ಬೆಂಗಳೂರಿನಲ್ಲಿ ಇನ್ನಷ್ಟು ಬಿಸಿಗಾಳಿ ಹೆಚ್ಚಳ ಸಾಧ್ಯತೆ: ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ
Karnataka Weather Update: ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿ ಆಗಿ ಬದಲಾಗಿದೆ. ಈ ಬಾರಿ ಬೆಂಗಳೂರಿಗೆ 2 ರಿಂದ 5 ದಿನಗಳವರೆಗೆ ಬಿಸಿಗಾಳಿಯ ಎಫೆಕ್ಟ್ ತಟ್ಟಲಿದೆ. ಇನ್ನು ಒಂದು ವಾರಗಳ ಕಾಲ ಅಲರ್ಟ್ ಆಗಿರುವಂತೆ ಹವಾಮಾನ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಬೆಂಗಳೂರು, ಮಾರ್ಚ್ 03: ರಾಜ್ಯಾದ್ಯಂತ ನೀರಿಗಾಗಿ ಹಾಹಾಕಾರ ಒಂದು ಕಡೆಯಾದರೆ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಬಿಸಿಗಾಳಿ (Heat wave) ಹೆಚ್ಚಳವಾಗಲಿದೆ. ಈ ಬಾರಿ ಬೆಂಗಳೂರಿಗೆ 2 ರಿಂದ 5 ದಿನಗಳವರೆಗೆ ಬಿಸಿಗಾಳಿಯ ಎಫೆಕ್ಟ್ ತಟ್ಟಲಿದೆ. ಇನ್ನು ಒಂದು ವಾರಗಳ ಕಾಲ ಅಲರ್ಟ್ ಆಗಿರುವಂತೆ ಹವಾಮಾನ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಏಪ್ರಿಲ್ನಲ್ಲಿ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಗಾಳಿಯ ಎಫೆಕ್ಟ್ ತಟ್ಟುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದ್ದು, ಗರಿಷ್ಠ ತಾಪಮಾನ ಮಾತ್ರ ಅಲ್ಲದೇ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಇಂದು 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು, ನಾಳೆ ಬರೋಬ್ಬರಿ 38 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Karnataka Weather Update: ಏಪ್ರಿಲ್- ಜೂನ್ ತನಕ ರಾಜ್ಯದ ಹಲವೆಡೆ ತಾಪಮಾನ ಏರಿಕೆ, 2 ರಿಂದ 8 ದಿನ ಉಷ್ಣ ಅಲೆ ಬೀಸುವ ಸಂಭವ
ಬರಗಾಲ, ಜಲಕ್ಷಾಮಕ್ಕೆ ಸಿಲುಕಿ ತತ್ತರಿಸುತ್ತಿರುವ ಕರುನಾಡಿಗೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಬಿರುಬಿಸಿಲಿಗೆ ಭೂಮಿ ಬಾಯಾರಿ ನಿಂತಿದೆ. ಒಂದು ಮಳೆಹನಿ ಬಿದ್ದರೂ ಸಾಕು ಅನ್ನುವಷ್ಟರಮಟ್ಟಿಗೆ ಈ ಬಾರಿ ಬೇಸಿಗೆ ಬೇಸರ ತಂದಿಟ್ಟಿದೆ. ಅಂಥಾದ್ರಲ್ಲಿ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಮತ್ತಷ್ಟು ಬೆವರುವಂತೆ ಮಾಡಿದೆ. ಏಪ್ರಿಲ್ನಿಂದ ಬಿಸಿಗಾಳಿ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದೇಹದ ಉಷ್ಣತೆಯು 40 C ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ.
ಇದನ್ನೂ ಓದಿ: ಉತ್ತರ ಕರ್ನಾಟಕದ ಈ ಮೂರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಸಾಧ್ಯತೆ
ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟೋಕ್ ಕೂಡ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ಆರೋಗ್ಯ ಇಲಾಖೆಯಿಂದ ಸಲಹೆ ನೀಡಿದ್ದು ವೈದ್ಯರು ಕೆಲವು ಸಲಹೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Wed, 3 April 24