Skin Care Tips : ಮೊಡವೆ ಸಮಸ್ಯೆಗೆ ಈ ಹಣ್ಣಿನ ಬೀಜದಲ್ಲಿದೆ ಸುಲಭ ಪರಿಹಾರ

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಈ ಹಣ್ಣನ್ನು ತಿಂದು ಅದರ ಬೀಜವನ್ನು ಎಸೆಯುತ್ತಾರೆ. ಆದರೆ ಈ ಹಣ್ಣಿನಷ್ಟೇ ಈ ಬೀಜವು ಆರೋಗ್ಯಕ್ಕೆ ಒಳ್ಳೆಯದು. ಈ ಪಪ್ಪಾಯಿ ಬೀಜಗಳು ಪಪೈನ್ ಎಂಬ ಕಿಣ್ವವನ್ನು ಹೊಂದಿದ್ದು, ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಅದಲ್ಲದೇ, ಸತ್ತ ಚರ್ಮವನ್ನು ಶುದ್ಧೀಕರಿಸಲು ಮತ್ತು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಬೀಜಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಎ ಹೊಂದಿದ್ದು, ಇದು ಚರ್ಮವನ್ನು ಹೊಳೆಪು ಹೆಚ್ಚಿಸಿ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹಾಗಾದ್ರೆ ತ್ವಚೆಯ ಆರೈಕೆಯಲ್ಲಿ ಪಪ್ಪಾಯಿ ಹಣ್ಣಿನ ಬೀಜವನ್ನು ಹೇಗೆ ಬಳಸಬಹುದು ಎನ್ನುವ ಮಾಹಿತಿ ಇಲ್ಲಿದೆ.

Skin Care Tips : ಮೊಡವೆ ಸಮಸ್ಯೆಗೆ ಈ ಹಣ್ಣಿನ ಬೀಜದಲ್ಲಿದೆ ಸುಲಭ ಪರಿಹಾರ
ಸಾಂದರ್ಭಿಕ ಚಿತ್ರ
Edited By:

Updated on: Feb 25, 2025 | 9:58 AM

ಮುಖದ ಚರ್ಮವು ಹೆಚ್ಚು ಎಣ್ಣೆಯುಕ್ತವಾಗಿದ್ದಾಗ ತ್ವಚೆಯಲ್ಲಿ ಮೊಡವೆಗಳು ಏಳುತ್ತವೆ. ಬೆವರು, ಧೂಳು ಮುಖಕ್ಕೆ ಅಂಟಿಕೊಂಡಾಗ ಚರ್ಮದ ಸಣ್ಣ ರಂಧ್ರದೊಳಗೆ ಸಿಲುಕಿ ಗುಳ್ಳೆಗಗಳು ಏಳುವ ಸಾಧ್ಯತೆಯೇ ಹೆಚ್ಚು. ಹೀಗಾದಾಗ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ಹಣ್ಣಿನ ಬೀಜವು ಮೊಡವೆ ಸಮಸ್ಯೆಯನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಹಾಗಾದ್ರೆ ಈ ಪಪ್ಪಾಯಿ ಬೀಜವನ್ನು ಈ ರೀತಿ ಬಳಸಿದ್ರೆ ತ್ವಚೆಯ ಎಲ್ಲಾ ಸಮಸ್ಯೆಯೂ ನಿವಾರಣೆಯಾಗುತ್ತದೆ.

  • ಪಪ್ಪಾಯಿ ಬೀಜದ ಪೇಸ್ಟ್ ತಯಾರಿಸಿ ತ್ವಚೆಗೆ ಅನ್ವಯಿಸಿ : ಪಪ್ಪಾಯಿ ಬೀಜಗಳು ಮೊಡವೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಪಪ್ಪಾಯಿ ಬೀಜಗಳನ್ನು ಪುಡಿಮಾಡಿ ಪೇಸ್ಟ್ ತಯಾರಿಸಿ ಮೊಡವೆಯಿದ್ದಲ್ಲಿಗೆ ಅನ್ವಯಿಸಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ..ಹೀಗೆ ಮಾಡುವುದರಿಂದ ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಉರಿಯೂತ ಮತ್ತು ಸೋಂಕನ್ನು ಕಡಿಮೆ ಮಾಡಿ ಮೊಡವೆ ಸಮಸ್ಯೆಗೆ ಮುಕ್ತಿ ನೀಡುತ್ತದೆ.
  • ಪಪ್ಪಾಯಿ ಬೀಜ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ : ಪಪ್ಪಾಯಿ ಬೀಜಗಳ ಪೇಸ್ಟ್ ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿಕೊಳ್ಳಿ. ಈ ಮಿಶ್ರಣದಿಂದ ನಿಮ್ಮ ಮುಖವನ್ನು ನಿಧಾನಕ್ಕೆ ಮಸಾಜ್ ಮಾಡಿಕೊಳ್ಳಿ. ಈ ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ ಹಾಗೂ ಪಪ್ಪಾಯಿ ಬೀಜಗಳು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಇಪ್ಪತ್ತು ನಿಮಿಷಗಳ ಬಳಿಕ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ಪಪ್ಪಾಯಿ ಬೀಜದ ಸ್ಕ್ರಬ್ : ಪಪ್ಪಾಯಿ ಬೀಜಗಳನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ನೀರು ಅಥವಾ ಜೇನುತುಪ್ಪ ಸೇರಿಸಿ ಸ್ಕ್ರಬ್ ತಯಾರಿಸಿಕೊಳ್ಳಿ. ಇದರಿಂದ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಇದು ಮೊಡವೆಗಳನ್ನು ತೊಡೆದು ಹಾಕುತ್ತದೆ. ತ್ವಚೆಯನ್ನು ಯೌವ್ವನದಿಂದ ಇಡಲು ಸಹಾಯ ಮಾಡುವುದಲ್ಲದೆ, ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ.
  • ಪಪ್ಪಾಯಿ ಬೀಜಗಳು ಮತ್ತು ಹಾಲಿನ ಫೇಸ್ ಪ್ಯಾಕ್ : ಮೊದಲಿಗೆ ಪಪ್ಪಾಯಿ ಬೀಜಗಳ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಹಾಲು ಸೇರಿಸಿ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ಪ್ಯಾಕ್ ಚರ್ಮಕ್ಕೆ ಆಳವಾದ ಪೋಷಣೆಯನ್ನು ಒದಗಿಸಿ, ತ್ವಚೆಯನ್ನು ಮೃದುವಾಗಿರುತ್ತದೆ. ವಯಸ್ಸಾಗುವಿಕೆಯನ್ನು ತಪ್ಪಿಸಿ ಮುಖದ ಕಾಂತಿ ಹೆಚ್ಚಿಸುತ್ತದೆ.

ಸೂಚನೆ : ಈ ಲೇಖನವು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ