Boost Stamina: ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

ದೇಹದಲ್ಲಿ ತ್ರಾಣವಿಲ್ಲದಿದ್ದರೆ ಆಗಾಗ ನಿಮಗೆ ಆಯಾಸವಾಗುತ್ತದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ತ್ರಾಣವನ್ನು ಹೆಚ್ಚಿಸಲು ಪ್ರಯತ್ನಿಸಬಹುದು.

Boost Stamina: ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ
ಸಂಗ್ರಹ ಚಿತ್ರ
Edited By:

Updated on: Sep 23, 2021 | 1:08 PM

ಶಕ್ತಿ ಅಥವಾ ತ್ರಾಣವು ದೇಹ ದೀರ್ಘಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯವಾಗಿದೆ. ಇದು ದೇಹದಲ್ಲಿನ ಯಾವುದೇ ಚಟುವಟಿಕೆಗೆ ಇರುವ ಶಾಶ್ವತ ಅಂಶವಾಗಿದೆ. ಮಾನಸಿಕ ಮತ್ತು ದೈಹಿಕ ಕಾರ್ಯವನ್ನು ದೀರ್ಘಕಾಲದವರೆಗೆ ನಿರ್ವಹಿಸಲು ತ್ರಾಣವು ಸಹಾಯ ಮಾಡುತ್ತದೆ. ಹೆಚ್ಚಿನ ತ್ರಾಣವನ್ನು(stamina) ಹೊಂದಿರುವುದು ನೀವು ಹೆಚ್ಚು ದಕ್ಷರಾಗಲು ಸಹಾಯ ಮಾಡುತ್ತದೆ. ದೇಹದಲ್ಲಿ ತ್ರಾಣವಿಲ್ಲದಿದ್ದರೆ ಆಗಾಗ ನಿಮಗೆ ಆಯಾಸವಾಗುತ್ತದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ತ್ರಾಣವನ್ನು ಹೆಚ್ಚಿಸಲು ಪ್ರಯತ್ನಿಸಬಹುದು. ತ್ರಾಣವನ್ನು ಹೆಚ್ಚಿಸಲು ಯಾವ ಕ್ರಮಗಳನ್ನು ಅನುಸರಿಸಬಹುದು ಎಂಬ ಪ್ರಶ್ನೆ ಇದ್ದರೆ, ಅದಕ್ಕೆ ಉತ್ತರ ಇಲ್ಲಿದೆ.

ತ್ರಾಣವನ್ನು ಅಥವಾ ದೇಹದ ಶಕ್ತಿ ಹೆಚ್ಚಿಸಲು ಈ ಸಲಹೆಗಳನ್ನು ಅನುಸರಿಸಿ

ದಿನವೂ ವ್ಯಾಯಾಮ ಮಾಡಿ
ತ್ರಾಣವನ್ನು ಹೆಚ್ಚಿಸುವ ಅತ್ಯುತ್ತಮ ಮಾರ್ಗವೆಂದರೆ ನಿಯಮಿತವಾದ ವ್ಯಾಯಾಮ. ನಿಯಮಿತವಾದ ವ್ಯಾಯಾಮವು ತ್ರಾಣವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಸಮತೋಲಿತ ಆಹಾರವನ್ನು ಸೇವಿಸಿ
ಆಹಾರ ಸೇವನೆಯು ದೇಹದ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕ ಆಹಾರ ಸೇವಿಸಿ. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಿ. ಏಕೆಂದರೆ ಇವು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ತ್ವರಿತ ಆಹಾರ ಮತ್ತು ಸಕ್ಕರೆಯುಕ್ತ ಜ್ಯೂಸ್​ ಅನ್ನು ಹೆಚ್ಚು ಅವಲಂಬಿಸಬೇಡಿ.

ಸಾಕಷ್ಟು ನೀರು ಕುಡಿಯಿರಿ
ಕಡಿಮೆ ನೀರು ಕುಡಿಯುವುದು ನಿಮ್ಮನ್ನು ನಿರ್ಜಲೀಕರಣ ಮತ್ತು ಸುಸ್ತಾಗುವಂತೆ ಮಾಡುತ್ತದೆ. ಹೈಡ್ರೇಟೆಡ್ ಆಗಿರುವುದು ದೇಹಕ್ಕೆ ಪ್ರಯೋಜನಕಾರಿ. ನೀರಿನ ಹೊರತಾಗಿ, ನೀವು ಎಳನೀರು ಮತ್ತು ನಿಂಬೆ ಹಣ್ಣಿನ ಜ್ಯೂಸ್​ ಇತ್ಯಾದಿಗಳನ್ನು ಕುಡಿಯಬಹುದು. ಅವುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಯೋಗ ಮತ್ತು ಧ್ಯಾನ ಮಾಡಿ
ಕಡಿಮೆ ಶಕ್ತಿಯ ಮಟ್ಟಕ್ಕೆ ಮುಖ್ಯ ಕಾರಣವೆಂದರೆ ಒತ್ತಡ. ಒತ್ತಡದ ಜೀವನಶೈಲಿ ನಿಮ್ಮ ತ್ರಾಣವನ್ನು ಕಡಿಮೆ ಮಾಡಬಹುದು. ಇದರಿಂದ ನೀವು ಹೆಚ್ಚು ಸುಲಭವಾಗಿ ಸುಸ್ತಾಗುತ್ತೀರಿ. ಯೋಗ ಮತ್ತು ಧ್ಯಾನವು ದೇಹವನ್ನು ವಿಶ್ರಾಂತಿಗೆ ದೂಡುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.

ತ್ರಾಣವನ್ನು ಹೆಚ್ಚಿಸುವ ಈ ಕೆಳಕಂಡ ಆಹಾರಗಳನ್ನು ಸೇವಿಸಿ

ಬಾಳೆಹಣ್ಣು
ಬಾಳೆಹಣ್ಣು  ಆರೋಗ್ಯಕರ ಹಣ್ಣು. ಇದರ ಪೋಷಕಾಂಶಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ. ನಿಮ್ಮ ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ವ್ಯಾಯಾಮ ಮಾಡುವ ಮೊದಲು ಬಾಳೆಹಣ್ಣು ತಿನ್ನಿರಿ.

ಕಂದು ಅಕ್ಕಿ
ಕಾರ್ಬೋಹೈಡ್ರೇಟ್‌ಗಳ ಮೂಲವಾಗಿ ಕಂದು ಅಕ್ಕಿಗೆ ಬದಲಿಸಿ. ಬಿಳಿ ಅಕ್ಕಿಗಿಂತ ಕಂದು ಅಕ್ಕಿಯನ್ನು ಕಡಿಮೆ ಸಂಸ್ಕರಿಸಲಾಗುತ್ತದೆ. ಇದು ನಿಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ನವಣೆ 
ನವಣೆ  ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಅಮೈನೋ ಆಸಿಡ್, ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿವೆ. ಇದು ಸಾಮಾನ್ಯ ಸಿರಿಧಾನ್ಯಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಾಫಿ
ಕಾಫಿ ನಿಮ್ಮ ತ್ರಾಣವನ್ನು ಕೂಡ ಹೆಚ್ಚಿಸುತ್ತದೆ. ಕೆಫೀನ್ ಅಡ್ರಿನಾಲಿನ್ ಅನ್ನು ಬಿಡುಗಡೆ ಮಾಡುತ್ತದೆ ಮತ್ತು ಸ್ನಾಯುಗಳಿಗೆ ರಕ್ತವನ್ನು ವೇಗವಾಗಿ ಪಂಪ್ ಮಾಡಲು ಸಹಾಯ ಮಾಡುತ್ತದೆ. ಇದು ವೇಗವಾಗಿ ಶಕ್ತಿಯನ್ನು ಉತ್ಪಾದಿಸುತ್ತದೆ. ಬ್ಲಾಕ್​ ಕಾಫಿಯನ್ನು ಆರಿಸಿಕೊಳ್ಳಿ, ಏಕೆಂದರೆ ಇದು ಕಡಿಮೆ ಕ್ಯಾಲೋರಿ ಹೊಂದಿದೆ.

ಇದನ್ನೂ ಓದಿ:
Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು

(Stamina booster follow these steps to improve stamina)