Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್​ ಅಧಿಕಾರಿ!

|

Updated on: Oct 13, 2023 | 3:55 PM

ರಾಮ್ ಭಜನ್ ಅವರು ಕಡು ಬಡತನದಲ್ಲಿ ಹುಟ್ಟಿ ಬೆಳೆದರು. ತನ್ನನ್ನು ಮತ್ತು ತನ್ನ ತಾಯಿಯ ಹೊಟ್ಟೆಪಾಡಿಗಾಗಿ ಅವರು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ರಾಮ್ ಭಜನ್ ದಿನಕ್ಕೆ 10 ರೂ. ದಿನಗೂಲಿ ಪಡೆಯುತ್ತಿದ್ದರು. ಆ ಸಂಪಾದನೆಯಿಂದ ಮಧ್ಯಾಹ್ನದ ಊಟವನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.

Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್​ ಅಧಿಕಾರಿ!
ರಾಮ್ ಭಜನ್
Follow us on

ರಾಜಸ್ಥಾನ: ಯುಪಿಎಸ್​ಸಿ ಪರೀಕ್ಷೆಯಲ್ಲಿ (UPSC Exam) ಪಾಸ್ ಆಗುವುದೆಂದರೆ ಸಣ್ಣ ಮಾತಲ್ಲ. ಎಷ್ಟೋ ಜನರು ಈ ಪರೀಕ್ಷೆಗಾಗಿ ಹಲವಾರು ವರ್ಷ ಟ್ಯೂಷನ್​ ಕೂಡ ಪಡೆದು, ದಿನವಿಡೀ ಓದಿಗೆ ಮೀಸಲಿಟ್ಟು ಅಧ್ಯಯನ ಮಾಡುತ್ತಾರೆ. ಆದರೂ ಪಾಸ್ ಆಗಲು ಸಾಧ್ಯವಾಗುವುದಿಲ್ಲ. ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನೀವು ಯಾವ ಮಟ್ಟಿಗೆ ನಿಮ್ಮನ್ನು ಓದಿನಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ಯಾವ ರೀತಿಯಲ್ಲಿ ಓದುತ್ತೀರಿ ಎಂಬುದೆರಡೂ ಮುಖ್ಯವಾಗುತ್ತದೆ. ರಾಜಸ್ಥಾನದ (Rajasthan) ಮಾಜಿ ದಿನಗೂಲಿ ಕಾರ್ಮಿಕರೊಬ್ಬರು 2022ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಐಎಎಸ್​ (IAS)  ಅಧಿಕಾರಿಯಾಗಿದ್ದಾರೆ.

ಐಎಎಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಾಜಿ ದಿನಗೂಲಿ ನೌಕರ ರಾಮ್ ಭಜನ್ ಕುಮ್ಹರಾ ತಮ್ಮನ್ನು ಯಾವ ಉದ್ಯೋಗಕ್ಕೆ ನಿಯೋಜನೆ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ. ರಾಜಸ್ಥಾನದ ಬಾಪಿ ಗ್ರಾಮದವರಾದ ರಾಮ್ ಭಜನ್ ಕುಮ್ಹರಾ ಅವರು ತಮ್ಮ ತಾಯಿಯ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಸ್ವಂತ ಮನೆ ಕೂಡ ಇಲ್ಲ. 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಮ್ ಭಜನ್ 667ನೇ ರ್ಯಾಂಕ್​ನಲ್ಲಿ ಉತ್ತೀರ್ಣರಾಗಿದ್ದು, ಉದ್ಯೋಗ ಸಿಕ್ಕರೆ ಸ್ವಂತದ್ದೊಂದು ಮನೆ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ.

ಇದನ್ನೂ ಓದಿ: Success Story: ಕೃಷಿ ಮಾಡ್ತೀನಿ ಅಂತ ನಿಂತ ಮಗ; ಹೊರಗೆ ಹೋಗಿ ಸಂಪಾದಿಸು ಎಂದ ಅಪ್ಪ-ಅಮ್ಮ; ಇವತ್ತು ಆ ಮಗ ಸಿಇಒ; ಇದು ಬಾಲಸುಬ್ರಮಣಿಯನ್ ಕಥೆ

ರಾಮ್ ಭಜನ್ ಅವರು ಕಡು ಬಡತನದಲ್ಲಿ ಹುಟ್ಟಿ ಬೆಳೆದರು. ತನ್ನನ್ನು ಮತ್ತು ತನ್ನ ತಾಯಿಯ ಹೊಟ್ಟೆಪಾಡಿಗಾಗಿ ಅವರು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ದಿನವೂ ಕಲ್ಲುಗಳನ್ನು ಪುಡಿ ಮಾಡುವ ಕೆಲಸ ಮಾಡುತ್ತಿದ್ದರು. ಒಡೆದ ಕಲ್ಲುಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ಅವರ ತಾಯಿ ಕಲ್ಲುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದರು. ರಾಮ್ ಭಜನ್ ದಿನಕ್ಕೆ 10 ರೂ. ದಿನಗೂಲಿ ಪಡೆಯುತ್ತಿದ್ದರು. ಆ ಸಂಪಾದನೆಯಿಂದ ಮಧ್ಯಾಹ್ನದ ಊಟವನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ರಾಮ್ ಭಜನ್ ಅವರ ತಂದೆ ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಸ್ತಮಾದಿಂದ ನಿಧನರಾದರು. ಅವರು ಸಾಯುವ ಮೊದಲು ಅವರ ಮನೆಯವರು ಜೀವನಕ್ಕಾಗಿ ಮೇಕೆಗಳ ಹಾಲನ್ನು ಮಾರಾಟ ಮಾಡುತ್ತಿದ್ದರು. ಅವರ ತಂದೆಯ ಮರಣದ ನಂತರ, ರಾಮ್ ಭಜನ್ ಅವರ ಕುಟುಂಬವು ಮೇಕೆಗಳನ್ನು ಸಾಕಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ತನ್ನ ತಾಯಿಗೆ ಒಂದು ಮನೆ ಕಟ್ಟಿಸಿಕೊಡಬೇಕೆಂಬ ಕನಸು ರಾಮ್ ಅವರದ್ದು.

ಇದನ್ನೂ ಓದಿ: ಬೀದಿಬದಿ ನಿಂತು ತನ್ನದೇ ಕಾದಂಬರಿಯ 4,500 ಪ್ರತಿಗಳನ್ನು ಮಾರಾಟ ಮಾಡಿದ ಯುವ ಲೇಖಕ; ಮೊಯೀನ್ ವಿಎನ್ ಸ್ಫೂರ್ತಿ ಕಥೆ!

ಕೊನೆಗೆ ರಾಮ್ ಅವರಿಗೆ ದೆಹಲಿ ಪೋಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಕೆಲಸ ಸಿಕ್ಕಿತು. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರು UPSC ಪರೀಕ್ಷೆಗಳಲ್ಲಿ ಆಸಕ್ತಿ ವಹಿಸಿದರು. ಹೇಗಾದರೂ ಮಾಡಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಬೇಕೆಂದು ಕಾನ್ಸ್​ಟೇಬಲ್ ಕೆಲಸ ಮುಗಿದ ಬಳಿಕ ಓದತೊಡಗಿದರು. 2022ರಲ್ಲಿ ತಮ್ಮ 8ನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್ ಮಾಡಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ