Summer Tips: ವಿಪರೀತ ಬಿಸಿಲಿನಲ್ಲಿ ಸುರಕ್ಷಿತವಾಗಿರುವುದು ಹೇಗೆ?

ಮಾನವನ ಆರೋಗ್ಯದ ಮೇಲೆ ಏರುತ್ತಿರುವ ತಾಪಮಾನದ ಪ್ರತಿಕೂಲ ಪರಿಣಾಮದ ದೃಷ್ಟಿಯಿಂದ ಕೇಂದ್ರ ಆರೋಗ್ಯ ಸಚಿವಾಲಯವು ನಿಯಮಿತವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿದೆ. ವಿಪರೀತ ಬಿಸಿಲಿನ ಸಮಯದಲ್ಲಿ ಸುರಕ್ಷಿತವಾಗಿರಲು ಸಲಹೆಗಳನ್ನು ನೀಡುತ್ತಿದೆ. ಹಾಗಾದರೆ, ಅತಿಯಾದ ಬಿಸಿಲಿನಲ್ಲಿ ಯಾವ ರೀತಿಯ ಸುರಕ್ಷತೆಗಳನ್ನು ವಹಿಸಬೇಕು? ಎಂಬ ಕುರಿತು ಮಾಹಿತಿ ಇಲ್ಲಿದೆ.

Summer Tips: ವಿಪರೀತ ಬಿಸಿಲಿನಲ್ಲಿ ಸುರಕ್ಷಿತವಾಗಿರುವುದು ಹೇಗೆ?
ಬೇಸಿಗೆಯ ಅವಧಿ
Follow us
|

Updated on: Apr 19, 2024 | 4:37 PM

ಈಗ ಬೇಸಿಗೆಯ (Summer) ಅವಧಿ ಉತ್ತುಂಗದಲ್ಲಿದೆ. ಬಿಸಿಲಿನ ತಾಪಕ್ಕೆ ಮನೆಯಿಂದ ಹೊರಹೋಗಲು ಕೂಡ ಪರದಾಡುವಂತಾಗಿದೆ. ಶಾಖ ಸಂಬಂಧಿತ ಅನಾರೋಗ್ಯದ ತೀವ್ರ ಸ್ವರೂಪವಾದ ಹೀಟ್ ಸ್ಟ್ರೋಕ್ (Heat Stroke) ಎಲ್ಲೆಡೆ ಆತಂಕ ಮೂಡಿಸಿದೆ. ಬೇಸಿಗೆಯ ಶಾಖವು ತೀವ್ರಗೊಳ್ಳುತ್ತಿದ್ದಂತೆ ಶಾಖದ ಹೊಡೆತವನ್ನು ತಡೆಗಟ್ಟಲು ಸಚಿವಾಲಯವು ಸಲಹೆಗಳನ್ನು ನೀಡುತ್ತಿದೆ. ಹೈಡ್ರೇಟೆಡ್ ಆಗಿರಿ, ರೋಗಲಕ್ಷಣಗಳನ್ನು ಗುರುತಿಸಿ ಮತ್ತು ತುರ್ತು ಸಂದರ್ಭದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದೆ. ಈ ಬಿರು ಬಿಸಿಲಿನಲ್ಲಿ ಸುರಕ್ಷತೆ ವಹಿಸಲು ಏನು ಮಾಡಬೇಕು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಭಾರತ ದೇಶದಲ್ಲಿ ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ. ಶಾಖ ಸಂಬಂಧಿತ ಅನಾರೋಗ್ಯದ ತೀವ್ರ ಸ್ವರೂಪವಾದ ಹೀಟ್ ಸ್ಟ್ರೋಕ್​ನಿಂದ ಉಂಟಾಗುವ ಗಂಭೀರ ತೊಡಕುಗಳನ್ನು ತಡೆಗಟ್ಟಲು ತ್ವರಿತ ಗುರುತಿಸುವಿಕೆಯ ಅಗತ್ಯವಿರುತ್ತದೆ. ಹೆಚ್ಚಿನ ದೇಹದ ಉಷ್ಣತೆ (104°F/40 Cಗಿಂತ ಹೆಚ್ಚು), ಬಿಸಿ ಮತ್ತು ಶುಷ್ಕ ಚರ್ಮ, ಕ್ಷಿಪ್ರ ನಾಡಿಮಿಡಿತ, ಸಿಡಿಯುವ ತಲೆನೋವು, ತಲೆ ತಿರುಗುವಿಕೆ, ವಾಕರಿಕೆ, ಗೊಂದಲ ಮತ್ತು ಪ್ರಜ್ಞಾಹೀನತೆ ಮುಂತಾದ ಲಕ್ಷಣ ಕಾಣಿಸಿಕೊಂಡರೆ ಎಚ್ಚರ ವಹಿಸುವುದು ಅತ್ಯಗತ್ಯ. ಈ ವೇಳೆ ವ್ಯಕ್ತಿಗಳು ಸ್ನಾಯು ಸೆಳೆತ ಮತ್ತು ದೌರ್ಬಲ್ಯವನ್ನು ಸಹ ಅನುಭವಿಸಬಹುದು.

ಇದನ್ನೂ ಓದಿ: ಸುಡು ಬಿಸಿಲಿನ ನಡುವೆ ಚರ್ಮದ ಆರೈಕೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್​​​ ​​​

ಬೇಸಿಗೆಯಲ್ಲಿ ಸುರಕ್ಷಿತವಾಗಿರಲು ಏನು ಮಾಡಬೇಕು?:

– ನಿಮಗೆ ಬಾಯಾರಿಕೆ ಇಲ್ಲದಿದ್ದರೂ ಸಹ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

– ಕೆಫೀನ್ ಮತ್ತು ಆಲ್ಕೋಹಾಲ್​ನ ಅತಿಯಾದ ಸೇವನೆಯನ್ನು ತಪ್ಪಿಸಿ. ಏಕೆಂದರೆ ಅವುಗಳು ನಿರ್ಜಲೀಕರಣಕ್ಕೆ ಕಾರಣವಾಗಬಹುದು.

– ಎಸಿಯನ್ನು ಬಳಸಿ ಅಥವಾ ಗಾಳಿಯನ್ನು ಪ್ರಸಾರ ಮಾಡಲು ಫ್ಯಾನ್‌ಗಳನ್ನು ಬಳಸಿ.

– ಹಗುರವಾದ, ಸಡಿಲವಾದ ಬಟ್ಟೆಗಳನ್ನು ಧರಿಸಿ ಮತ್ತು ಹೊರಾಂಗಣದಲ್ಲಿ ನೆರಳಿನಲ್ಲಿರಿ.

– ಅತಿಯಾದ ಬಿಸಿಲಿನಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ. ನೀವು ದೈಹಿಕ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಬೇಕಾದರೆ, ತಂಪಾದ ಪ್ರದೇಶಗಳಲ್ಲಿ ಆಗಾಗ ವಿರಾಮಗಳನ್ನು ತೆಗೆದುಕೊಳ್ಳಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನಷ್ಟು ಬಿಸಿಗಾಳಿ ಹೆಚ್ಚಳ ಸಾಧ್ಯತೆ: ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ

– ಸೂರ್ಯನ ಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್, ಸನ್​ಗ್ಲಾಸ್ ಮತ್ತು ಅಗಲವಾದ ಅಂಚುಳ್ಳ ಟೋಪಿಯನ್ನು ಧರಿಸಿ. ಹೆಚ್ಚುವರಿ ನೆರಳುಗಾಗಿ ಛತ್ರಿ ಬಳಸಿ.

– ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರ ಮೇಲೆ ನಿಗಾ ಇರಿಸಿ. ಏಕೆಂದರೆ ಅವರು ಬೇಗ ಶಾಖ ಸಂಬಂಧಿತ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ.

– ಮಕ್ಕಳು, ವೃದ್ಧರು ಮತ್ತು ರೋಗಿಗಳಿಗೆ ವಿಶೇಷ ಗಮನ ಕೊಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ