AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಅಂಗೈ ಆಕಾರವೇ ನಿಮ್ಮ ರಹಸ್ಯಮಯ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ

ಸಾಮಾನ್ಯವಾಗಿ ವ್ಯಕ್ತಿ ಹೇಗೆ ಎಂದು ತಿಳಿಯಲು ಆ ವ್ಯಕ್ತಿಯ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಆ ವ್ಯಕ್ತಿಯೂ ಹೇಗೆ ವರ್ತಿಸುತ್ತಾನೆ ಎಂಬುದರ ಮೂಲಕ ಆತನ ವ್ಯಕ್ತಿತ್ವವನ್ನು ನಿರ್ಣಯಿಸಲಾಗುತ್ತದೆ. ಆದರೆ ದೇಹದ ಪ್ರತಿಯೊಂದು ಭಾಗಗಳು ವ್ಯಕ್ತಿಯ ನಿಗೂಢ ಗುಣಸ್ವಭಾವ ಹಾಗೂ ವ್ಯಕ್ತಿತ್ವವನ್ನು ತಿಳಿಸುತ್ತದೆಯಂತೆ. ಒಬ್ಬ ವ್ಯಕ್ತಿಯ ಅಂಗೈ ಹಾಗೂ ಕೈ ಬೆರಳಿನ ಆಕಾರದ ಮೇಲೆ ವ್ಯಕ್ತಿತ್ವವನ್ನು ಸುಲಭವಾಗಿ ನಿರ್ಣಯಿಸಬಹುದಂತೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test: ನಿಮ್ಮ ಅಂಗೈ ಆಕಾರವೇ ನಿಮ್ಮ ರಹಸ್ಯಮಯ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 24, 2025 | 10:13 AM

Share

ಒಬ್ಬ ವ್ಯಕ್ತಿಯ ಜೊತೆಗೆ ಸ್ವಲ್ಪ ಬೆರೆಯುವ ಮೂಲಕ ಆತ ಒಳ್ಳೆಯವನೋ ಕೆಟ್ಟವನೋ ಎನ್ನುವ ನಿರ್ಣಯಕ್ಕೆ ಬರಬಹುದು. ಆದರೆ ಸಂಪೂರ್ಣವಾಗಿ ಆತನ ವ್ಯಕ್ತಿತ್ವ ಹಾಗೂ ಗುಣಸ್ವಭಾವ ಅರಿತುಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಕಣ್ಣಿನ ಬಣ್ಣ, ಮೂಗಿನ ಆಕಾರ, ಕಿವಿಯ ಗಾತ್ರ, ಹುಬ್ಬಿನ ಆಕಾರ, ಕಾಲ್ಬೆರಳುಗಳ ಗಾತ್ರ ಹೀಗೆ ದೇಹದ ಪ್ರತಿ ಅಂಗವೂ ರಹಸ್ಯ ವ್ಯಕ್ತಿತ್ವವನ್ನು ಹೊರಹಾಕುತ್ತದೆ. ಅಂಗೈ ಆಕಾರ ಹಾಗೂ ಬೆರಳುಗಳ ಉದ್ದವು ಗುಣಸ್ವಭಾವ ತಿಳಿಸುತ್ತದೆ. ನಿಮ್ಮದು ಚಿಕ್ಕ ಅಂಗೈಯೇ ಅಥವಾ ದೊಡ್ಡ ಅಂಗೈಯೇ ಎಂಬುದನ್ನು ಗಮನಿಸಿ, ಅದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಅರಿತುಕೊಳ್ಳಿ.

  • ಚೌಕಾಕಾರದ ಅಂಗೈ ಹಾಗೂ ಚಿಕ್ಕದಾದ ಬೆರಳುಗಳು : ಚಿಕ್ಕ ಚಿಕ್ಕದಾದ ಕೈ ಬೆರಳುಗಳೊಂದಿಗೆ ಚೌಕಾಕಾರದ ಅಂಗೈ ಹೊಂದಿರುವ ವ್ಯಕ್ತಿಗಳು ಬಲವಾದ ಇಚ್ಛಾಶಕ್ತಿ ಹಾಗೂ ದೃಢನಿಶ್ಚಯ ಹೊಂದಿರುತ್ತಾರೆ. ಈ ವ್ಯಕ್ತಿಗಳಿಗೆ ಮಾಡುವ ಕೆಲಸದ ಬಗ್ಗೆ ಹೆಚ್ಚು ಶ್ರದ್ಧೆ ಭಕ್ತಿ ಇರುತ್ತದೆ. ಹೀಗಾಗಿ ಆ ಕೆಲಸವು ಪೂರ್ಣಗೊಳ್ಳುವವರೆಗೂ ಬಿಡುವುದಿಲ್ಲ. ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಈ ವ್ಯಕ್ತಿಗಳಾಗಿದ್ದು, ನಾಯಕತ್ವ ಗುಣವು ಇವರಲ್ಲಿ ಹೆಚ್ಚಿರುತ್ತದೆ. ಮಾನಸಿಕವಾಗಿ ಬಲಶಾಲಿಯಾಗಿದ್ದರೂ ದೈಹಿಕ ಶ್ರಮಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಎಲ್ಲರಿಗೂ ಸಲಹೆ ನೀಡುತ್ತಾ ತಾವು ಕೂಡ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.
  • ಚೌಕಾಕಾರದ ಅಂಗೈಯೊಂದಿಗೆ ಉದ್ದನೆಯ ಕೈ ಬೆರಳುಗಳು : ಯಾವ ವ್ಯಕ್ತಿಯೂ ಉದ್ದವಾದ ಬೆರಳುಗಳೊಂದಿಗೆ ಚೌಕಾಕಾರದ ಅಂಗೈ ಹೊಂದಿರುತ್ತಾರೋ, ಆ ವ್ಯಕ್ತಿಗಳು ಎಲ್ಲರನ್ನು ತಮ್ಮತ್ತ ಆಕರ್ಷಿಸುವ ಗುಣ ಹೊಂದಿರುತ್ತಾರೆ. ಆರಾಮದಾಯಕ ಜೀವನದ ಕಡೆಗೆ ಹೆಚ್ಚು ಒತ್ತು ಕೊಡುವ ಕಾರಣ ಕಷ್ಟದ ಕೆಲಸಗಳಿಂದ ತಪ್ಪಿಸಿಕೊಳ್ಳುತ್ತಾರೆ. ಬೇಡದ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಾ ಸಮಯ ವ್ಯರ್ಥ ಮಾಡುವುದೇ ಹೆಚ್ಚು. ಆರ್ಥಿಕ ಸಮಸ್ಯೆ ಈ ವ್ಯಕ್ತಿಗಳನ್ನು ಯಾವತ್ತಿಗೂ ಕಾಡುವುದಿಲ್ಲ. ಆದರೆ, ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಾರೆ. ಹೀಗಾಗಿ ಈ ವ್ಯಕ್ತಿಗಳಿಗೆ ಹಣ ಹಾಗೂ ಸಮಯದ ಬೆಲೆ ತಿಳಿದಿರುವುದಿಲ್ಲ.
  • ಆಯತಾಕಾರದ ಅಂಗೈ ಹಾಗೂ ಮಧ್ಯಮ ಉದ್ದದ ಬೆರಳುಗಳು : ಈ ರೀತಿ ಅಂಗೈ ಆಕಾರ ಹಾಗೂ ಬೆರಳುಗಳಿದ್ದರೆ ಈ ವ್ಯಕ್ತಿಗಳು ದೃಢ ನಿಶ್ಚಯ ಹಾಗೂ ಮಹತ್ವಾಕಾಂಕ್ಷೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅತಿಯಾದ ಆತ್ಮವಿಶ್ವಾಸ, ಆಕರ್ಷಕ ವ್ಯಕ್ತಿತ್ವ ಹಾಗೂ ಸ್ಪಷ್ಟ ಮಾತುಗಾರಿಕೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಈ ಜನರು ವೈಯಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಮುಂದುವರೆಯುತ್ತಾರೆ. ತಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಸುಲಭವಾಗಿ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಹೀಗಾಗಿ ತಮ್ಮೆಲ್ಲಾ ಭಾವನೆಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ. ತಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಯಶಸ್ಸುಗಳಿಸುತ್ತಾರೆ.
  • ಉದ್ದನೆಯ ಬೆರಳುಗಳೊಂದಿಗೆ ಚಪ್ಪಟೆ ಅಂಗೈ : ಅಂಗೈಗಳು ಚಪ್ಪಟ್ಟೆಯಾಗಿದ್ದು, ಉದ್ದವಾದ ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು ಸೂಕ್ಷ್ಮ ಸ್ವಭಾವದವರು. ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿದ್ದು, ತನ್ನವರ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಹೃದಯದ ಮಾತನ್ನು ಹೆಚ್ಚು ಕೇಳುವ ಈ ಜನರು ಇತರರಿಗೆ ಕೆಟ್ಟದನ್ನು ಬಯಸುವುದಿಲ್ಲ. ತಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡಲು ಸದಾ ಸಿದ್ಧರಿದ್ದು, ಕಷ್ಟ ಎಂದರೆ ಸಾಕು ಮಿಡಿಯುತ್ತಾರೆ. ಈ ಗುಣದಿಂದಲೇ ಇವರಿಗೆ ಸ್ನೇಹಿತರು ಹೆಚ್ಚು ಎನ್ನಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ