National Drink Wine Day: ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್
ರಾಷ್ಟ್ರೀಯ ವೈನ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ನೀವು ಆಚರಿಸಲು ಮನೆಯಲ್ಲಿಯೇ ಆರೋಗ್ಯಕರ ವೈನ್ ತಯಾರಿಸಿ.
ರಾಷ್ಟ್ರೀಯ ವೈನ್ ದಿನ (National Drink Wine Day) ವನ್ನು ಪ್ರತಿ ವರ್ಷ ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ನೀವು ಆಚರಿಸಲು ಮನೆಯಲ್ಲಿಯೇ ಆರೋಗ್ಯಕರ ವೈನ್ ತಯಾರಿಸಿ. ಮನೆಯಲ್ಲಿಯೇ ಸುಲಭವಾಗಿ ವೈನ್ ತಯಾರಿಸಲು ತಯಾರಿಸುವ ವಿಧಾನ ಇಲ್ಲಿದೆ. ಸುಲಭವಾಗಿ ಮನೆಯಲ್ಲಿ ದ್ರಾಕ್ಷಿ ಹಣ್ಣು ಬಳಸಿ ವೈನ್ ತಯಾರಿಸಿ. ಇದನ್ನು ರೆಡ್ ವೈನ್ ಎಂದು ಕೂಡ ಕರೆಯುತ್ತಾರೆ. ಅತ್ಯಂತ ಸುಲಭವಾಗಿ ವೈನ್ ತಯಾರಿಸುವ ವಿಧಾನವನ್ನು ಆಧ್ಯ ಕಲರ್ ಫುಲ್ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ರೆಡ್ ವೈನ್ ಮಾಡಲು ಬೇಕಾಗುವ ಪದಾರ್ಥಗಳು:
1 ಕಪ್ ಸಕ್ಕರೆ ಅರ್ಧ ಕಿಲೋ ಕಪ್ಪು ದ್ರಾಕ್ಷಿ 1/2 ಲೀ ನೀರು
ರೆಡ್ ವೈನ್ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಿ. ನಂತರ ಸ್ವಲ್ಪ ಉಪ್ಪು ಹಾಕಿ. ನೀರು ಉಗುರು ಬೆಚ್ಚಗಿದ್ದರೆ ಸಾಕು. ನೀರು ಬಿಸಿಯಾಗುತ್ತಿದ್ದಂತೆ ಅದಕ್ಕೆ ದ್ರಾಕ್ಷಿಯನ್ನು ಹಾಕಿ. ಯಾಕೆಂದರೆ ದ್ರಾಕ್ಷಿ ಬೆಳೆಸುವ ಸಮಯದಲ್ಲಿ ಕೆಮಿಕಲ್ ಬಳಸಲಾಗುತ್ತದೆ. ಆದ್ದರಿಂದ ಬಿಸಿ ನೀರಿನಲ್ಲಿ ಹಾಕಿ ದ್ರಾಕ್ಷಿಯನ್ನು ಚೆನ್ನಾಗಿ ತೊಳೆಯಿರಿ. ಅರ್ಧ ಗಂಟೆಗಳಷ್ಟು ದ್ರಾಕ್ಷಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ.
ಇದನ್ನೂ ಓದಿ: ಚಹಾ ಪಾನೀಯ ಮಾತ್ರವಲ್ಲ ಒಂದು ಭಾವನೆ; ಟೀ ಕುಡಿದ ನಂತರ ದೇಹದಲ್ಲಾಗುವ ಬದಲಾವಣೆ ಇಲ್ಲಿದೆ
ಈಗ ಒಂದು ಚಿಕ್ಕ ಬೌಲ್ನಲ್ಲಿ ತಣ್ಣೀರು ತೆಗೆದುಕೊಳ್ಳಿ. ನಂತರ ಈಗಾಗಲೇ ಬಿಸಿನೀರಿನಲ್ಲಿ ಹಾಕಿಟ್ಟ ದ್ರಾಕ್ಷಿಗಳನ್ನು ತಣ್ಣೀರಿನಲ್ಲಿ ಹಾಕಿ. ನಂತರ ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಸೋಸಿ ದ್ರಾಕ್ಷಿಗಳನ್ನು ಒಂದು ಪ್ಲೇಟ್ನಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯನ್ನು ಒಲೆಯಲ್ಲಿಡಿ, ಅದಕ್ಕೆ 1/2 ಲೀಟರ್ ನೀರು ಹಾಕಿ. ನೀರು ಕುದಿ ಬರುತ್ತಿದ್ದಂತೆ ಅದಕ್ಕೆ ಈಗಾಗಲೇ ತೊಳೆದಿಟ್ಟ ದ್ರಾಕ್ಷಿಗಳನ್ನು ಹಾಕಿ. ಇದನ್ನು ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಕುದಿಸಿ. 20 ನಿಮಿಷಗಳ ನಂತರ ಅದಕ್ಕೆ ಒಂದು ಕಪ್ ಸಕ್ಕರೆ ಹಾಕಿ. ನಿಮ್ಮ ರುಚಿಗೆ ತಕ್ಕಂತೆ ಹಾಕಿ. ನಂತರ ಇದನ್ನು ಒಂದರಿಂದ ಎರಡು ದಿನಗಳ ವರೆಗೆ ಸಂಗ್ರಹಿಸಿಡಿ. ಎರಡು ದಿನಗಳ ನಂತರ ಇದರಲ್ಲಿರುವ ದ್ರಾಕ್ಷಿಗಳನ್ನು ಚೆನ್ನಾಗಿ ಹಿಸುಕಿ. ಇವಾಗ ಇದನ್ನು ಚೆನ್ನಾಗಿ ಸೋಸಿಕೊಳ್ಳಿ. ಇವಾಗ ರೆಡ್ ವೈನ್ ಸಿದ್ಧವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:01 am, Sat, 18 February 23