- Kannada News Photo gallery Rajinikanth, MK Stalin, Mamata Banerjee attend West Bengal Governor family function in Chennai
ಚೆನ್ನೈನಲ್ಲಿ ನಡೆದ ಬಂಗಾಳದ ರಾಜ್ಯಪಾಲರ ಮನೆ ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಮಮತಾ ಬ್ಯಾನರ್ಜಿ, ಸಿಎಂ ಸ್ಟಾಲಿನ್, ರಜನಿಕಾಂತ್
ಪಶ್ಚಿಮ ಬಂಗಾಳದ ಗವರ್ನರ್ ಲಾ ಗಣೇಶನ್ ಅವರ ಸಹೋದರನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ಚೆನ್ನೈಗೆ ಬಂದಿದ್ದರು. ಆಗ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹಾಗೂ ನಟ ರಜನಿಕಾಂತ್ ಜೊತೆ ದೀದಿ ಕಾಣಿಸಿಕೊಂಡಿದ್ದಾರೆ.
Updated on: Nov 04, 2022 | 1:52 PM

ತಮಿಳುನಾಡಿನ ಚೆನ್ನೈನಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಲಾ ಗಣೇಶನ್ (La Ganesan) ಅವರ ಕುಟುಂಬದ ಸಮಾರಂಭಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಆ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಬಂಗಾಳದ ರಾಜ್ಯಪಾಲ ಲಾ ಗಣೇಶನ್ ಮನೆಯ ಕಾರ್ಯಕ್ರಮದಲ್ಲಿ ರಜನಿಕಾಂತ್ ಜೊತೆ ಮಮತಾ ಬ್ಯಾನರ್ಜಿ

ಚೆನ್ನೈಗೆ ಬಂದ ಮಮತಾ ಬ್ಯಾನರ್ಜಿ ಅವರನ್ನು ಚಂಡೆ ವಾದನದ ಮೂಲಕ ಬರಮಾಡಿಕೊಳ್ಳಲಾಯಿತು. ಈ ವೇಳೆ ತಾವು ಕೂಡ ಚಂಡೆ ಬಾರಿಸಿ ಮಮತಾ ಬ್ಯಾನರ್ಜಿ ಗಮನ ಸೆಳೆದಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರ ಕುಟುಂಬದ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಮತಾ ತಮಿಳುನಾಡಿಗೆ ಬಂದಿದ್ದರು.

ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಮನೆಗೂ ತೆರಳಿದ ಮಮತಾ ಬ್ಯಾನರ್ಜಿ 20 ನಿಮಿಷ ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದ ಮಮತಾ ಬ್ಯಾನರ್ಜಿ, ಇದೊಂದು ಸೌಜನ್ಯದ ಭೇಟಿ. ಸ್ಟಾಲಿನ್ ನನ್ನ ಸಹೋದರನಿದ್ದಂತೆ. ಹೀಗಾಗಿ, ಅವರ ಮನೆಯಲ್ಲಿ ಕಾಫಿ ಕುಡಿದು ಬಂದಿದ್ದೇನೆ ಎಂದಿದ್ದಾರೆ.

ಇಬ್ಬರು ರಾಜಕೀಯ ನಾಯಕರು ಒಟ್ಟಿಗೆ ಇರುವಾಗ ನಾವು ಏನನ್ನಾದರೂ ಮಾತನಾಡಬಹುದು. ರಾಜಕೀಯಕ್ಕಿಂತ ಅಭಿವೃದ್ಧಿ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾವು ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚರ್ಚಿಸಬಹುದು. ಕೇವಲ ರಾಜಕೀಯ ಚರ್ಚೆ ನಡೆಯುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದ ಮಮತಾ ಬ್ಯಾನರ್ಜಿ, ಬಳಿಕ ರಾಜ್ಯಪಾಲರ ಕುಟುಂಬದ ಕಾರ್ಯಕ್ರಮದಲ್ಲೂ ಸ್ಟಾಲಿನ್ ಜೊತೆ ಕಾಣಿಸಿಕೊಂಡಿದ್ದಾರೆ.

ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವಂತೆ ಮಮತಾ ಬ್ಯಾನರ್ಜಿ ಆಹ್ವಾನ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಗವರ್ನರ್ ಲಾ ಗಣೇಶನ್ ಅವರ ಸಹೋದರನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ಚೆನ್ನೈಗೆ ಬಂದಿದ್ದರು. ಆಗ ಎಂಕೆ ಸ್ಟಾಲಿನ್ ತಮ್ಮ ನಿವಾಸಕ್ಕೆ ಆಗಮಿಸಬೇಕೆಂದು ಮಮತಾ ಬ್ಯಾನರ್ಜಿಯನ್ನು ಆಹ್ವಾನಿಸಿದ್ದರು. ಹೀಗಾಗಿ, 20 ನಿಮಿಷಗಳ ಕಾಲ ಮಮತಾ ಹಾಗೂ ಸ್ಟಾಲಿನ್ ಕುಟುಂಬಸ್ಥರು ಒಟ್ಟಿಗೇ ಸಮಯ ಕಳೆದಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಲಾ ಗಣೇಶನ್ ಅವರ ಕುಟುಂಬದವರ ಜೊತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್




