ವಾತಾವರಣ ಬಿಸಿಯಾಗಿರಲಿ, ತಣ್ಣಗೆ ಇರಲಿ, ಟೀ ಕುಡಿದ ನಂತರ ದೇಹ ಕೊಂಚ ತಂಪಾಗುತ್ತದೆ. ಇದಕ್ಕೆ ಕಾರಣ ಕೆಫೀನ್. ಇದು ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮತ್ತು ಬೆವರುವಂತೆ ಮಾಡುವ ರಾಸಾಯನಿಕ. ಒಂದು ಸಂಶೋಧನೆಯ ಪ್ರಕಾರ, ನೀವು ಐಸ್ಡ್ ಟೀ ಕುಡಿದರೆ, ನಿಮ್ಮ ದೇಹದ ಉಷ್ಣತೆಯು 10 ನಿಮಿಷಗಳಲ್ಲಿ 0.8 ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ. ಬಿಸಿ ಬಿಸಿ ಟೀ ಕುಡಿದರೆ ದೇಹದ ಉಷ್ಣತೆ 1 ರಿಂದ 2 ಡಿಗ್ರಿ ಕಡಿಮೆಯಾಗುತ್ತದೆ.