Puffed Rice Chocolate: ಮನೆಯಲ್ಲಿಯೇ ಆರೋಗ್ಯಕರ ಮಂಡಕ್ಕಿ ಚಾಕೊಲೇಟ್‌ ತಯಾರಿಸಿ, ರೆಸಿಪಿ ಇಲ್ಲಿದೆ

ನೀವು ಚಾಕೊಲೇಟ್ ಪ್ರಿಯರಾಗಿದ್ದರೆ, ಈ ಪಾಕವಿಧಾನ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಚಾಕೊಲೇಟ್‌ನಲ್ಲಿ ಮಂಡಕ್ಕಿಯನ್ನು ಸೇರಿಸುವ ಮೂಲಕ ಗರಿಗರಿಯಾದ ಸಿಹಿಯನ್ನು ನೀವಿಲ್ಲಿ ಸವಿಯಬಹುದು.

Puffed Rice Chocolate: ಮನೆಯಲ್ಲಿಯೇ ಆರೋಗ್ಯಕರ ಮಂಡಕ್ಕಿ ಚಾಕೊಲೇಟ್‌ ತಯಾರಿಸಿ, ರೆಸಿಪಿ ಇಲ್ಲಿದೆ
ಮಂಡಕ್ಕಿ ಚಾಕೊಲೇಟ್‌ Image Credit source: Martha Stewart
Follow us
ಅಕ್ಷತಾ ವರ್ಕಾಡಿ
|

Updated on: Mar 27, 2023 | 7:00 AM

ನೀವು ಚಾಕೊಲೇಟ್ ಪ್ರಿಯರಾಗಿದ್ದರೆ, ಈ ಪಾಕವಿಧಾನ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಚಾಕೊಲೇಟ್‌ನಲ್ಲಿ ಮಂಡಕ್ಕಿಯನ್ನು ಸೇರಿಸುವ ಮೂಲಕ ಗರಿಗರಿಯಾದ ಸಿಹಿಯನ್ನು ನೀವಿಲ್ಲಿ ಸವಿಯಬಹುದು. ಈ ಪಾಕವಿಧಾನಕ್ಕಾಗಿ ನಿಮಗೆ ಒಟ್ಟು ಐದು ಪದಾರ್ಥಗಳು ಬೇಕಾಗುತ್ತವೆ- ಚಾಕೊಲೇಟ್, ಮಂಡಕ್ಕಿ, ಬೆಣ್ಣೆ, ಸಕ್ಕರೆ ಮತ್ತು ಹಾಲಿನ ಪುಡಿ. ಇದು ಮಕ್ಕಳು ಅಥವಾ ವಯಸ್ಕರು, ಪ್ರತಿಯೊಬ್ಬರೂ ಈ ರುಚಿಕರವಾದ ಮನೆಯಲ್ಲಿ ತಯಾರಿಸಿದ ಚಾಕೊಲೇಟ್ ಅನ್ನು ಇಷ್ಟಪಡುತ್ತಾರೆ. ನಿಮ್ಮ ಊಟದ ನಂತರ ನೀವು ಆಗಾಗ್ಗೆ ಸಿಹಿತಿಂಡಿಗಳನ್ನು ಹಂಬಲಿಸುತ್ತಿದ್ದರೆ, ಈ ಮಂಡಕ್ಕಿ ಚಾಕೊಲೇಟ್ ಮನೆಯಲ್ಲಿಯೇ ತಯಾರಿಸಿ ಮತ್ತು ಅವುಗಳನ್ನು ಫ್ರಿಡ್ಜ್‌ನಲ್ಲಿ ಗಾಳಿಯಾಡದ ಬಾಕ್ಸ್‌ನಲ್ಲಿ ಸಂಗ್ರಹಿಸಿ. ಈ ಚಾಕೊಲೇಟ್‌ಗೆ ಇನ್ನಷ್ಟು ರುಚಿ ನೀಡಲು ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಕೂಡ ಸೇರಿಸಬಹುದು. ಈ ಪಾಕವಿಧಾನವನ್ನು ಪ್ರಯತ್ನಿಸಿ.

ಮಂಡಕ್ಕಿ ಚಾಕೊಲೇಟ್‌ ರೆಸಿಪಿ:

ಬೇಕಾಗುವ ಪದಾರ್ಥಗಳು:

  • 2 ಕಪ್ ಮಂಡಕ್ಕಿ
  • 150 ಗ್ರಾಂ ಬೆಣ್ಣೆ
  • 25 ಗ್ರಾಂ ಹಾಲಿನ ಪುಡಿ
  • 200 ಗ್ರಾಂ ಡಾರ್ಕ್ ಚಾಕೊಲೇಟ್
  • 150 ಗ್ರಾಂ ಪುಡಿ ಸಕ್ಕರೆ

ಇದನ್ನು ಓದಿ: ತನ್ನ ಸ್ವಂತ ಹಣದಿಂದ ಐಫೋನ್ ಖರೀದಿಸಿದ 12 ವರ್ಷದ ಪುಟ್ಟ ಹುಡುಗಿ, ಆಕೆಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಗೊತ್ತಾ?

ಮಂಡಕ್ಕಿ ಚಾಕೊಲೇಟ್‌ ಮಾಡುವ ವಿಧಾನ:

ಹಂತ 1 :

ಒಂದು ಪ್ಯಾನ್​​ನಲ್ಲಿ ಮಧ್ಯಮ ಉರಿಯಲ್ಲಿ ಮಂಡಕ್ಕಿನ್ನು ಗರಿಗರಿಯಾಗುವವರೆಗೆ ಹುರಿಯಿರಿ.

ಹಂತ 2 :

ಡಾರ್ಕ್ ಚಾಕೊಲೇಟ್ ಕರಗಿಸಲು ಡಬಲ್ ಬಾಯ್ಲರ್ ವಿಧಾನವನ್ನು ಬಳಸಿ. ಮೃದುವಾದ ಮಿಶ್ರಣವನ್ನು ಮಾಡಲು ಬೆಣ್ಣೆಯನ್ನು ಸೇರಿಸಿ ಮತ್ತು ಮತ್ತೆ ಸರಿಯಾಗಿ ಗಂಟು ಕಟ್ಟದಂತೆ ಮಿಶ್ರಣ ಮಾಡಿ. ಈಗ ಹಾಲಿನ ಪುಡಿ ಮತ್ತು ಪುಡಿ ಸಕ್ಕರೆ ಸೇರಿಸಿ. ಚೆನ್ನಾಗಿ ಬೆರೆಸಿ.

ಹಂತ 3:

ಈಗ ಕರಗಿಸಿದ ಚಾಕೊಲೇಟ್ ಮಿಶ್ರಣಕ್ಕೆ , ಹುರಿದ ಮಂಡಕ್ಕಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

ಹಂತ 4:

ಮಿಶ್ರಣವನ್ನು ಸಿಲಿಕೋನ್ ಅಚ್ಚುಗಳಿಗೆ ವರ್ಗಾಯಿಸಿ ಅಥವಾ ಒಂದು ಬಟ್ಟಲಿಗೆ ಸ್ವಲ್ಪ ತುಪ್ಪ ಸವರಿ ಅದಕ್ಕೆ ಸುರಿಯಿರಿ ಮತ್ತು ತಣ್ಣಗಾಗಲು ಬಿಡಿ. ನಂತರ ಕೆಲವು ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇರಿಸಿ. ಈಗ ಮಂಡಕ್ಕಿ ಚಾಕೊಲೇಟ್‌ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: