Sugar Myths: ಸಕ್ಕರೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕುತೂಹಲಕಾರಿ ವಿಷಯ ಇಲ್ಲಿದೆ, ಯಾವ ಸಕ್ಕರೆ ಆರೋಗ್ಯಕ್ಕೆ ಉತ್ತಮ
ಸಕ್ಕರೆ ಸ್ವತಃ ಅನಾರೋಗ್ಯಕರವಲ್ಲದಿದ್ದರೂ, ಅದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದರೆ ಸೇರಿಸಿದ ಸಕ್ಕರೆಯನ್ನು ಸೇವಿಸುವುದಕ್ಕಿಂತ ನೈಸರ್ಗಿಕ ಸಕ್ಕರೆಯನ್ನು ಸೇವಿಸುವುದು ಉತ್ತಮ.
ಸಕ್ಕರೆ (Sugar) ಸ್ವತಃ ಅನಾರೋಗ್ಯಕರವಲ್ಲದಿದ್ದರೂ, ಅದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದರೆ ಸೇರಿಸಿದ ಸಕ್ಕರೆಯನ್ನು ಸೇವಿಸುವುದಕ್ಕಿಂತ ನೈಸರ್ಗಿಕ ಸಕ್ಕರೆಯನ್ನು ಸೇವಿಸುವುದು ಉತ್ತಮ. ಈ ಹೇಳಿಕೆಯನ್ನು ಪ್ರಸಿದ್ಧ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಸಹ ಬೆಂಬಲಿಸಿದ್ದಾರೆ. ಅವರ ಪ್ರಕಾರ ಸಕ್ಕರೆಯು ಜ್ಯೂಸ್, ಕೋಲಾಗಳು, ಚಾಕಲೇಟ್‌ಗಳು, ಕೇಕ್, ಸಿರಿಧಾನ್ಯ, ಜಾಮ್, ಕೆಚಪ್, ಬಿಸ್ಕೆಟ್ ಇತ್ಯಾದಿಗಳಂತಹ ಪ್ಯಾಕೇಜ್ಡ್ ಮತ್ತು ಸಂಸ್ಕರಿಸಿದ ಆಹಾರದ ರೂಪದಲ್ಲಿ ಬಂದರೆ ಅದನ್ನು ಬಿಟ್ಟುಬಿಡಬೇಕು. ಸಕ್ಕರೆಯನ್ನು ಮನೆಯಲ್ಲಿಯೇ ತಯಾರಿಸಿದ ಆಹಾರಗಳಾದ ಚಹಾ, ಕಾಫಿ, ಲಡ್ಡು ಹಾಗೂ ಇತರ ತಿನಿಸುಗಳಲ್ಲಿ ಸೇರಿಸಬಹುದು.
ಸಕ್ಕರೆಯ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ಮಾಹಿತಿಗಳು ಇಲ್ಲಿವೆ:
ಎಲ್ಲ ಸಕ್ಕರೆಯೂ ಕೆಟ್ಟ ಸಕ್ಕರೆಯೇ ಎಂಬ ಮಾತನ್ನು ನೀವು ಕೇಳಿರಬಹುದು. ಇದರ ಅರ್ಥವೇನೆಂದರೆ ನೀವು ಕಡಿಮೆ ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸಬೇಕು. ನೀವು ಐಸ್‌ಕ್ರೀಮ್, ಸಕ್ಕರೆ ಪಾನೀಯಗಳು ಮತ್ತು ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಸೇರಿಸಿದ ಸಕ್ಕರೆಯನ್ನು ಕಾಣಬಹುದು. ಇದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಆದರೆ ನೀವು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವ ಆಹಾರವನ್ನು ಸೇವಿಸಬಹುದು. ಇದು ಹಣ್ಣುಗಳು ಅಥವಾ ಡೈರಿ ಉತ್ಪನ್ನಗಳಂತಹ ವಸ್ತುಗಳನ್ನು ಒಳಗೊಂಡಿರುತ್ತದೆ. ಅವುಗಳು ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಿಂದ ಕೂಡಿರುತ್ತದೆ.
ಇದನ್ನು ಓದಿ:Sugar: ಒಂದು ತಿಂಗಳು ಸಕ್ಕರೆ ಸೇವನೆ ನಿಲ್ಲಿಸಿದರೆ ಏನಾಗುತ್ತೆ? ತಜ್ಞರ ಮಾಹಿತಿ ಇಲ್ಲಿದೆ
ಅನೇಕ ಜನರು ನಿಮ್ಮ ಜೀವನದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ಕಡಿಗೊಳಿಸಬೇಕೆಂದು ಹೇಳುತ್ತಾರೆ. ಅದಾಗ್ಯೂ ವಾಸ್ತವದಲ್ಲಿ 2,000 ಕ್ಯಾಲೋರಿ ಸೇವನೆಯೊಂದಿಗೆ ವಯಸ್ಕರರಿಗೆ 50 ಗ್ರಾಂ ಸಕ್ಕರೆಯನ್ನು ಅಮೇರಿಕನ್ ಡಯಟರಿ ಮಾರ್ಗಸೂಚಿಗಳು ಶಿಫಾರಸು ಮಾಡುತ್ತವೆ. ಆದರೆ, ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮಹಿಳೆಯರು 25ಗ್ರಾಂ ಅಥವಾ 6 ಟೀ ಚಮಚ ಸಕ್ಕರೆಯನ್ನು ಸೇವಿಸಬೇಕು ಹಾಗೂ ಪುರುಷರು ದಿನಕ್ಕೆ 36 ಗ್ರಾಂ ಅಥವಾ 9 ಟೀ ಚಮಚ ಸಕ್ಕರೆಯನ್ನು ಸೇವಿಸಬೇಕು ಎಂದು ಸೂಚಿಸುತ್ತದೆ.
ಹೆಚ್ಚಿನ ಸಕ್ಕರೆ ಸೇವನೆಯು ಹೃದ್ರೋಗ, ಆಲ್ಝೆಮರ್ ಅಥವಾ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಆದರೆ ‘ಶುಗರ್ ಆಂಡ್ ರಿಸ್ಕ್ ಆಫ್ ಮರ‍್ಟಲಿಟಿ ಇನ್ ದಿ NIH-AARP ಡಯೆಟ್ ಆಂಡ್ ಹೆಲ್ತ್ ಸ್ಟಡಿ’ ಎಂಬ ಅಧ್ಯಯನದ ಪ್ರಕಾರ ಮಧ್ಯಮ ಪ್ರಮಾಣದಲ್ಲಿ ಸಕ್ಕರೆ ತಿನ್ನುವುದು ನಿಮಗೆ ಹಾನಿ ಉಂಟು ಮಾಡುವುದಿಲ್ಲ. ಸಕ್ಕರೆ ಸೇವಿಸಿದ 350,000 ವಯಸ್ಕರರಿಗೆ ಸಾವಿನ ಹೆಚ್ಚಿನ ಅಪಾಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನವು ತೀರ್ಮಾನಿಸಿದೆ.
ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಪ್ರಕಟವಾದ 2017ರ ಅಧ್ಯಯನವೊಂದರ ಪ್ರಕಾರ ಸಕ್ಕರೆಯ ಬದಲಿಗಳಾದ ಸುಕ್ರಲೋಸ್ ಮತ್ತು ಇತರವುಗಳ ಸೇವನೆಯು ತೂಕವನ್ನು ಕಳೆದುಕೊಳ್ಳುವ ಬದಲು ತೂಕವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ. ಈ ಪರ್ಯಾಯಗಳು ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಹೃದಯಾಘಾತ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಸಕ್ಕರೆಯನ್ನು ಬದಲಾಯಿಸುವ ಬದಲು ಅದನ್ನು ಮಿತವಾಗಿ ಸೇವಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Tue, 17 January 23