AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಪ್ರಿಯ ವಿರಾಟ್ ಕೊಹ್ಲಿಯ ನೆಚ್ಚಿನ ರೆಸ್ಟೋರೆಂಟ್‌ ಗಳು ಇವೆ ನೋಡಿ

ಕ್ರಿಕೆಟ್ ಮೂಲಕ ಗಳಿಸಿದ ಆದಾಯವನ್ನು ವಿರಾಟ್ ಕೊಹ್ಲಿ ಕೊಹ್ಲಿ ಬಿಸಿನೆಸ್​ಗೆ ಹೂಡಿಕೆ ಮಾಡುವ ಮೂಲಕ ತಮ್ಮ ವಾರ್ಷಿಕ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೌದು ಆಹಾರ ಪ್ರಿಯರಾಗಿರುವ ವಿರಾಟ್ ಕೊಹ್ಲಿ, ತಮ್ಮದೇ ಆದ ಅಭಿರುಚಿಯನ್ನು ಹೊಂದಿದ್ದಾರೆ. ಲಂಡನ್‌ನ ಜಮಾವರ್‌ನಲ್ಲಿ ರುಚಿಕರ ಭಾರತೀಯ ಭೋಜನದಿಂದ ಹಿಡಿದು ತಮ್ಮದೇ ಒಡೆತನದ ಒನ್ 8 ಕಮ್ಯೂನ್‌ ರೆಸ್ಟೋರೆಂಟ್ ನಲ್ಲಿ ರುಚಿಕರವಾದ ಆಹಾರ ಶೈಲಿಯೂ ಕೊಹ್ಲಿಯ ನೆಚ್ಚಿನ ರೆಸ್ಟೋರೆಂಟ್‌ಗಳಲ್ಲಿನ ವೈವಿಧ್ಯಮಯ ಪಾಕಪದ್ಧತಿಗಳನ್ನು ಎತ್ತಿತೋರಿಸುತ್ತದೆ. ಹಾಗಾದ್ರೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಪ್ರಪಂಚದಾದಂತ್ಯ ಇರುವ ನೆಚ್ಚಿನ ಐದು ರೆಸ್ಟೋರೆಂಟ್ ಗಳ ಕುರಿತಾದ ಮಾಹಿತಿ ಇಲ್ಲಿದೆ.

ಆಹಾರ ಪ್ರಿಯ ವಿರಾಟ್ ಕೊಹ್ಲಿಯ ನೆಚ್ಚಿನ ರೆಸ್ಟೋರೆಂಟ್‌ ಗಳು ಇವೆ ನೋಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 24, 2025 | 12:44 PM

Share

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ಹೊರತುಪಡಿಸಿ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಒನ್ 8 ಕಮ್ಯೂನ್‌ ರೆಸ್ಟೋರೆಂಟ್ ಮಾಲೀಕರಾಗಿದ್ದು, ಕೊಹ್ಲಿ ಆಹಾರ ಪ್ರಿಯರೂ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು, ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಕ್ರಿಕೆಟಿಗ ವಿರಾಟ್ ಕೊಹ್ಲಿಯವರಿಗೆ ನೆಚ್ಚಿನ ರೆಸ್ಟೋರೆಂಟ್ ಗಳಿವೆ. ವಿದೇಶಕ್ಕೆ ತೆರಳಿದ್ದಾಗಲೆಲ್ಲಾ ಈ ಕೆಲವು ರೆಸ್ಟೋರೆಂಟ್ ಗಳಲ್ಲಿ ರುಚಿಕರ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ. ಜಗತ್ತಿನದಾದಂತ್ಯ ಇರುವ ಈ ರೆಸ್ಟೋರೆಂಟ್ ಗಳು ಕೊಹ್ಲಿಯವರ ನೆಚ್ಚಿನ ಆಹಾರ ತಾಣಗಳಾಗಿವೆಯಂತೆ.

ವಿರಾಟ್ ಕೊಹ್ಲಿಯ ನೆಚ್ಚಿನ ರೆಸ್ಟೋರೆಂಟ್‌ಗಳು

  • ಜಮಾವರ್, ಲಂಡನ್ : ಲಂಡನ್ ನಲ್ಲಿರುವ ಜಾಮಾವರ್ ಒಂದು ವಿಶಿಷ್ಟ ಭಾರತೀಯ ರೆಸ್ಟೋರೆಂಟ್ ಆಗಿದೆ. ಈ ಹಿಂದೆ ಪಂದ್ಯಗಳಿಗಾಗಿ ಇಂಗ್ಲೆಂಡ್‌ನಲ್ಲಿದ್ದಾಗ ವಿರಾಟ್ ಕ್ರಿಕೆಟ್ ದಂಪತಿಗಳು ರುಚಿಕರವಾದ ಊಟವನ್ನು ಇಲ್ಲಿಯೇ ಆನಂದಿಸಿದ್ದರು. ಈ ದಂಪತಿಗಳನ್ನು ಸ್ವಾಗತಿಸಲು ಬಾಣಸಿಗ ಸುರೇಂದರ್ ಮೋಹನ್, ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಹರ್ಷಚಿತ್ತದಿಂದ ಕೂಡಿದ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದರು. ವಿರಾಟ್ ಕೊಹ್ಲಿ ತಮ್ಮ ಫ್ಯಾಮಿಲಿಯೊಂದಿಗೆ ಲಂಡನ್ ಗೆ ಭೇಟಿಕೊಟ್ಟಾಗಲೆಲ್ಲಾ ಈ ರೆಸ್ಟೋರೆಂಟ್ ನಲ್ಲಿಯೇ ರುಚಿಕರ ಖಾದ್ಯಗಳನ್ನು ಸವಿಯುತ್ತಾರೆ.
  • ದೆಹಲಿ ಸೆ, ಮುಂಬೈ : ಮುಂಬೈಯಲ್ಲಿರುವ ದೆಹಲಿ ಸೆ ರೆಸ್ಟೋರೆಂಟ್ ಅಚ್ಚುಮೆಚ್ಚಿನದಾಗಿದೆ. ಚೋಲೆ ಭಟುರೆ ಖಾದ್ಯಕ್ಕೆ ಈ ರೆಸ್ಟೋರೆಂಟ್ ಪ್ರಸಿದ್ದಿಯನ್ನು ಪಡೆದಿದೆ. ಅದಲ್ಲದೇ, ದೆಹಲಿಯ ರೋಮಾಂಚಕ ಬೀದಿ ಆಹಾರವನ್ನು ಇಲ್ಲಿ ಸವಿಯಬಹುದು. ದೆಹಲಿಯ ರೋಮಾಂಚಕ ಬೀದಿ ಬದಿಯ ಆಹಾರ ಸಂಸ್ಕೃತಿಯನ್ನು ಇಲ್ಲಿ ಪ್ರಸ್ತುತಪಡಿಸುತ್ತದೆ.
  • ಒನ್8 ಕಮ್ಯೂನ್, ಮುಂಬೈ : ಒನ್8 ಕಮ್ಯೂನ್ ವಿರಾಟ್ ಕೊಹ್ಲಿಯವರ ಒಡೆತನ ರೆಸ್ಟೋರೆಂಟ್ ಆಗಿದೆ. ಮುಂಬೈನ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರ ಐತಿಹಾಸಿಕ ಬಂಗಲೆಯಲ್ಲಿರುವ ಈ ರೆಸ್ಟೋರೆಂಟ್, ಜಾಗತಿಕ ಪಾಕಶಾಲೆಯೊಂದಿಗೆ ಮನೆ ಶೈಲಿಯ ವಾತಾವರಣವನ್ನು ಹೊಂದಿದೆ. ವಿಶಿಷ್ಟ ಆರೋಗ್ಯಕರ ಆಹಾರ ಶೈಲಿಯಿಂದ ಹಿಡಿದು ಊಟದವರೆಗೆ ವೈವಿಧ್ಯಮಯ ಮೆನುವಿನೊಂದಿಗೆ, ಒನ್8 ಕಮ್ಯೂನ್ ಜನಪ್ರಿಯತೆ ಪಡೆದುಕೊಂಡಿದ್ದು ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ನೆಚ್ಚಿನ ರೆಸ್ಟೋರೆಂಟ್ ಗಳಲ್ಲಿ ಇದು ಒಂದು ಎನ್ನಬಹುದು.
  • ಟೆಂಡ್ರಿಲ್, ಲಂಡನ್ : ಲಂಡನ್‌ನ ಹೃದಯಭಾಗದಲ್ಲಿರುವ ಟೆಂಡ್ರಿಲ್ ರೆಸ್ಟೋರೆಂಟ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಫೇವರಿಟ್ ರೆಸ್ಟೋರೆಂಟ್ ಗಳಲ್ಲಿ ಒಂದು. ಇಲ್ಲಿ ಸಸ್ಯಾಹಾರಿ ಮೆನುವಿನೊಂದಿಗೆ ಆರೋಗ್ಯಕರ ಊಟಕ್ಕಾಗಿ ಅತ್ಯಂತ ಜನಪ್ರಿಯವಾಗಿದೆ. ವಿರಾಟ್ ಕೊಹ್ಲಿ ಮತ್ತು ಅವರ ಸಂಗಾತಿ ಅನುಷ್ಕಾ ಶರ್ಮಾ ಇಬ್ಬರೂ ಇಷ್ಟಪಡುವ ರೆಸ್ಟೋರೆಂಟ್ ಇದಾಗಿದ್ದು, ತಾಜಾ ಹಾಗೂ ಪೌಷ್ಟಿಕಾಂಶಯುಕ್ತ ಭಕ್ಷ್ಯಗಳ ಮೇಲೆ ಕೇಂದ್ರೀಕರಿಸುತ್ತದೆ. ಆಧುನಿಕ ಹಾಗೂ ಸಸ್ಯಾಹಾರಿ ಆಧಾರಿತ ಪಾಕಪದ್ಧತಿಯೊಂದಿಗೆ ರುಚಿಕರ ಊಟವನ್ನು ಬಯಸುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.
  • ಜಾಸ್ಮಿನ್ ಇಂಡಿಯನ್ ರೆಸ್ಟೋರೆಂಟ್, ಅಡಿಲೇಡ್ : ಆಸ್ಟ್ರೇಲಿಯಯಾದ ಅಡಿಲೇಡ್ ನಲ್ಲಿರುವ ಜಾಸ್ಮಿನ್ ಇಂಡಿಯನ್ ರೆಸ್ಟೋರೆಂಟ್ ಅಧಿಕೃತ ಮನೆ ಶೈಲಿಯ ಭಾರತೀಯ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇದು ಕೊಹ್ಲಿಯವರಿಗೆ ಫೇವರಿಟ್ ರೆಸ್ಟೋರೆಂಟ್ ಗಳಲ್ಲಿ ಒಂದಾಗಿದ್ದು, ರುಚಿಕರ ಹಾಗೂ ಕ್ಲಾಸಿಕ್ ಭಕ್ಷ್ಯಗಳನ್ನು ಒಳಗೊಂಡಿರುವ ಮೆನುವಿನೊಂದಿಗೆ ಭಾರತೀಯ ಆಟಗಾರರ ನೆಚ್ಚಿನ ಆಹಾರ ತಾಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ