ಸುಂದರವಾಗಿರಬೇಕು ಎಂಬುದು ಎಲ್ಲರ ಆಸೆ. ನಿಮ್ಮ ಸೌಂದರ್ಯ ಮತ್ತು ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಔಷಧಿಗಳನ್ನು ಹುಡುಕುತ್ತಿರುತ್ತೀರಿ. ನೀವು ನಿಮ್ಮ ಚರ್ಮದ ಆರೈಕೆ ಮತ್ತು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದರೆ ಇಲ್ಲಿದೆ ಕೆಲವು ಟಿಪ್ಸ್ಗಳು. ಇವುಗಳು ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ವಾತಾವರಣದ ಏರು- ಪೇರು, ಧೂಳಿನಿಂದ ಚರ್ಮವು ಹಾನಿಗೊಳಗಾಗುತ್ತದೆ. ಚರ್ಮದ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಿರುವಾಗ ನಿಮ್ಮ ಮುಖ ಸುಂದರವಾಗಿ ಕಾಣಲು ಮತ್ತು ಮುಖದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಕೆಲವು ಮಾರ್ಗಗಳು ನಿಮಗಾಗಿ.
ಆಯುರ್ವೇದ ತಜ್ಞರಾದ ಡಾ. ಅಪರ್ಣಾ ಪದ್ಮನಾಭ್ ಮನೆಯಲ್ಲಿಯೇ ನೈಸರ್ಗಿಕವಾದ ಫೇಸ್ ಪ್ಯಾಕ್ಗಳನ್ನು ಹೇಗೆ ತಯಾರಿಸಬಹುದು ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಕೆಲವು ಟಿಪ್ಸ್ಗಳು ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಮನೆಯಲ್ಲಿಯೇ ಸರಳ ವಿಧಾನದಲ್ಲಿ ಇವುಗಳನ್ನು ತಯಾರಿಸಬಹುದು.
ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಈ ಸಲಹೆಗಳು
ವಿಧಾನ 1
ಮೊಸರು 1 ಚಮಚ, ಕಡೆಲೆ ಹಿಟ್ಟು ಮುಕ್ಕಾಲು ಚಮಚ ಮತ್ತು ಚಿಟಿಕೆ ಅರಿಶಿಣ ಸೇರಿಸಿ ಮಿಶ್ರಣ ಮಾಡಿ. ಬಳಿಕ ಅದನ್ನು ನಿಮ್ಮ ಮುಖಕ್ಕೆ ಅನ್ವಯಿಸಿ. ಫೇಸ್ ಪ್ಯಾಕ್ ಒಣಗುವವರೆಗೆ ಹಾಗೆಯೇ ಇರಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
ವಿಧಾನ 2
ಜೇನುತುಪ್ಪ 1 ಚಮಚ, ಕಡಲೆ ಹಿಟ್ಟು ಅರ್ಧ ಚಮಚ, ಚಿಟಿಕೆ ಅರಿಶಿಣ ಸೇರಿಸಿ ಮಿಶ್ರಣ ಮಾಡಿ. ಅದನ್ನು ಮುಖದ ಮೇಲೆ ಅನ್ವಯಿಸಿ. 10 ನಿಮಿಷಗಳ ಕಾಲ ಹಾಗೆಯೇ ಇರಿ. ಬಳಿಕ ಉಗುರು ಬೆಚ್ಚಗಿನ ನೀರಿನ ಮೂಲಕ ತೊಳೆಯಿರಿ.
ವಿಧಾನ 3
ಓಟ್ಸ್ ಹಿಟ್ಟು, ಬಿಸಿ ಹಾಲು ಮಿಶ್ರಣ ಮಾಡಿ ಉಗುರು ಬೆಚ್ಚಗಿರುವಾಗಲೇ ಮುಖಕ್ಕೆ ಅನ್ವಯಿಸಿ. ಫೆಸ್ ಪ್ಯಾಕ್ ಒಣಗಿದ ಬಳಿಕ ಅದನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಮೂರು ಬಾರಿಯಾದರೂ ಮುಖಕ್ಕೆ ಈ ಪೇಸ್ಟ್ ಅನ್ವಯಿಸಬೇಕು.
ವಿಧಾನ 4
ಗೋಧಿ ಹಿಟ್ಟು 1 ಚಮಚ, ಹಾಲು, ಬಾದಾಮಿ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಫೇಸ್ ಪ್ಯಾಕ್ ಒಣಗಿದ ಬಳಿಕ ಮುಖ ತೊಳೆದುಕೊಳ್ಳಿ. ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
ವಿಧಾನ 5
ಬಾಳೆಹಣ್ಣು, ಸ್ವಲ್ಪ ಜೇನುತುಪ್ಪ ಸೇರಿಸಿ ಅದಕ್ಕೆ ಅರ್ಧ ಚಮಚ ಅಕ್ಕಿ ಹಿಟ್ಟು ಅಥವಾ ಕಡಲೆ ಹಿಟ್ಟನ್ನು ಸೇರಿಸಿ. ನಂತ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇವುಗಳನ್ನು ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Aloe Vera Benefits: ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಲೋವೆರಾ ಬಳಸಿ
Beauty Tips: ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಆಹಾರ ಪದಾರ್ಥಗಳ ಮೊರೆ ಹೋಗುವುದು ಉತ್ತಮ