ಬೆಂಗಳೂರಿನಲ್ಲಿ ಒಂದೇ ಕಡೆ ಬರೋಬ್ಬರಿ 28 ತರಹದ ಟೀಗಳು ಸಿಗುತ್ತೆ: ಯಾವುವು? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ನೀವು ಟೀ ಪ್ರಿಯರಾಗಿದ್ದರೆ ದೇಸಿ, ಪಾನ್, ರೋಸ್, ವೆನಿಲಾ, ಮಸಾಲ ಹೀಗೆ ವಿಭಿನ್ನ ಫ್ಲೇವರ್ಗಳ ಟೀಗಳನ್ನು ಸವಿಯಬಹುದಾಗಿದೆ.
ಸಾಮಾನ್ಯ ಟೀ ಎಂದಾಕ್ಷಣ 5ರಿಂದ 6 ಬಗೆಯ ಟೀ ನೀವು ಕುಡಿದಿರುತ್ತೀರಿ. ಆದ್ರೇ 28 ಬಗೆಯ ಟೀ ಸಿಗ್ತಾ ಇದೆ ಒಂದೇ ಕಡೆ. ಟೀ ಮಾತ್ರವಲ್ಲದೇ ಇಲ್ಲಿನ ಕಾಫಿ ಹಾಗೂ ಸ್ನ್ಯಾಕ್ ಕೂಡ ಸಕ್ಕತ್ತ್ ಫೇಮಸ್. ಬೆಂಗಳೂರಿನಲ್ಲಿ ಒಂದೇ ಸೂರಿನಡಿ 28 ಬಗೆಯ ಟೀ ಸಿಕ್ತಾ ಇರೋದು ಟೀ ಪ್ರಿಯರಿಗಂತೂ ಖುಷಿಯ ವಿಚಾರ. ಬೆಂಗಳೂರಿನ ಮಲ್ಲೇಶ್ವರಂ 14th ಕ್ರಾಸ್ನಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾದ ಟೀ ಫ್ಯೊಷನ್ ವಿಭಿನ್ನ ಬಗೆಯ ಮಟ್ಕಾ ಟೀ ಯಿಂದಲೇ ಸಕ್ಕತ್ತ್ ಆಗಿ ಫೇಮಸ್ ಆಗಿದೆ.
ನೀವು ಟೀ ಪ್ರಿಯರಾಗಿದ್ದರೆ ದೇಸಿ, ಪಾನ್, ರೋಸ್, ವೆನಿಲಾ, ಮಸಾಲ ಹೀಗೆ ವಿಭಿನ್ನ ಫ್ಲೇವರ್ಗಳ ಟೀಗಳನ್ನು ಸವಿಯಬಹುದಾಗಿದೆ. ಜೊತೆಗೆ ಕಾಫಿ ಹಾಗೂ ಸ್ನ್ಯಾಕ್ ಕೂಡ ಲಭ್ಯವಿದೆ. ಸ್ನ್ಯಾಕ್ ಅಲ್ಲಿಯೂ ಕೂಡ ಪೈನಾಪಲ್ ಬಜ್ಜಿ, ಕ್ಯಾಬ್ಸಿಕಮ್ ಬಜ್ಜಿ, ಮಂಡಕ್ಕಿ ಹೀಗೆ ಸಾಕಷ್ಟು ವೆರೈಟಿಗಳನ್ನು ಕಾಣಬಹುದು. ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದರೂ ಕೂಡ ಸಕ್ಕತ್ತ್ ಆಗಿ ಫೇಮಸ್ ಆಗಿದೆ. ಇಲ್ಲಿನ ವಿಶಿಷ್ಟ ಶೈಲಿ ಹಾಗೂ ರುಚಿಯಿಂದಾಗಿ ಟೀ ಪ್ರಿಯ ತಮ್ಮ ರಿವ್ಯೂವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ.
ಇತ್ತೀಚಿಗಷ್ಟೇ ಬೆಂಗಳೂರು ಫುಡ್ ಬಾಂಬ್ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ.
View this post on Instagram
ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್
ಮಂಗಳವಾರ ಒಂದು ದಿನ ಹೊರತು ಪಡಿಸಿ ವಾರದ ಉಳಿದೆಲ್ಲಾ ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ತೆರೆದಿರುತ್ತದೆ. 28 ಬಗೆಯ ಟೀಗಳು 15 ರೂಪಾಯಿಂದ 90 ರೂಪಾಯಿಗಳ ವರೆಗಿನ ಟೀಗಳನ್ನು ಕಾಣಬಹುದು. ಜೊತೆಗೆ 8 ಬಗೆಯ ಕಾಫಿ ಹಾಗೂ ಬಜ್ಜಿ ಬೋಂಡಗಳು ಕೈಗೆಟ್ಟಕುವ ದರದಲ್ಲಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:45 pm, Sat, 18 February 23