Summer Health: ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಲು ಮನೆಯಲ್ಲೇ ಇದೆ ಪರಿಹಾರ

ಬೇಸಿಗೆಯಲ್ಲಿ ನಮ್ಮ ದೇಹದ ಉಷ್ಣತೆ ಹೆಚ್ಚಾಗುವುದು ಸಾಮಾನ್ಯ. ದೇಹದ ಉಷ್ಣತೆ ವಿಪರೀತವಾದರೆ ಅದರಿಂದ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ. ಹೀಗಾಗಿ, ಉಷ್ಣತೆ ಕಡಿಮೆ ಮಾಡಿಕೊಳ್ಳಲು ನಾವು ಸೇವಿಸುವ ಆಹಾರದಲ್ಲಿ ನೀರಿನಂಶ ಹೆಚ್ಚಾಗಿರುವ, ಕೂಲಿಂಗ್ ಗುಣವನ್ನು ಹೊಂದಿದ ವಸ್ತುಗಳನ್ನು ಬಳಸುವುದು ಉತ್ತಮ.

Summer Health: ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಲು ಮನೆಯಲ್ಲೇ ಇದೆ ಪರಿಹಾರ
ಬೇಸಿಗೆಯ ಆಹಾರ

Updated on: Apr 30, 2024 | 12:57 PM

ಈ ವರ್ಷ ತಾಪಮಾನ (Temperature) ಹೆಚ್ಚುತ್ತಲೇ ಇದೆ. ಉಷ್ಣತೆ ಹೆಚ್ಚಾಗಿ ಎಲ್ಲ ರಾಜ್ಯಗಳಲ್ಲೂ ಹೀಟ್​ ವೇವ್ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ (Summer) ನಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ವಿಷಯ. ದೇಹವನ್ನು ತಂಪಾಗಿಟ್ಟುಕೊಳ್ಳಲು ನಾವು ಸೇವಿಸುವ ಆಹಾರಗಳೂ ಸಹಾಯ ಮಾಡುತ್ತವೆ. ಹೀಗಾಗಿ, ಬೇಸಿಗೆಯಲ್ಲಿ ಕರಿದ, ತೀರಾ ಮಸಾಲೆ ಇರುವ, ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸದೇ ಇರುವುದೇ ಉತ್ತಮ. ಬೇಸಿಗೆ ಸಮಯದಲ್ಲಿ ನಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ.

ಹೈಡ್ರೇಟೆಡ್ ಆಗಿರಿ:

ಬೇಸಿಗೆಯಲ್ಲಿ ಹೆಚ್ಚೆಚ್ಚು ನೀರು ಕುಡಿಯಿರಿ. ದ್ರವ ಸೇವನೆಯನ್ನು ಹೆಚ್ಚಿಸಿ. ಎಲೆಕ್ಟ್ರೋಲೈಟ್‌ಗಳನ್ನು ಕಾಪಾಡಿಕೊಳ್ಳಲು ಮತ್ತು ನಿರ್ಜಲೀಕರಣವನ್ನು ತಪ್ಪಿಸಲು ಹೆಚ್ಚು ನೀರು ಕುಡಿಯಿರಿ.

ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ:

ನೇರ ಸೂರ್ಯನ ಬೆಳಕು ಮತ್ತು ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

ಇದನ್ನೂ ಓದಿ: Summer Care: ಸನ್​ಬರ್ನ್ ನಿವಾರಿಸಲು ಬೇಸಿಗೆಯಲ್ಲಿ ಯಾವೆಲ್ಲ ರೀತಿ ಅಲೋವೆರಾ ಬಳಸಬಹುದು?

ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ:

ಮಸಾಲೆಯುಕ್ತ ಆಹಾರದ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ ಅದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಯೋಗ:

ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಪ್ರಾಣಾಯಾಮ, ಧ್ಯಾನವನ್ನು ಮಾಡಿ. ಪ್ರಾಣಾಯಾಮವು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಹಗುರವಾದ ಉಡುಗೆ:

ಬೇಸಿಗೆಯಲ್ಲಿ ದಪ್ಪವಾದ, ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಉಡುಪನ್ನು ಧರಿಸಬೇಡಿ. ಅದರ ಬದಲು ಗಾಳಿಯಾಡಬಲ್ಲ ತಿಳಿ ಬಣ್ಣದ ಕಾಟನ್ ಬಟ್ಟೆ ಧರಿಸಿ. ನಿಮ್ಮ ದೇಹವನ್ನು ಉಸಿರಾಡಲು ಅವಕಾಶ ಮಾಡಿಕೊಡಿ.

ಇದನ್ನೂ ಓದಿ: Summer Tips: ವಿಪರೀತ ಬಿಸಿಲಿನಲ್ಲಿ ಸುರಕ್ಷಿತವಾಗಿರುವುದು ಹೇಗೆ?

ತಂಪಾಗಿಸುವ ಆಹಾರಗಳು:

ದೇಹದ ಉಷ್ಣತೆಯನ್ನು ತಂಪಾಗಿರಿಸಲು ಕಲ್ಲಂಗಡಿ, ಸೌತೆಕಾಯಿಯಂತಹ ಹೈಡ್ರೇಟಿಂಗ್ ಆಹಾರಗಳನ್ನು ಸೇವಿಸಿ. ಇದು ಉತ್ತಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ತಂಪಾದ ಗಿಡಮೂಲಿಕೆಗಳು:

ಹೆಚ್ಚುವರಿ ಶಾಖವನ್ನು ಶಮನಗೊಳಿಸಲು ಪುದೀನಾ ತರಹದ ಗಿಡಮೂಲಿಕೆಗಳನ್ನು ಆರಿಸಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ