AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ನಾನ್ ವೆಜ್ ಮಾಡಿದ ಪಾತ್ರೆಯ ವಾಸನೆ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ಮಾಂಸಹಾರಿಗಳು ಮೀನು, ಮೊಟ್ಟೆ ಹಾಗೂ ಚಿಕನ್ ತಿನ್ನದೇ ಇರಲಾರರು. ವಾರಕ್ಕೆ ಒಂದು ಬಾರಿಯಾದರೂ ಈ ಭರ್ಜರಿ ಊಟವೀರಲೇಬೇಕು. ಆದರೆ ಕೆಲವೊಮ್ಮೆ ಮಾಂಸವನ್ನಿಟ್ಟ ಪಾತ್ರೆಯು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಎಷ್ಟೇ ತೊಳೆದರೂ ಈ ವಾಸನೆಯು ಹೋಗುವುದೇ ಇಲ್ಲ. ಹೀಗಾದಾಗ ಸುಲಭವಾಗಿ ಮನೆಯಲ್ಲೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.

Kitchen Tips in Kannada : ನಾನ್ ವೆಜ್ ಮಾಡಿದ ಪಾತ್ರೆಯ ವಾಸನೆ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 30, 2024 | 2:59 PM

Share

ಕೆಲವರಿಗೆ ನಾನ್ ವೆಜ್ ಇಲ್ಲದೆ ಊಟನೇ ಸೇರುವುದೇ ಇಲ್ಲ. ವಾರಪೂರ್ತಿ ನಾನ್ ವೆಜ್ ತಿಂದರೂ ಕೂಡ ಬೇಜಾರಾಗುವುದಿಲ್ಲ. ಆದರೆ ಮನೆಯಲ್ಲಿ ನಾನ್ ವೆಜ್ ಮಾಡಿದ ಮೇಲೆ ದೊಡ್ಡ ಸಮಸ್ಯೆ ಎಂದರೆ ಕೆಲವೊಮ್ಮೆ ಪಾತ್ರೆ ತೊಳೆದ ಮೇಲೂ ಕೆಟ್ಟ ವಾಸನೆ ಬರುತ್ತದೆ. ಅಡುಗೆ ಮನೆಯ ತುಂಬಾ ಈ ವಾಸನೆಯು ತುಂಬಿಕೊಳ್ಳುತ್ತದೆ. ಪಾತ್ರೆಯ ತೊಳೆದ ಮೇಲೂ ಮೀನು, ಚಿಕನ್ ಹಾಗೂ ಮೊಟ್ಟೆಯ ವಾಸನೆಯನ್ನು ಬರುತ್ತಿದ್ದರೆ ಹೋಗಲಾಡಿಸಲು ಕೆಲವು ಸರಳ ಸಲಹೆಗಳನ್ನು ಪಾಲಿಸಿದರೆ ಉತ್ತಮ.

ಪಾತ್ರೆಗಳ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಸಲಹೆಗಳು:

* ನಿಂಬೆ ಆಹಾರದಲ್ಲಿ ಮಾತ್ರವಲ್ಲದೆ ಅಡುಗೆ ಮನೆಯನ್ನು ಸ್ವಚ್ಛಗೊಳಿಸಲು ಕೂಡ ತುಂಬಾ ಉಪಯುಕ್ತವಾಗಿದೆ. ಪಾತ್ರೆಗಳಿಂದ ಬರುವ ಮೀನು ಮತ್ತು ಮೊಟ್ಟೆಯ ವಾಸನೆಯನ್ನು ಹೋಗಲಾಡಿಸಲು, ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಸ್ವಲ್ಪ ಸಮಯದ ನಂತರ ತೊಳೆದರೆ ವಾಸನೆಯು ಹೋಗುತ್ತದೆ.

* ಮೀನು ಅಥವಾ ಮೊಟ್ಟೆಗಳನ್ನು ಬೇಯಿಸಿದ ನಂತರದಲ್ಲಿ ಪಾತ್ರೆಯು ದುರ್ನಾತ ಬೀರುತ್ತಿದ್ದರೆ, ಪಾತ್ರೆಗೆ ಸ್ವಲ್ಪ ಉಪ್ಪನ್ನು ಹಾಕಿ, ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆದರೆ ಉಪ್ಪು ಈ ವಾಸನೆಯನ್ನು ಹೀರಿಕೊಳ್ಳುತ್ತದೆ.

* ಅಡುಗೆ ಸೋಡಾವು ಪಾತ್ರೆಗಳಲ್ಲಿನ ವಾಸನೆಯನ್ನು ತೆಗೆದುಹಾಕುತ್ತದೆ. ಹೀಗಾಗಿ ಪಾತ್ರೆ ತೊಳೆಯಲು ಬಳಸುವ ನೀರಿಗೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ, ಪಾತ್ರೆಗಳನ್ನು ಸ್ವಲ್ಪ ಸಮಯ ನೆನೆಸಿಟ್ಟು ಸೋಪಿನಿಂದ ತೊಳೆದರೆ ಪಾತ್ರೆಗಳು ಫಳಫಳನೇ ಹೊಳೆಯುವುದಲ್ಲದೆ ಕೆಟ್ಟ ವಾಸನೆಯು ದೂರವಾಗುತ್ತದೆ.

* ವಿನೆಗರ್ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪಾತ್ರೆಗಳಲ್ಲಿನ ವಾಸನೆಯನ್ನು ತೆಗೆದುಹಾಕಲು ಸಹಕಾರಿಯಾಗಿದೆ. ನಾನ್ ವೆಜ್ ವಾಸನೆಯಿಂದ ಕೂಡಿದ ಪಾತ್ರೆಯನ್ನು ತೊಳೆಯಲು ನೀರಿಗೆ ವಿನೆಗರ್ ಹಾಕಿ ಪಾತ್ರೆಗಳನ್ನು ಹತ್ತು ಹದಿನೈದು ನಿಮಿಷಗಳ ಕಾಲ ನೆನೆಸಿಟ್ಟು ತೊಳೆದರೆ ಈ ಮಾಂಸ ಮತ್ತು ಮೀನಿನ ವಾಸನೆಯು ದೂರವಾಗುತ್ತದೆ.

ಇದನ್ನೂ ಓದಿ:ಕಣ್ಣಿನ ಸಮಸ್ಯೆಗೆ ರಾಮಬಾಣ ಗೋಡಂಬಿ, ಇದನ್ನು ಪ್ರತಿದಿನ ತಿನ್ನುವುದರಿಂದ ಆರೋಗ್ಯ ಲಾಭ

* ಪಾತ್ರೆ ತೊಳೆಯಲು ಬಳಸುವ ನೀರಿಗೆ ಸ್ವಲ್ಪ ಕಾಫಿ ಪುಡಿಯನ್ನು ಸೇರಿಸಿ ತೊಳೆದರೆ ಈ ವಾಸನೆಯು ಸಂಪೂರ್ಣವಾಗಿ ಹೋಗುತ್ತದೆ. ಆ ನಂತರದಲ್ಲಿ ಸೋಪಿನಿಂದ ಮತ್ತೊಮ್ಮೆ ಪಾತ್ರೆಗಳನ್ನು ತೊಳೆಯಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ