ಸಾಮಾನ್ಯವಾಗಿ ನಿನ್ನೆ ಉಳಿದಿರುವ ಆಹಾರವೆಂದರೆ ಅಸಡ್ಡೆ ಪಡುವವರೇ ಜಾಸ್ತಿ. ಆದರೆ ನಿನ್ನೆ ರಾತ್ರಿ ಉಳಿದಿರುವ ಅನ್ನದಿಂದ ಎಷ್ಟು ಪ್ರಯೋಜನವಿದೆ ಎಂದು ತಿಳಿದುಕೊಳ್ಳಿ. ವಿಶೇಷವಾಗಿ ಬೇಸಿಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆಳಗ್ಗೆ ತಂಗಳನ್ನ ತಿನ್ನುವುದರಿಂದ ಆರೋಗ್ಯದ ಮೇಲೆ ಎಷ್ಟು ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ. ಪೌಷ್ಟಿಕತಜ್ಞೆ ಪೂಜಾ ಮಖಿಜಾ ತಂಗಳನ್ನದ ಪ್ರಯೋಜನಗಳನ್ನು ಕುರಿತು ಮಾಹಿತಿ ನೀಡಿದ್ದಾರೆ. ಇತ್ತೀಚಿನ ಬದಲಾದ ಜೀವನಶೈಲಿಯನ್ನು ಮನೆಯನ್ನು ಆಹಾರವನ್ನು ತಯಾರಿಸಿವುದಕ್ಕಿಂತ ಆನ್ಲೈನ್ ಮೂಲಕ ಆಡರ್ರ್ ಮಾಡಿ ತಿನ್ನುವವರೇ ಹೆಚ್ಚು. ಅಥವಾ ಬಿಡುವಿಲ್ಲದ ಜೀವನ ಶೈಲಿಯಲ್ಲಿ 5, 10 ನಿಮಿಷಗಳಲ್ಲಿ ತಯಾರಿಸಲಾಗುವ ಮ್ಯಾಗಿ, ನೂಡಲ್ಸ್ ತಯಾರಿಸಿ ತಿನ್ನುವುದನ್ನು ಕಾಣಬಹುದು. ಆದರೆ, ಇನ್ನು ಮುಂದೆ ಆರೋಗ್ಯಕರ ಆಹಾರದ ಗಮನಹರಿಸಿ, ಯಾಕೆಂದರೆ ನೀವು ತಿನ್ನುವ ಆಹಾರ ಮೇಲೆ ಒಟ್ಟಾರೆ ನಿಮ್ಮ ಆರೋಗ್ಯ ಅಡಗಿದೆ.
ರಾತ್ರಿ ಉಳಿದ ಅನ್ನವನ್ನು ಸಂಪೂರ್ಣವಾಗಿ ನೀರಿನಲ್ಲಿ ನೆನೆಸಿ ಮಣ್ಣಿನ ಪಾತ್ರೆಯಲ್ಲಿ ರಾತ್ರಿಯಿಡೀ ಸಂಗ್ರಹಿಸಿದರೆ ಮರುದಿನ ಬೆಳಿಗ್ಗೆ ಹುದುಗುತ್ತದೆ. ಈ ಅನ್ನವು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ನಿಮ್ಮ ದೇಹವನ್ನು ತಂಪಾಗಿಡುವಲ್ಲಿ ತಂಗಳನ್ನ ತುಂಬಾ ಸಹಾಯಕವಾಗಿದೆ. ಆದ್ದರಿಂದ ಬೆಳಗ್ಗಿನ ಉಪಹಾರದ ಬದಲಾಗಿ ತಂಗಳನ್ನವನ್ನು ವಿಶೇಷವಾಗಿ ಬೇಸಿಗೆಯಲ್ಲಿ ತಿನ್ನುವ ಆಭ್ಯಾಸವನ್ನು ರೂಢಿಸಿಕೊಳ್ಳಿ.
ಉಳಿದ ಅನ್ನದಲ್ಲಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಹೇರಳವಾಗಿರುವುದರಿಂದ, ಈ ಅನ್ನವನ್ನು ವಾರದಲ್ಲಿ ಮೂರು ದಿನ ಬೆಳಗ್ಗೆ ಸೇವಿಸುವುದರಿಂದ ನಿಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದನ್ನೂ ಓದಿ: ಮನೆಯಲ್ಲಿಯೇ ಆರೋಗ್ಯಕರ ಮಂಡಕ್ಕಿ ಚಾಕೊಲೇಟ್ ತಯಾರಿಸಿ, ರೆಸಿಪಿ ಇಲ್ಲಿದೆ
ಬೇಸಿಗೆಯಲ್ಲಿ ಸಾಕಷ್ಟು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಲಬದ್ಧತೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ನೀರು ಕುಡಿಯುವುದು. ಆದ್ದರಿಂದ ಈಗಾಗಲೇ ಹೇಳಿರುವಂತೆ ತಂಗಳನ್ನದಲ್ಲಿ ಪೋಷಕಾಂಶಗಳು ಹೇರಳವಾಗಿರುವುದರ ಜೊತೆಗೆ ನೀರಿನಾಂಶವು ಹೆಚ್ಚಿರುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಉತ್ತಮ ಔಷಧಿಯಾಗಿದೆ.
ಬೇಸಿಗೆಯಲ್ಲಿ ಇದ್ದಕ್ಕಿದ್ದ ಹಾಗೆ, ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಲ್ಲಿ ಬಾಯಿ ಹುಣ್ಣು ಕೂಡ ಒಂದು. ಇದು ಸಾಕಷ್ಟು ಕಿರಿ ಕಿರಿಯ ಜೊತೆಗೆ ನೋವನ್ನುಂಟು ಮಾಡುತ್ತದೆ. ವಾರಕ್ಕೆ ಮೂರು ಬಾರಿ ಬೆಳಗ್ಗೆ ತಂಗಳನ್ನವನ್ನು ಸೇವಿಸುವುದರಿಂದ ಶೀಘ್ರವಾಗಿ ಬಾಯಿ ಹುಣ್ಣಿನಿಂದ ಚೇತರಿಸಿಕೊಳ್ಳಬಹುದು.
ಆದರೆ ಯಾವತ್ತೂ ಅನ್ನವನ್ನು ಮತ್ತೆ ಬಿಸಿ ಮಾಡಿ ಸೇವಿಸಬೇಡಿ. ಅದು ನಿಮಗೆ ಅನಾರೋಗ್ಯವನ್ನುಂಟು ಮಾಡಬಹುದು. ಮತ್ತೆ ಬಿಸಿ ಮಾಡಿದ ಅನ್ನವನ್ನು ತಿನ್ನುವುದು ಆಹಾರ ವಿಷಕ್ಕೆ ಕಾರಣವಾಗಬಹುದು ಎಂದು ಇಂಗ್ಲೆಂಡಿನ ನ್ಯಾಷನಲ್ ಹೆಲ್ತ್ ಸರ್ವಿಸ್ (NHS) ಪ್ರಕಾರ ತಿಳಿದುಬಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:47 pm, Tue, 28 March 23