AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fashion: ಹಳೆ ಸೀರೆಗಳಿಂದ ಹೊಸ ಲುಕ್ ಕ್ರಿಯೇಟ್ ಮಾಡಿ; ಇಲ್ಲಿದೆ ಹೊಸ ಟ್ರೇಂಡ್​ಗಳ ಕುರಿತ ಮಾಹಿತಿ

ನಿಮ್ಮ ತಾಯಿಯ ಅಥವಾ ಅಜ್ಜಿಯ ಹಳೆಯ ಸೀರೆಗಳು ಬಳಸದೇ ಹಾಗೆಯೇ ಮೂಲೆಯಲ್ಲಿ ಉಳಿದು ಬಿಟ್ಟಿದೆಯೇ? ಅದನ್ನು ಯಾವತ್ತೂ ಎಸೆಯಲು ಹೋಗದಿರಿ ಬದಲಾಗಿ ಹೊಸ ರೀತಿಯಲ್ಲಿ ಮರು ಬಳಕೆ ಮಾಡಿ.

TV9 Web
| Updated By: ಅಕ್ಷತಾ ವರ್ಕಾಡಿ|

Updated on:Nov 04, 2022 | 10:44 PM

Share
ನಿಮ್ಮ ಹಳೆಯ ಸೀರೆಗಳನ್ನು ಉದ್ದವಾದ ಮತ್ತು ಸುಂದರವಾದ ಅನಾರ್ಕಲಿಗಳಾಗಿ ಬದಲಾಯಿಸಿ. ಸೀರೆಗಳು ಸಾಮಾನ್ಯವಾಗಿ ಆರರಿಂದ ಏಳು ಅಡಿ  ಉದ್ದವಿರುವುದರಿಂದ, ಅದರಿಂದ ನೆಲದ ಉದ್ದದ ಅನಾರ್ಕಲಿಯನ್ನು ಮಾಡುವುದು ಸುಲಭ. ನೀವು ಹಳೆಯ ಕಂಜೀವರಂ ಸೀರೆಗಳನ್ನು ಅನಾರ್ಕಲಿಗಳಾಗಿ ಪರಿವರ್ತಿಸಬಹುದು.

1 / 7
ಕುರ್ತಿಗಳನ್ನು ಅತಿಯಾಗಿ ಇಷ್ಟಪಡುವವರು, ಬಳಸದೆ ಬಿದ್ದಿರುವ ಹಳೆಯ ಸೀರೆಗಳಿಂದ ಕುರ್ತಿಗಳನ್ನು ತಯಾರಿಸಿ. ಜೊತೆಗೆ ಗ್ರ್ಯಾಂಡ್ ಆಗಿ ಫೀಲ್ ಕೊಡಲು ಅಲ್ಲಿ ಇಲ್ಲಿ ಫ್ಯಾಬ್ರಿಕ್ ಸೇರಿಸುವ ಮೂಲಕ ವಿನ್ಯಾಸವನ್ನು ಮಾಡಿ. ಹಬ್ಬದ ಸಮಯದಲ್ಲಿ ಇಂತಹ ಕುರ್ತಿಗಳು ನಿಮಗೆ ಗ್ರ್ಯಾಂಡ್ ಲುಕ್ ಕೊಡುತ್ತದೆ.

2 / 7
ಹಳೆಯ ಸೀರೆಗಳನ್ನು ಉಪಯೋಗಿಸಿ ಸ್ಕರ್ಟ್‌ಗಳನ್ನು ತಯಾರಿಸುವುದ್ದರಿಂದ ಇದು ನಿಮಗೆ ಒಂದು ಹೊಸ ಲುಕ್ ನೀಡುತ್ತದೆ.  ಲಾಂಗ್ ಫ್ಲೋಯಿ ಸ್ಕರ್ಟ್‌ಗಳು, ಶಾರ್ಟ್ ಸ್ಕರ್ಟ್‌ಗಳನ್ನು  ಸಹ ಪ್ರಯತ್ನಿಸಬಹುದು.

3 / 7
ನಿಮ್ಮ ಸೀರೆಯನ್ನು ಹಾಫ್ ಸೀರೆಯಾಗಿ ಪರಿವರ್ತಿಸುವುದು ಹಳೆಯ ಕಾಲದಿಂದಲೂ ರೂಢಿಯಲ್ಲಿರುವ ಒಂದು ತಂತ್ರವಾಗಿದೆ. ಸೀರೆಯ ಚೆಲುವು ಮತ್ತು ಸೌಂದರ್ಯವನ್ನು ಹಾಗೇ ಇರಿಸಿಕೊಳ್ಳಲು ಇದು ಒಂದು ಉತ್ತಮ ಮಾರ್ಗವಾಗಿದೆ ಮತ್ತು ಅದರ ನೋಟವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಲೆಹೆಂಗಾಗೆ ಸೀರೆಯನ್ನು ಬಳಸಿದ ನಂತರ ಬಟ್ಟೆ ಉಳಿದಿದ್ದರೆ ಸೀರೆಯಿಂದಲೂ ದುಪಟ್ಟಾವನ್ನು ತಯಾರಿಸಬಹುದು.

4 / 7
ಹಳೆಯ ಸೀರೆಗಳನ್ನು ನೀವು ಲೆಹೆಂಗಾಗಳು ಮತ್ತು ಸ್ಕರ್ಟ್‌ಗಳಾಗಿ ಬಳಸಬಹುದಾದರೆ, ನೀವು ಮುಂದೆ ಹೋಗಿ ಪಲಾಝೋ ಪ್ಯಾಂಟ್ ಅಥವಾ ಸಾಮಾನ್ಯ ಪ್ಯಾಂಟ್‌ಗಳನ್ನು ಸಹ ಮಾಡಬಹುದು. ದಪ್ಪ ಝರಿ ಬಾರ್ಡರ್‌ಗಳನ್ನು ಹೊಂದಿರುವ ಸೀರೆಗಳಲ್ಲಿ  ಉತ್ತಮ ಪಲಾಝೋ ಪ್ಯಾಂಟ್‌ಗಳನ್ನು ತಯಾರಿಸಬಹುದು

5 / 7
ಹಳೆಯ ಸೀರೆಗಳನ್ನು ಉಪಯೋಗಿಸಿ ಕರ್ಟೈನ್‌ಗಳು, ದಿಂಬಿನ ಕವರ್‌ಗಳು, ಬೆಡ್ ಲೆನಿನ್, ಟೇಬಲ್ ಕವರ್‌ಗಳನ್ನು ವಿಭಿನ್ನ ಶೈಲಿಗಳಲ್ಲಿ ತಯಾರಿಸಬಹುದಾಗಿದೆ. ಇದು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

6 / 7
ಹಳೆಯ ರೇಷ್ಮೆ ಸೀರೆಗಳಿಂದ ಚಿಕ್ಕ ಚಿಕ್ಕ ಹೊಳೆಯುವ ಬ್ಯಾಗ್‌ಗಳು ಮತ್ತು ಪೌಚ್‌ಗಳನ್ನು ಸಹ ಮಾಡಬಹುದು. ಅವುಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಕುಂದನ್‌ಗಳು ಮತ್ತು ಸ್ಟೋನ್ ಗಳನ್ನು ಅಂಟಿಸಿ ಇನ್ನಷ್ಟು ವಿಭಿನ್ನವಾಗಿ ಕಾಣುವಂತೆ ಮಾಡಬಹುದು. ಹಬ್ಬಗಳ ಸಂದರ್ಭದಲ್ಲಿ ಗ್ರ್ಯಾಂಡ್ ಬಟ್ಟೆಗಳ ಇದು ನಿಮಗೆ ಗ್ರ್ಯಾಂಡ್ ಲುಕ್ ಕೊಡುತ್ತದೆ.

7 / 7

Published On - 3:06 pm, Fri, 4 November 22