ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡ ಜೀವನವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಒಂದೆಡೆ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಿದರೆ, ಇನ್ನೊಂದೆಡೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಸಾಯನಿಕಯುಕ್ತ ಶಾಂಪೂಗಳ ಬಳಕೆಯು ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಅತಿಯಾದ ಶಾಂಪೂಗಳ ಬಳಕೆಯು ಕೂದಲಿಗೆ ಹಾನಿಯನ್ನು ಮಾಡುತ್ತದೆ. ಹೀಗಿರುವಾಗ ಶಾಂಪೂಗಳ ಪರ್ಯಾಯವಾಗಿ ಕೂದಲು ಸ್ವಚ್ಛಗೊಳಿಸಲು ಏನನ್ನು ಬಳಸಬೇಕು ಎಂದು ಯೋಚಿಸುತ್ತಿದ್ದೀರಾ? ನೀವು ಶಾಂಪೂ ಬದಲಿಗೆ ಅಂಟುವಾಳವನ್ನು ಬಳಸಬಹುದು. ವಿಶೇಷವಾಗಿ ನೊರೆಕಾಯಿ ಅಥವಾ ಅಂಟುವಾಳ ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಟುವಾಳದಲ್ಲಿ ಕಬ್ಬಿಣಾಂಶವು ಹೇರಳವಾಗಿ ಕಂಡುಬರುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇದಲ್ಲದೆ ಇದರಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದರ ಸಹಾಯದಿಂದ ಕೂದಲಿನ ಬಹುತೇಕ ಸಮಸ್ಯೆಗಳನ್ನು ಪರಿಹರಿಸಬಹುದು.
ನೊರೆಕಾಯಿಯ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ತಲೆಹೊಟ್ಟು, ತುರಿಕೆ ಮತ್ತು ನೆತ್ತಿಯ ಸೋಂಕುಗಳು ಭಾದಿಸುವ ಸಂಭವವನ್ನು ಕಡಿಮೆ ಮಾಡುತ್ತದೆ. ಮತ್ತು ನೆತ್ತಿಯ ಮೇಲೆ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ನೆತ್ತಿಯ ಮೇಲೆ ರಕ್ತ ಪರಿಚಲನೆಯನ್ನು ಸುಧಾರಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ನೊರೆಕಾಯಿ ಹೊಂದಿದೆ. ಇದು ವಿಟಮಿನ್ ಸಿ ಯನ್ನು ಸಹ ಹೊಂದಿದೆ. ಇದು ಕೂದಲು ಕಿರುಚೀಲಗಳನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ನಿಯಮಿತವಾದ ಬಳಕೆಯು ಸೊಂಪಾದ ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಸಲ್ಫೇಟ್, ಪ್ಯಾರಬೆನ್ ಮತ್ತು ಸಿಲಿಕೋನ್ ಗಳಂತಹ ಕಠಿಣ ರಾಸಾಯನಿಕಗಳನ್ನು ಒಳಗೊಂಡಿರುವ ಶ್ಯಾಂಪೂಗಳು ಕೂದಲಿಗೆ ಬಹಳ ಹಾನಿಕಾರಕವಾಗಿದೆ. ಅದರ ಬದಲು ನೀವು ನೊರೆಕಾಯಿಯನ್ನು ಶಾಂಪೂ ರೀತಿಯಲ್ಲಿ ಬಳಸಬಹುದು. ಇದು ನಿಯಮಿತ ಕೂದಲ ರಕ್ಷಣೆಗೆ ಸುರಕ್ಷಿತ ಆಯ್ಕೆಯಾಗಿದೆ.
ನೊರೆಕಾಯಿಯನ್ನು ನೈಸರ್ಗಿಕ ಕಂಡಿಷನರ್ ಆಗಿ ಬಳಸಬಹುದು. ಇದು ಕೂದಲನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ನೈಸರ್ಗಿಕ ಸಪೋನಿನ್ ಅಂಶಗಳು ನೆತ್ತಿಯನ್ನು ಸ್ವಚ್ಛಗೊಳಿಸಲು ಮತ್ತು ಹೆಚ್ಚುವರಿ ಎಣ್ಣೆ, ಕೊಳೆಯನ್ನು ತಗೆದುಹಾಕಲು ಸಹಾಯ ಮಾಡುತ್ತದೆ. ಮತ್ತು ಕೂದಲನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಅಂಟುವಾಳವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ತಲೆಹೊಟ್ಟು ನಿಯಂತ್ರಿಸಲು ಮತ್ತು ನೆತ್ತಿಯ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಹಾಗೂ ಇದು ನೆತ್ತಿಯ ಉಷ್ಣತೆಯನ್ನು ಶಮನಗೊಳಿಸಲು ಮತ್ತು ತುರಿಕೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಅಂಟುವಾಳ ಕಾಯಿಯ ಪ್ರಯೋಜನಗಳು: ಮನೆ ಮತ್ತು ವೈಯಕ್ತಿಕ ಆರೈಕೆಯ ನೈಸರ್ಗಿಕ ಪರ್ಯಾಯ
ನೊರೆಕಾಯಿ ನೈಸರ್ಗಿಕ ವರ್ಣದ್ರವ್ಯಗಳನ್ನು ಹೊಂದಿದ್ದು, ಅದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಅಲ್ಲದೆ ಇದು ಕೂದಲಿನ ನೈಸರ್ಗಿಕ ಬಣ್ಣ ಮತ್ತು ಹೊಳಪನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ಅಂಟುವಾಳದಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೇಸಿಯಮ್ ನಂತಹ ಖನಿಜಗಳಿವೆ. ಇದು ಕೂದಲನ್ನು ಬಲಪಡಿಸಲು ಮತ್ತು ಸೀಳು ಕೂದಲಿನ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಕೂದಲ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕೂದಲಿನ ರಕ್ಷಣೆಗೆ ನೊರೆಕಾಯಿಯನ್ನು ಹೇಗೆ ಬಳಸುವುದು:
ಒಂದು ಕೈಬೆರಳೆಣಿಕೆಯಷ್ಟು ನೊರೆಕಾಯಿಗಳನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ಈ ನೀರನ್ನು ಸಾಮಾನ್ಯವಾಗಿ ಕೂದಲು ತೊಳೆಯಲು ಬಳಸುವ ಶಾಂಪೂ ಬದಲಾಗಿ ಬಳಸಬಹುದು.
ಇದಕ್ಕಾಗಿ ನೀವು ಸ್ವಲ ನೊರಕಾಯಿ ಬೀಜಗಳನ್ನು ನುಣ್ಣಗೆ ಪಡಿಮಾಡಿ ಇಟ್ಟುಕೊಳ್ಳಿ. ನಂತರ ಇದನ್ನು ನೀರಿನೊಂದಿಗೆ ಮಿಶ್ರಣ ಮಾಡಿ, ದಪ್ಪ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ನಿಧಾನವಾಗಿ ಮಸಾಜ್ ಮಾಡಿದ ಬಳಿಕ ಕೂದಲನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: