ಭಾರತದ ಕೆಲವು ಜನಪ್ರಿಯ ತಿಂಡಿಗಳು ಇಲ್ಲಿಯದು ಅಲ್ಲವೇ ಅಲ್ಲ, ಎಲ್ಲಿಂದ ಬಂದವು ಇಲ್ಲಿದೆ ಮಾಹಿತಿ

|

Updated on: Feb 19, 2023 | 12:52 PM

ಭಾರತದ ಕೆಲವೊಂದು ಜನಪ್ರಿಯ ತಿಂಡಿಗಳು ಭಾರತದ್ದೇ ಅಲ್ಲ ಎಂದು ನಿಮಗೆ ತಿಳಿದಿದೆಯೇ? ಭಾರತೀಯ ಕೆಲವು ಜನಪ್ರಿಯ ಆಹಾರಗಳ ಭಾರತಕ್ಕೆ ಹೇಗೆ ಬಂದವು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಭಾರತದ ಕೆಲವು ಜನಪ್ರಿಯ ತಿಂಡಿಗಳು ಇಲ್ಲಿಯದು ಅಲ್ಲವೇ ಅಲ್ಲ, ಎಲ್ಲಿಂದ ಬಂದವು ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಭಾರತದಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದಂತೆ ಅಲ್ಲಿನ ಆಹಾರ ಪದ್ದತಿ, ಸಂಪ್ರದಾಯಗಳು ಕೂಡ ವಿಭಿನ್ನವಾಗಿರುತ್ತದೆ. ಕೆಲವೊಂದು ಆಹಾರಗಳ ರುಚಿಯೂ ನಿಮ್ಮನ್ನು ಮತ್ತೇ ಮತ್ತೇ ಆಕರ್ಷಿಸುತ್ತವೆ. ಅಂತಹ ಭಾರತದ ಕೆಲವೊಂದು ಜನಪ್ರಿಯ ತಿಂಡಿಗಳು ಭಾರತದ್ದೇ ಅಲ್ಲ ಎಂದು ನಿಮಗೆ ತಿಳಿದಿದೆಯೇ? ಭಾರತೀಯ ಕೆಲವು ಜನಪ್ರಿಯ ಆಹಾರಗಳ ಭಾರತಕ್ಕೆ ಹೇಗೆ ಬಂದವು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಸಮೋಸ:

ಭಾರತೀಯ ಮನೆಗಳಲ್ಲಿ, ಹೋಟೆಲ್​​ಗಳಲ್ಲಿ ಸಮೋಸವು ಬಹಳಷ್ಟು ಜನಪ್ರಿಯತೆಯನ್ನು ಹೊಂದಿದೆ. ಆದರೆ ಈ ತಿಂಡಿಯ ಮೂಲ ಪರ್ಷಿಯನ್(ಇಂದಿನ ಇರಾನ್). ಪರ್ಷಿಯನ್ ಪದದ ಸಾಂಬುಸಕ್ ನಿಂದ ಹಿಂದಿಯಲ್ಲಿ ಸಮೋಸಾ ಎಂಬ ಪದ ಹುಟ್ಟಿಕೊಂಡಿದೆ. ಇದು ಪ್ರಾರಂಭದಲ್ಲಿ ಮಾಂಸಹಾರ ತಿಂಡಿಯಾಗಿದ್ದರೂ ಕೂಡ ಭಾರತದಲ್ಲಿ ಇದನ್ನು ಆಲೂಗಡ್ಡೆ, ಚೀಸ್, ಬಟಾಣಿ, ಶುಂಠಿ, ಬೆಳ್ಳುಳ್ಳಿ, ಟೊಮ್ಯಾಟೊ, ಈರುಳ್ಳಿ ಮತ್ತು ಮೆಣಸಿನಕಾಯಿಗಳಿಂದ ತಯಾರಿಸಲಾಗುತ್ತದೆ.

ಗುಲಾಬ್ ಜಾಮೂನ್:

ಯಾವುದೇ ವಿಶೇಷ ದಿನಗಳಲ್ಲಿ ಗುಲಾಬ್ ಜಾಮೂನ್ ಇದ್ದೇ ಇರುತ್ತದೆ. ಆದರೆ ಇದರ ಮೂಲ ಪರ್ಷಿಯಾದಿಂದ ಬಂದಿದೆ. ಗುಲಾಬ್ ಜಾಮೂನ್’ ಎಂಬ ಪದವು ಪರ್ಷಿಯನ್ ಪದಗಳಾದ ‘ಗೋಲ್’ ಮತ್ತು ‘ಅಬ್’ ನಿಂದ ಬಂದಿದೆ, ಇದನ್ನು ‘ಪರಿಮಳಯುಕ್ತ ರೋಸ್ ವಾಟರ್’ ಎಂದು ಅನುವಾದಿಸಲಾಗಿದೆ. ಅಪ್ಪಟ ಗುಲಾಬ್ ಜಾಮೂನ್ ಸಕ್ಕರೆ ಪಾಕಕ್ಕಿಂತ ಹೆಚ್ಚಾಗಿ ಜೇನುತುಪ್ಪದಿಂದ ತಯಾರಿಸಲಾಗುತ್ತದೆ.

ಜಲೇಬಿ:

ಬಂಗಾಳದಲ್ಲಿ ಜಿಲಾಪಿ ಮತ್ತು ಅಸ್ಸಾಂನಲ್ಲಿ ಜೆಲೆಪಿ ಎಂದೂ ಕರೆಯಲ್ಪಡುವ ಈ ಸಕ್ಕರೆ ಪಾಕದಿಂದ ತಯಾರಿಸಲಾಗುವ ತಿಂಡಿಯು ಭಾರತದ ಅತ್ಯಂತ ಜನಪ್ರಿಯ. ಅರೇಬಿಯನ್ ಅಡುಗೆಪುಸ್ತಕ “ಕಿತಾಬ್ ಅಲ್ ತಬಿಖ್” ಮಧ್ಯಪ್ರಾಚ್ಯದಲ್ಲಿ ಝಲಾಬಿಹ್ ಎಂಬ ಇದೇ ರೀತಿಯ ಭಕ್ಷ್ಯವನ್ನು ಉಲ್ಲೇಖಿಸುತ್ತದೆ.

ಬಿರಿಯಾನಿ:

ಸ್ವಿಗ್ಗಿ ಮತ್ತು ಜೊಮಾಟೊದ ಇತ್ತೀಚಿನ ಸಂಶೋಧನೆಯ ಪ್ರಕಾರ ಬಿರಿಯಾನಿಯು ಭಾರತೀಯ ಮನೆಗಳಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಫುಡ್​​ ಎಂದು ಪರಿಗಣಿಸಲಾಗಿದೆ. ಆದರೆ ಭಾರತದಲ್ಲಿ ಮೊಘಲರು ಬಿರಿಯಾನಿ ಪರಿಚಯಿಸಿದರು ಎಂದು ಹೇಳಲಾಗುತ್ತದೆ.

ವಿಂದಾಲೂ:

ಇದನ್ನು ವಿಂದಾಲ್ಹು ಎಂದೂ ಕರೆಯುತ್ತಾರೆ. ಇದು ಗೋವಾದ ಜನಪ್ರಿಯ ಖಾದ್ಯವಾಗಿದೆ. ಆದರೆ ಈ ತಿಂಡಿಯ ಮೂಲ ಪೋರ್ಚುಗೀಸ್ ಎಂದು ಹೇಳಲಾಗುತ್ತದೆ. ಪೋರ್ಚುಗೀಸ್​​ನಲ್ಲಿ ಹಂದಿ ಮಾಂಸದಿಂದ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಕೋಳಿ ಮಾಂಸ , ಮೀನಿಂದ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕಡೆ ಬರೋಬ್ಬರಿ 28 ತರಹದ ಟೀಗಳು ಸಿಗುತ್ತೆ: ಯಾವುವು? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಕನ್ ಟಿಕ್ಕಾ ಮಸಾಲಾ:

ಮಾಂಸಹಾರಿಗಳಿಗಂತೂ ಅತ್ಯಂತ ಪ್ರಿಯವಾದ ಖಾದ್ಯಗಳಲ್ಲಿ ಚಿಕನ್ ಟಿಕ್ಕಾ ಪ್ರಮುಖವಾದುದು. ಆದರೆ ಇದನ್ನು 20 ನೇ ಶತಮಾನದ ಉತ್ತರಾರ್ಧದಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಬಾಂಗ್ಲಾದೇಶದ ಬಾಣಸಿಗ ಕಂಡುಹಿಡಿದನೆಂದು ಹೇಳಲಾಗುತ್ತದೆ.

ಚಹಾ:

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಚಹಾ ಉತ್ಪಾದಕ ರಾಷ್ಟ್ರವಾಗಿದೆ. ಒಂದು ಕಪ್ ಬೆಡ್ ಟೀ ಇಲ್ಲದ್ದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವವರು ಸಾಕಷ್ಟಿದ್ದಾರೆ. ಆದರೆ ಚಹಾ ಹುಟ್ಟಿದ್ದು ಚೀನಾದಲ್ಲಿ ಎಂಬುದು ನಿಮಗೆ ತಿಳಿದಿದೆಯೇ? ಹಾನ್ ರಾಜವಂಶದ ಚೀನೀ ಚಕ್ರವರ್ತಿಯ ಸಮಾಧಿಯಲ್ಲಿ ಅತ್ಯಂತ ಹಳೆಯ ಚಹಾ ಅವಶೇಷಗಳನ್ನು ಪುರಾತತ್ತ್ವಜ್ಞರು ಕಂಡುಹಿಡಿದಿದ್ದಾರೆ. ಟ್ಯಾಂಗ್ ರಾಜವಂಶದ ಆಳ್ವಿಕೆಯಲ್ಲಿ ಚೀನೀ ರಾಜಮನೆತನದವರಲ್ಲಿ ಇದು ಜನಪ್ರಿಯ ಪಾನೀಯವಾಗಿತ್ತು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:52 pm, Sun, 19 February 23