- Kannada News Photo gallery Anupama Parameswaran Birthday: Natasaarvabhowma actress Anupama Parameswaran celebrates 27th birthday
Anupama Parameswaran: ‘ನಟ ಸಾರ್ವಭೌಮ’ ಚಿತ್ರದ ಚೆಲುವೆ ಅನುಪಮಾ ಪರಮೇಶ್ವರನ್ ಜನ್ಮದಿನ; ಈ ನಟಿಯ ವಯಸ್ಸೆಷ್ಟು?
Happy Birthday Anupama Parameswaran: ಅನುಪಮಾ ಪರಮೇಶ್ವರನ್ ಅವರಿಗೆ ಸಖತ್ ಬೇಡಿಕೆ ಇದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.
Updated on: Feb 18, 2023 | 8:15 AM

ನಟಿ ಅನುಪಮಾ ಪರಮೇಶ್ವರನ್ ಅವರು ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. ಇಂದು (ಫೆ.18) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್ ಅವರ ವೃತ್ತಿಜೀವನ ಆರಂಭ ಆಗಿದ್ದು ಮಲಯಾಳಂನ ‘ಪ್ರೇಮಂ’ ಸಿನಿಮಾ ಮೂಲಕ. ಆ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಬಳಿಕ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಮಿಂಚಲು ಶುರುಮಾಡಿದರು.

ಕನ್ನಡದಲ್ಲಿ ಅನುಪಮಾ ಪರಮೇಶ್ವರನ್ ಅವರು ನಟಿಸಿದ್ದು ಒಂದೇ ಚಿತ್ರದಲ್ಲಿ. ಅದು ಪುನೀತ್ ರಾಜ್ಕುಮಾರ್ ನಾಯಕತ್ವದ ‘ನಟ ಸಾರ್ವಭೌಮ’ ಸಿನಿಮಾ. ಅಪ್ಪು ಮತ್ತು ಅನುಪಮಾ ಜೋಡಿ ಅಭಿಮಾನಿಗಳಿಗೆ ಇಷ್ಟ ಆಯಿತು. ಈ ಚಿತ್ರದ ಹಾಡುಗಳು ಕೂಡ ಗಮನ ಸೆಳೆದವು.

ಅನುಪಮಾ ಪರಮೇಶ್ವರನ್ ಅವರು ಜನಿಸಿದ್ದು 1996ರ ಫೆಬ್ರವರಿ 18ರಂದು. ಈಗ ಅವರಿಗೆ 27 ವರ್ಷ ವಯಸ್ಸು. ಸಿನಿಮಾಗಳ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ತಮಗೆ ಇಷ್ಟ ಆಗುವ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅನುಪಮಾ ಪರಮೇಶ್ವರನ್ ಅವರು ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಅನುಪಮಾ ಅವರನ್ನು 1.3 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.



















