Relationship: ರೊಮ್ಯಾಂಟಿಕ್ ರಿಲೇಷನ್ಶಿಪ್ನಲ್ಲಿ ಫಸ್ಟ್ ಇಂಪ್ರೆಷನ್ ಎಂಬುದೇ ಬೆಸ್ಟ್, ಸಂಬಂಧ ಉತ್ತಮವಾಗಿರಲು ಏನು ಮಾಡಬೇಕು?
ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್ ಎನ್ನುವ ಮಾತಿನಂತೆ ರೊಮ್ಯಾಂಟಿಕ್ ರಿಲೇಷನ್ಶಿಪ್ನಲ್ಲಿ ಫಸ್ಟ್ ಇಂಪ್ರೆಷನ್ ಎಂಬುದು ಮುಖ್ಯಪಾತ್ರವಹಿಸುತ್ತದೆ.
ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್ ಎನ್ನುವ ಮಾತಿನಂತೆ ರೊಮ್ಯಾಂಟಿಕ್ ರಿಲೇಷನ್ಶಿಪ್ನಲ್ಲಿ ಫಸ್ಟ್ ಇಂಪ್ರೆಷನ್ ಎಂಬುದು ಮುಖ್ಯಪಾತ್ರವಹಿಸುತ್ತದೆ. ನೀವು ಮೊದಲು ಸಂಗಾತಿಯನ್ನು ಯಾವ ರೀತಿ ಇಂಪ್ರೆಸ್ ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಸಂಗಾತಿಯ ನಿರ್ಧಾರವು ನಿಂತಿರುತ್ತದೆ. ಡೇಟ್ಗೆ ಹೋಗುವವರೆಲ್ಲರೂ ಮದುವೆಯಾಗಬೇಕೆಂದೇನಿಲ್ಲ, ಎಲ್ಲೋ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೂ ಸಾಕು ಅಲ್ಲೇ ಬ್ರೇಕ್ ಅಪ್. ಆದರೆ ರೊಮ್ಯಾಂಟಿಕ್ ರಿಲೇಷನ್ಶಿಪ್ ಎನ್ನುವ ವಿಚಾರಕ್ಕೆ ಬಂದರೆ ಮೊದಲ ಇಂಪ್ರೆಷನ್ ಮುಖ್ಯವಾಗುತ್ತದೆ. ಈ ಅಧ್ಯಯನವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನ ಪ್ರೊಸೀಡಿಂಗ್ಸ್ ನಲ್ಲಿ ಪ್ರಕಟಿಸಲಾಗಿದೆ.
ನೀವು ನಿಮ್ಮ ಲೈಫ್ ಪಾರ್ಟ್ನರ್ ಅನ್ನು ಹುಡುಕುತ್ತಿದ್ದರೆ, ಮೊದಲ ಇಂಪ್ರೆಷನ್ ಮೇಲೆಯೇ ನಿಮ್ಮ ಮುಂದಿನ ನಡೆಯು ನಿರ್ಧಾರವಾಗುತ್ತದೆ. ಪ್ರೀತಿಯ ಆರಂಭಿಕ ಹಂತದ ನಂತರ ಸಂಬಂಧವು ಸುಂದರವಾಗಿ ಮತ್ತು ದೀರ್ಘಕಾಲ ಉಳಿಯಲು ಇಬ್ಬರ ಕಡೆಯಿಂದ ಅಪಾರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.
ಪ್ರೀತಿಮಾಡುವಾಗ ತಪ್ಪಿಸಬೇಕಾದ ವಿಷಯಗಳು ನಾವು ಆಗಾಗ, ಗೊತ್ತಿಲ್ಲದೆ ಸಂಬಂಧದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡುತ್ತಿದ್ದೇವೆ. ನಾವು ನಮ್ಮ ಸಂಗಾತಿಯೊಂದಿಗೆ ವರ್ತಿಸುವ ಅಥವಾ ನಡೆಸಿಕೊಳ್ಳುವ ರೀತಿಯು ಸಂಬಂಧದ ವಾತಾವರಣ ಮತ್ತು ಭಾವನೆಯನ್ನು ಖಚಿತಪಡಿಸುತ್ತದೆ.
ನಾವು ಬಹಳಷ್ಟು ಬಾರಿ ಸಾಕಷ್ಟು ದೂರು ನೀಡಿದಾಗ ಮತ್ತು ಕಡಿಮೆ ಸಂವಹನ ನಡೆಸಿದಾಗ, ಸಂಗಾತಿಗೆ ಹಿಂತಿರುಗಲು ಇದು ತುಂಬಾ ಕಷ್ಟಕರವಾಗಬಹುದು.
ನಿಮ್ಮ ಜತೆ ಡೇಟಿಂಗ್ಗೆ ಬರುವ ವ್ಯಕ್ತಿಯು ಒಂದೊಮ್ಮೆ ನಿಮ್ಮ ಮಾತನ್ನು ಆಲಿಸಲು ಇಷ್ಟ ಪಡದೇ ಕೇವಲ ತಾನೆ ಮಾತನಾಡುತ್ತಿದ್ದರೆ ಒಮ್ಮೆ ನೀವು ಯೋಚನೆ ಮಾಡಲೇಬೇಕು.
ನಿಮ್ಮ ಸಂಗಾತಿಯಾಗುವವರು ನಿಮ್ಮ ಭಾವನೆಗಳಿಗೂ ಬೆಲೆ ಕೊಡಬೇಕು, ನಿಮ್ಮ ಮಾತುಗಳನ್ನು ಆಲಿಸಲು ಕೂಡ ಇಷ್ಟಪಡಬೇಕು. ಅಧ್ಯಯನವು 6600 ಸ್ಪೀಡ್ ಡೇಟ್ಸ್ಗಳನ್ನು ಒಳಗೊಂಡಿತ್ತು.
ನಮ್ಮ ಸಂಗಾತಿಯ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ನಾವು ಸಾಮಾನ್ಯವಾಗಿ ಊಹಿಸುತ್ತೇವೆ. ನಾವು ಪ್ರೀತಿಯ ಬಗ್ಗೆ ಸಾಕಷ್ಟು ಕನಸ್ಸನ್ನು ಹೊಂದಿದ್ದೇವೆ, ಅದು ವಾಸ್ತವದಲ್ಲಿ ಹೆಚ್ಚು ಕಷ್ಟವಾಗಿರುತ್ತದೆ.
ಏಕೆಂದರೆ ನಿಜ ಜೀವನದ ಪ್ರೀತಿ ಎಂಬುದು ನಾವು ಸಿನಿಮಾದಲ್ಲಿ ನೋಡುವ ಪ್ರಕಾರವಲ್ಲ. ನಿಜ ಜೀವನದ ಪ್ರೀತಿಯಲ್ಲಿ ಏಳು ಬಿಳು ಕಷ್ಟಗಳನ್ನ ಒಳಗೊಂಡಿವೆ, ಒಳ್ಳೆಯ ಸಮಯಗಳಿವೆ, ಕಷ್ಟದ ಸಮಯಗಳಿವೆ ಮತ್ತು ಅದರಲ್ಲಿ ತೊಡಗಿರುವ ಇಬ್ಬರು ರಾಜಿ ಮಾಡಿಕೊಳ್ಳಲು, ಸಂವಹನ ನಡೆಸಲು ಮತ್ತು ಅದನ್ನು ಮುಂದುವರಿಸಲು ಪ್ರಯತ್ನಗಳನ್ನು ಮಾಡಲು ಸಿದ್ಧರಾದಾಗ ದಾರಿ ಸುಲಭವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ