ಪ್ರವಾಸ ಎಂಬುದು ಕೇವಲ ಆ ಕ್ಷಣಕ್ಕೆ ಸಂತಸವನ್ನು ನೀಡುವುದಷ್ಟೇ ಅಲ್ಲದೆ ಮಾನಸಿಕ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಹೌದು, ಒಂದು ದಿನ ರಜೆ ಇದ್ದರೆ ನೀವು ಎಲ್ಲಾದರೂ ಟ್ರಿಪ್ಗೆ ಹೋಗಿ ಇಡೀ ದಿನ ಎಂಜಾಯ್ ಮಾಡುತ್ತೀರ.
ಟ್ರಿಪ್ ಇಂದ ಬಂದ ಬಳಿಕವೂ ತಿಂಗಳುಗಟ್ಟಲೇ ಅದೇ ಗುಂಗಿನಲ್ಲಿ ಇರುತ್ತೀರಿ ಆಗ ನಿಮಗೆ ಯಾವ ಮಾನಸಿಕ ಸಮಸ್ಯೆಯೂ ಉಂಟಾಗುವುದಿಲ್ಲ, ಹೀಗಾಗಿ ಪ್ರವಾಸವು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ. ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ, ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. ವಸ್ತು, ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ ವಿಶ್ಲೇಷಿಸಬಲ್ಲ. ಹೀಗಾಗಿ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.
ಸಂಶೋಧಕರಾದ ಡಾ. ಜೂನ್ ಎಂಬುವವರು ಈ ಬಗ್ಗೆ ಸಂಶೋಧನೆ ಮಾಡಿದ್ದು, ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು, ಡೈಮೆನ್ಷಿಯಾದಿಂದ ಬಳಲುತ್ತಿರುವವರಿಗೆ ಸಹಾಯವಾಗುವಂತೆ ಮಾಡಬೇಕು. ಮ್ಯೂಸಿಕ್ ಥೆರಪಿ, ವ್ಯಾಯಾಮ, ಸೆನ್ಸರಿ ಸ್ಟಿಮ್ಯುಲೇಷನ್ ಥೆರಪಿಯನ್ನು ನಡೆಸಬೇಕಿದೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿನ ಬಳಿಕ ಕೆಲವರು ಹೆಚ್ಚೆಚ್ಚು ಕಡೆ ಪ್ರವಾಸಕ್ಕೆ ತೆರಳುವ ಮನಸ್ಸು ಮಾಡುತ್ತಿದ್ದರೆ, ಇನ್ನೂ ಕೆಲವರು ಖಿನ್ನತೆಯಿಂದ ಹೊರಬರಲಾದರೆ ಮನೆಯಲ್ಲಿಯೇ ಕುಳಿತಿದ್ದಾರೆ.
ಪ್ರವಾಸೋದ್ಯಮದ ಉದ್ದೇಶ ಪ್ರವಾಸ ಹಾಗೂ ಫನ್ ಮಾತ್ರವಾಗಿರದೆ ಮಾನಸಿಕ ಆರೋಗ್ಯವನ್ನು ಸರಿಪಡಿಸುವ ಅಥವಾ ಉತ್ತಮವಾಗಿರಿಸುವಂತೆ ಮಾಡಬೇಕು ಎಂದು ಸಂಶೋಧಕರು ಹೇಳಿದ್ದಾರೆ.