ಸುಡು ಬಿಸಿಲಿನ ನಡುವೆ ಚರ್ಮದ ಆರೈಕೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್​​​ ​​​

ಬೇಸಿಗೆ ಕಾಲ ಬಂತೆಂದರೆ ಸಹಜವಾಗಿ ಚರ್ಮವು ಕಳೆಗುಂದುತ್ತವೆ. ಈ ಸಮಯದಲ್ಲಿ ತ್ವಚೆಯನ್ನು ರಕ್ಷಿಸುವತ್ತ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಖರೀದಿಸಿ ಚರ್ಮದ ಆರೈಕೆಯನ್ನು ಮಾಡುತ್ತಾರೆ. ಸುಡುವ ಬಿಸಿಲಿನ ಪರಿಣಾಮವಾಗಿ ಕಾಡುವ ನಾನಾ ರೀತಿಯ ಸಮಸ್ಯೆಗಳು ನೂರರಾದರೂ, ಕೆಲಸದ ನಡುವೆಯೇ ತ್ವಚೆಯ ರಕ್ಷಣೆಯನ್ನು ಮಾಡಲು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಈ ಸಮಯದಲ್ಲಿ ತ್ವಚೆಯ ರಕ್ಷಣೆಗೆ ಸಲಹೆಗಳನ್ನು ಅನುಸರಿಸುವುದು ಉತ್ತಮ.

ಸುಡು ಬಿಸಿಲಿನ ನಡುವೆ ಚರ್ಮದ ಆರೈಕೆ ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್​​​ ​​​
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 02, 2024 | 12:22 PM

ಬೇಸಿಗೆಗಾಲ ಎಂದರೆ ನೆನಪಾಗುವುದೇ ಸೂರ್ಯನ ಸುಡು ಬಿಸಿಲು, ಬಿಸಿ ಗಾಳಿ. ಹೀಗಾಗಿಯೇ ಈ ಬೇಸಿಗೆಯು ಬರುವುದೇ ಬೇಡ ಎನ್ನುವವರೇ ಹೆಚ್ಚು. ನೆತ್ತಿಯನ್ನು ಸುಡುವಂತಿರುವ ಬಿಸಿಲು ಹಾಗೂ ಬಿಸಿ ಗಾಳಿಯ ಕಾರಣ ಹೊರಗಡೆ ಹೋಗಲು ಇಷ್ಟ ಪಡುವುದಿಲ್ಲ. ಹವಾಮಾನದಲ್ಲಿಯಾಗುವ ಬದಲಾವಣೆಯಿಂದ ಮೊಡವೆ, ಬಿರುಕು ಬಿಡುವುದು, ಚರ್ಮದಲ್ಲಿ ಉರಿ ಹೀಗೆ ಸಾಕಷ್ಟು ಸಮಸ್ಯೆಗಳಿಗೆ ಕಾಡುತ್ತವೆ. ಆದರೆ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಚರ್ಮದ ಆರೈಕೆಯು ಕಷ್ಟವೇನಲ್ಲ.

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಸಲಹೆಗಳು ಇಲ್ಲಿವೆ:

  1. ಫೇಸ್ ವಾಶ್ ಬಳಸಿ : ಬೇಸಿಗೆಯಲ್ಲಿ ಚರ್ಮವು ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುವುದರಿಂದ, ದಿನಕ್ಕೆ ಮೂರು ಬಾರಿ ನಿಮ್ಮ ಮುಖವನ್ನು ತಣ್ಣೀರಿನಿಂದ ನಿಧಾನವಾಗಿ ತೊಳೆಯುವ ಅಭ್ಯಾಸವಿರಲಿ. ಮುಖ ತೊಳೆಯುವಾಗ ಫೇಸ್ ವಾಶ್ ಬಳಸುವುದನ್ನು ಮರೆಯಬೇಡಿ. ಸೆಂಟೆಲ್ಲಾ ಗ್ರೀನ್ ಟೀ ಫೇಸ್ ವಾಶ್ ಬಳಸುವುದರಿಂದ ಇದು ಚರ್ಮವನ್ನು ಮೃದುಗೊಳಿಸಿ ಹೊಳೆಯುವಂತೆ ಮಾಡುತ್ತದೆ.
  2. ಚರ್ಮವನ್ನು ಹೈಡ್ರೇಟ್ ಆಗಿರಿಸಿ : ಸುಡು ಬಿಸಿಲಿಗೆ ಚರ್ಮವು ಒಣಗಿಹೋಗಬಹುದು. ಹೀಗಾಗಿ ಪ್ರತಿದಿನ 3-4 ಲೀಟರ್ ನೀರು ಕುಡಿಯುವುದನ್ನು ತಪ್ಪಿಸಬೇಡಿ. ಇದು ಚರ್ಮವನ್ನು ಹೈಡ್ರೇಟ್ ಆಗಿರಿಸಿ ಹೊಳೆಯುವಂತೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಫೇಸ್‌ಮಾಸ್ಕನ್ನು ಬಳಸುತ್ತ ಇರಿ, ಚರ್ಮವನ್ನು ಡ್ರೈ ಆಗದಂತೆ ಇರಿಸಲು ನೀರಿನ ಸ್ಪ್ರೇ ಯನ್ನು ಮುಖಕ್ಕೆ ಚಿಮುಕಿಸುತ್ತ ಇರಿ.
  3. ಸಕ್ಕರೆ ಮಿಶ್ರಿತ ಪಾನೀಯಗಳಿಂದ ದೂರವಿರಿ : ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುವ ಕಾರಣ ತಂಪು ಪಾನೀಯಗಳತ್ತ ಮೊರೆ ಹೋಗುವುದು ಸಹಜ. ಆದರೆ ಈ ಸಕ್ಕರೆ ಮಿಶ್ರಿತ ಪಾನೀಯಗಳನ್ನು ಸೇವಿಸುವುದರಿಂದ ಚರ್ಮಕ್ಕೆ ಯಾವುದೇ ಲಾಭವಿಲ್ಲ. ಇದು ಚರ್ಮದ ಉರಿಯೂತದ ಪ್ರಕ್ರಿಯೆಯನ್ನು ಹೆಚ್ಚಿಸಿ ತ್ವಚೆಯ ಆರೋಗ್ಯವು ಹಾಳಾಗುತ್ತದೆ.
  4. ಉತ್ತಮ ಟೋನರ್ ಬಳಕೆ ಅಗತ್ಯ : ಬೇಸಿಗೆಯಲ್ಲಿ ಟೋನರ್ ಬಳಕೆಯು ಮುಖದ ಮೇಲಿನ ಕೊಳಕು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಸೌತೆಕಾಯಿ ಆಧಾರಿತ ಅಥವಾ ಅಲೋವೆರಾ ಆಧಾರಿತ ಟೋನರ್ ಗಳನ್ನು ಬಳಸಿ.
  5. ಸನ್ ಸ್ಕ್ರೀನ್ : ಬೇಸಿಗೆಯಲ್ಲಿ ಯುವಿ ವಿಕಿರಣವು ಚರ್ಮದ ಹಾನಿಗೆ ಕಾರಣವಾಗುತ್ತದೆ. ಹೀಗಾಗಿ ಈ ನೇರಳಾತೀತ ವಿಕಿರಣವನ್ನು ಹೀರಿಕೊಳ್ಳದಂತೆ ತಡೆಯಲು ಹಾಗೂ ಈ ಚರ್ಮವನ್ನು ರಕ್ಷಿಸಲು ಸನ್ ಸ್ಕ್ರೀನ್ ಅಗತ್ಯವಾಗಿ ಹಚ್ಚಬೇಕು.
  6. ಮನೆಮದ್ದುಗಳು : ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸಿದರೂ ಕೆಲವೊಮ್ಮೆ ಚರ್ಮಕ್ಕೆ ನೈಸರ್ಗಿಕ ಪರಿಹಾರಗಳು ಅಗತ್ಯವಾಗಿರುತ್ತದೆ. ಬೇಸಿಗೆಯಲ್ಲಿ ನೈಸರ್ಗಿಕವಾಗಿರುವ ಪದಾರ್ಥಗಳನ್ನು ಬಳಸಿ ಚರ್ಮದ ಆರೈಕೆಯನ್ನು ಮಾಡಬೇಕಾಗುತ್ತದೆ. ಜೇನುತುಪ್ಪ ಮತ್ತು ಮೊಸರು ಮಿಶ್ರಣ ಫೇಸ್ ಪ್ಯಾಕ್, ಸೌತೆಕಾಯಿ ಫೇಸ್ ಪ್ಯಾಕ್, ನಿಂಬೆ ಮತ್ತು ಅರಿಶಿನ ಮಿಶ್ರಣ ಫೇಸ್ ಪ್ಯಾಕ್ ಹಾಗೂ ಟೊಮೆಟೊವನ್ನು ಮುಖದ ಮೇಲೆ ಉಜ್ಜಿಕೊಳ್ಳುವ ಮೂಲಕ ತ್ವಚೆಗೆ ನೈಸರ್ಗಿಕವಾದ ಚಿಕಿತ್ಸೆಯನ್ನು ನೀಡುತ್ತಾ ಇರಿ.
  7. ಮಾಯಿಶ್ಚರೈಸರ್ ಬಳಸಿ : ಬೇಸಿಗೆಯಲ್ಲಿ ಚರ್ಮದ ಆರೈಕೆಯಲ್ಲಿ ಮಾಯಿಶ್ಚರೈಸರ್ ಪ್ರಮುಖವಾಗಿದೆ. ಆದರೆ ಹೆಚ್ಚಿನವರು ಚರ್ಮವನ್ನು ಜಿಡ್ಡಿನಾಂಶ ಉಳಿಸುತ್ತದೆ ಎಂದು ಈ ಉತ್ಪನ್ನವನ್ನು ನಿರ್ಲಕ್ಷಿಸುತ್ತಾರೆ. ತಾಪಮಾನ ಹೆಚ್ಚಾದಾಗ ಚರ್ಮವು ಬೇಗನೆ ತೇವಾಂಶವನ್ನು ಕಳೆದುಕೊಳ್ಳುತ್ತದೆ, ಈ ವೇಳೆಯಲ್ಲಿ ಆದರೆ ಚರ್ಮವನ್ನು ತೇವಾಂಶದಿಂದ ಇರಿಸಿಕೊಳ್ಳಲು ಮಾಯಿಶ್ಚರೈಸರ್ ಹಚ್ಚುತ್ತ ಇರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Sat, 2 March 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?