ಟಿಪ್ಪು ಸುಲ್ತಾನನ ಕೋಟೆಯ ಅವಶೇಷಗಳನ್ನು ನೋಡಬಹುದು.

ಈ ಕೋಟೆಯನ್ನು ಸ್ಥಳೀಯ ರಾಜನು ನಿರ್ಮಿಸಿದನು , ದಂತಕಥೆಯ ಪ್ರಕಾರ, ಟಿಪ್ಪು ಸುಲ್ತಾನನಿಂದ ಯಶಸ್ವಿಯಾಗಿ ತಪ್ಪಿಸಿಕೊಂಡು ಹಲವಾರು ದಿನಗಳ ಕಾಲ ಇಲ್ಲಿಯೇ ಇದ್ದನು. ಸ್ಕಂದ ಗಿರಿಯಲ್ಲಿ ಎರಡು ಗುಹೆಗಳಿವೆ, ಕೋಟೆಗೆ ಭೇಟಿ ನೀಡಿದಾಗ ಇಣುಕಿ ನೋಡಬಹುದು. ಇವೆರಡರ ನಿಖರವಾದ ಸ್ಥಳವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ, ಆದರೆ ಅವುಗಳಲ್ಲಿ ಒಂದು ಕೋಟೆಗೆ ಕಾರಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಗುಹೆಯಲ್ಲಿ 6 ಸಮಾಧಿಗಳು ಅಥವಾ ಸಮಾಧಿಗಳಿವೆ ಎಂದು ಸ್ಥಳೀಯ ಜನರು ನಂಬುತ್ತಾರೆ. ಇದಲ್ಲದೇ ಈ ಗುಹೆಗಳಲ್ಲಿ ಹೆಬ್ಬಾವುಗಳು ವಾಸವಾಗಿದ್ದು, ದಾರಿ ತಪ್ಪಿ ಗುಹೆಯೊಳಗೆ ನುಗ್ಗಿದ ಮೇಕೆಗಳನ್ನು ತಿಂದು ಹಾಕುತ್ತಿವೆ ಎಂಬುದು ಸ್ಥಳೀಯರ ಅಭಿಪ್ರಾಯ.

ಸಿದ್ದರ ಬೆಟ್ಟ
ಈ ಕ್ಷೇತ್ರವು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚಂದ್ರಾಯನದುರ‍್ಗ ಹೋಬಳಿಯಲ್ಲಿದೆ. ಇದು ಜಿಲ್ಲಾಕೇಂದ್ರದಿಂದ ಸುಮಾರು 35 ಕಿ.ಮೀ ಅಂತರದಲ್ಲಿದ್ದು, ಬೆಂಗಳೂರಿಗೆ 110 ಕಿ.ಮೀ ದೂರದಲ್ಲಿದೆ. ಈ ಪ್ರದೇಶಕ್ಕೆ ಬೂದುಗವಿ, ಸುವರ‍್ಣ ಗಿರಿ, ಸಂಜೀವಿನಿ ಬೆಟ್ಟ ಎಂಬ ಹಲವು ಹೆಸರುಗಳಿಂದ ಕರೆಯುವುದುಂಟು. ಇದು ಒಂದು ಎತ್ತರವಾದ ಬೆಟ್ಟವಾಗಿದ್ದು, ಬೆಟ್ಟವನ್ನು ಏರುವಾಗ ಕೆಲವೆಡೆ ಸಲೀಸಾಗಿಯೂ, ಹಲವೆಡೆ ಕಡಿದಾಗಿಯೂ ಮೆಟ್ಟಿಲುಗಳಿದ್ದು, ಚಾರಣಿಗರಿಗೆ ಹೇಳಿ ಮಾಡಿಸಿದಂತಹ ತಾಣವಾಗಿದೆ.

ದೇವರಾಯನದುರ್ಗ
ದೇವರಾಯನದುರ್ಗ ತುಮಕೂರಿನಿಂದ 16ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ , ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ ೮ ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೋಟೆ,ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.

ಸಿದ್ದರ ಬೆಟ್ಟ
ಬಸ್​ಗಳು ಕೊರಟಗೆರೆಯವರೆಗೆ ಮಾತ್ರ ಹೋಗುತ್ತವೆ, ಅಲ್ಲಿಂದ ಸಿದ್ದರ ಬೆಟ್ಟಕ್ಕೆ 12 ಕಿ.ಮೀ ಇದೆ. ಬೆಮಗಳೂರಿನಿಂದ 100 ಕಿ.ಮೀ ದೂರದಲ್ಲಿದೆ.

ತುಮಕೂರು ಜಿಲ್ಲೆಯ ಅತ್ಯಂತ ಪ್ರಸಿದ್ಧ ಬೆಟ್ಟಗಳಲ್ಲಿ ಸಿದ್ಧರ ಬೆಟ್ಟ. ಜಿಲ್ಲಾ ಕೇಂದ್ರದಿಂದ ಸುಮಾರು ೩೦ ಕಿ.ಮೀ. ದೂರದ ತೋವಿನಕೆರೆ ಸಮೀಪದಲ್ಲಿರುವ ಸಿದ್ಧರ ಬೆಟ್ಟ ಔಷಧೀಯ ಸಸ್ಯಗಳ ಕಣಜ. ಇಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಔಷಧಿ ಸಸ್ಯಗಳಿವೆ ಎಂದು ಗುರುತಿಸಲಾಗಿದೆ.

ಬೆಟ್ಟದ ಮೇಲೆ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯವಿದೆ. ಕುಣಿಗಲ್ ತಾಲ್ಲೂಕಿನ ಎಡೆ ಯೂರು ಸಿದ್ಧಲಿಂಗೇಶ್ವರ ದೇವಾಲಯ ಹಾಗೂ ಮಠ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಸಮೀ ಪದ ಕಗ್ಗೆರೆ ಶ್ರೀ ಸಿದ್ದಲಿಂಗೇಶ್ವರರ ತಪೋಭೂಮಿ. ಸಮೀಪದಲ್ಲಿ ಶಿಂಷಾ ನದಿಗೆ ಅಡ್ಡ ಲಾಗಿ ಕಟ್ಟಿರುವ ಮಾರ್ಕೋನಹಳ್ಳಿ ಜಲಾಶಯವಿದೆ. ಇದೂ ಪ್ರಮುಖ ಪ್ರವಾಸಿ ತಾಣ.

ಈ ಸ್ಥಳಗಳಿಗೆ ಭೇಟಿ ನೀಡುವವರು https://www.karnatakaecotourism.com/ ಈ ವೆಬ್​ಸೈಟ್​ನಲ್ಲಿ ಮೊದಲೇ ಬುಕ್ ಮಾಡಿಕೊಳ್ಳಬೇಕು.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ