ತನ್ನ ಸ್ವಂತ ಹಣದಿಂದ ಐಫೋನ್ ಖರೀದಿಸಿದ 12 ವರ್ಷದ ಪುಟ್ಟ ಹುಡುಗಿ, ಆಕೆಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಗೊತ್ತಾ?

ಕಷ್ಟಪಟ್ಟು ದುಡಿದರೆ ಮಾತ್ರ ಅದಕ್ಕೆ ಸರಿಯಾದ ಪ್ರತಿಫಲ ಎನ್ನುವಂತಹದ್ದು ದೊರೆಯುತ್ತದೆ. ಈ ಗಾದೆಗೆ ಉದಾಹರಣೆ ಎನ್ನುವಂತೆ ದುಬೈನ 12 ವರ್ಷದ ಹುಡುಗಿಯೊಬ್ಬಳು, ತಾನು ತಯಾರಿಸಿದ ಬ್ರೆಡ್‌ಗಳನ್ನು ಶಾಲೆಯಲ್ಲಿ ಮಾರಿ ಅದರಿಂದ ಬಂದಂತಹ ಹಣದಿಂದ ಐಫೋನ್ 14 ದುಬಾರಿ ಫೋನ್ ಖರೀದಿ ಮಾಡಿದ್ದಾಳೆ.

ತನ್ನ ಸ್ವಂತ ಹಣದಿಂದ ಐಫೋನ್ ಖರೀದಿಸಿದ 12 ವರ್ಷದ ಪುಟ್ಟ ಹುಡುಗಿ, ಆಕೆಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಗೊತ್ತಾ?
ಸ್ವಂತ ಹಣದಿಂದ ಐಫೋನ್ ಖರೀದಿಸಿದ 12 ಪುಟ್ಟ ಹುಡುಗಿImage Credit source: khaleejtimes
Follow us
ಅಕ್ಷತಾ ವರ್ಕಾಡಿ
|

Updated on:Mar 26, 2023 | 3:14 PM

ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಿದೆ. ಕಷ್ಟಪಟ್ಟು ದುಡಿದರೆ ಮಾತ್ರ ಅದಕ್ಕೆ ಸರಿಯಾದ ಪ್ರತಿಫಲ ಎನ್ನುವಂತಹದ್ದು ದೊರೆಯುತ್ತದೆ. ಈ ಗಾದೆಗೆ ಉದಾಹರಣೆ ಎನ್ನುವಂತೆ ದುಬೈನ 12 ವರ್ಷದ ಹುಡುಗಿಯೊಬ್ಬಳು, ತಾನು ತಯಾರಿಸಿದ ಬ್ರೆಡ್‌ಗಳನ್ನು ಶಾಲೆಯಲ್ಲಿ ಮಾರಿ ಅದರಿಂದ ಬಂದಂತಹ ಹಣದಿಂದ ಐಫೋನ್ 14 ದುಬಾರಿ ಫೋನ್ ಖರೀದಿ ಮಾಡಿದ್ದಾಳೆ. ಈಕೆಯ ಕಥೆ ನಿಜಕ್ಕೂ ಯುವಜನತೆಗೆ ಸ್ಪೂರ್ತಿ ನೀಡುವಂತಿದೆ. ಮನೆಯಲ್ಲಿ ಬ್ರೆಡ್ ತಯಾರಿಸಿ ಬಳಿಕ ಅದನ್ನು ಶಾಲೆಯಲ್ಲಿ ಮಾರಾಟ ಮಾಡಿ ಅದರಿಂದ ಬಂದಂತಹ ಹಣದಿಂದ ಐಫೋನ್ 14ನ್ನು ಖರೀದಿಸಿದ ದುಬೈನ 12 ವರ್ಷದ ಬಾಲೆ. ಏಳನೇ ತರಗತಿಯಲ್ಲಿ ಕಲಿಯುತ್ತಿರುವಂತಹ ಬಿಯಾಂಕಾ ಜೆಮಿ ವಾರಿಯವ, ತನ್ನ ಸ್ವಂತ ಪರಿಶ್ರಮದಲ್ಲಿ ಐಫೋನ್ ಖರೀದಿಸಿದ ಹುಡುಗಿ.

ಈಕೆಯ ಪೋಷಕರು ಕೆಲವು ಪರಿಸ್ಥಿತಿಗಳ ಕಾರಣ ಈ ದುಬಾರಿ ಫೋನ್‌ನ್ನು ಮಗಳಿಗೆ ಕೊಡಿಸಲಾಗಲಿಲ್ಲ. ಈ ಕಾರಣದಿಂದಲೇ ಕೇವಲ 12 ವರ್ಷದ ಹುಡುಗಿ ಬಿಯಾಂಕ ಸತತ ಆರು ತಿಂಗಳ ಪರಿಶ್ರಮದ ಪ್ರತಿಫಲವಾಗಿ ಈ ದುಬಾರಿ ಫೋನ್ ಖರೀದಿಸಿದ್ದಾಳೆ. ಬಿಯಾಂಕಾಳ ತಾಯಿ ಜೆಮಿನಿ ವಾರಿಯವಾ ಒಂದು ದಿನ ಬ್ರೆಡ್ ತಯಾರಿಸಿ ಅದನ್ನು ಊಟದ ಡಬ್ಬಿಯಲ್ಲಿ ಪ್ಯಾಕ್ ಮಾಡಿ ಮಗಳಿಗೆ ಕೊಡುತ್ತಾಳೆ. ಬಿಯಾಂಕ ಇದನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡು ತಿನ್ನುತ್ತಾಳೆ. ಈ ಬ್ರೆಡ್‌ನ್ನು ಆಕೆ ಸ್ನೇಹಿತರು ತುಂಬಾ ಇಷ್ಟಪಟ್ಟು ತಿಂದರು ಹಾಗೂ ಮರುದಿನವೂ ಕೂಡಾ ಇದನ್ನು ಶಾಲೆಗೆ ತೆಗೆದುಕೊಂಡು ಬರುವಂತೆ ಆಕೆಯಲ್ಲಿ ಕೇಳಿಕೊಂಡರು ಎಂದು ಬಿಯಾಂಕಾ ಹೇಳುತ್ತಾಳೆ.

ಒಮ್ಮೆ ಬಿಯಾಂಕಾಳ ಸ್ನೇಹಿತೆಯೊಬ್ಬಳು ಬ್ರೆಡ್‌ನ್ನು ಉಚಿತವಾಗಿ ನೀಡುವ ಬದಲು ಏಕೆ ನೀನು ಅವುಗಳನ್ನು ಮಾರಾಟ ಮಾಡಬಾರದು ಎಂಬ ಉಪಾಯವನ್ನು ನೀಡುತ್ತಾಳೆ. ಮತ್ತು ಇದರಿಂದ ಗಳಿಸಿದ ಹಣದಿಂದ ನನಗೆ ಐಫೋನ್ 14 ನ್ನು ಖರೀದಿಸಬಹುದು ಅಲ್ವಾ ಎಂದು ಬಿಯಾಂಕಾ ಯೋಚಿಸುತ್ತಾಳೆ. ಇದು ಈಕೆಯ ಜೀವನಕ್ಕೆ ಒಂದು ತಿರುವನ್ನು ನೀಡುತ್ತದೆ. ಬಿಯಾಂಕಾಳ ಪೋಷಕರು ದುಬೈನ ಪಂಚತಾರ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ ಪರಿಣಿತ ಬೇಕರ್‌ಗಳಾಗಿದ್ದಾರೆ. ಅವರು ಮನೆಯಲ್ಲಿ ಅಡುಗೆ ಮಾಡುವುದನ್ನು ನೋಡುತ್ತಾ ಬಿಯಾಂಕಾ ಬೆಳೆದಿರುತ್ತಾಳೆ. ಮತ್ತು ಆಕೆ ಬ್ರೆಡ್ ಮಾರಾಟ ಮಾಡುವ ಯೋಜನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸುತ್ತಾಳೆ. ಆಕೆಯ ಪೋಷಕರು ಇದಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ಸೂಚಿಸುತ್ತಾರೆ. ಆಕೆಯ ತಂದೆ ಭಾರತೀಯ, ಅವರ ಹೆಸರು ಜೆಮಿಭಾಯಿ ವಾರಿಯವ. ಆಕೆಯ ತಾಯಿ ಬ್ರೆಡ್ ಬೇಕ್ ಮಾಡುವ ಪರಿಣಿತಿಯನ್ನು ಮಗಳಿಗೆ ತಿಳಿಸಿಕೊಟ್ಟರು.

ಬಿಯಾಂಕಾ ತನ್ನ 5ನೇ ವಯಸ್ಸಿನಿಂದಲೂ ಅಡುಗೆ ಮಾಡುವುದರಲ್ಲಿ ಆಸಕ್ತಿಯನ್ನು ಹೊಂದಿದ್ದಳು. ಆಕೆ 5ನೇ ವಯಸ್ಸಿನಲ್ಲಿರುವಾಗ ನಮ್ಮ ಪಿಜ್ಜಾ ಪಾರ್ಲರ್‌ನಲ್ಲಿ ಪಿಜ್ಜಾ ತಯಾರಿಸಲು ನಮಗೆ ಸಹಾಯ ಮಾಡುತ್ತಿದ್ದಳು’ ಎಂದು ತಾಯಿ ಜೆಮಿನಿ ಹೇಳುತ್ತಾರೆ.

ಇದನ್ನೂ ಓದಿ: ಮನೆಯಲ್ಲಿಯೇ ಸುಲಭವಾಗಿ ಧೂಪ ತಯಾರಿಸಿ

ಬಿಯಾಂಕಾ ಬ್ರೆಡ್ ಹೇಗೆ ತಯಾರಿಸಿ ಮಾರಾಟ ಮಾಡುತ್ತಿದ್ದಳು?

ಬಿಯಾಂಕ ನಾಲ್ಕು ಬ್ರೆಡ್ ತುಂಡುಗಳನ್ನು 10 ದಿರಾಮ್‌ ಅಂದರೆ ಭಾರತದ 224 ರೂಪಾಯಿಗೆ ಮಾರಾಟ ಮಾಡಿದಳು. ನಂತರ ದಿನಕಳೆದಂತೆ ದಿನಕ್ಕೆ ಸರಾಸರಿ 60 ಬ್ರೆಡ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದಳು. ಆಕೆ ತನ್ನ ಮನೆಕೆಲಸವನ್ನೆಲ್ಲಾ ಮುಗಿಸಿದ ನಂತರ ಸಂಜೆ ಬ್ರೆಡ್ ಬೇಕ್ ಮಾಡುತ್ತಿದ್ದಳು. ಮತ್ತು ಆಕೆ ತನ್ನ ಆರ್ಡರ್ ಲಿಸ್ಟ್ಗಳನ್ನು ಗಮನಿಸಿ ಆರ್ಡರ್‌ನಲ್ಲಿರುವುದನ್ನು ಮಾತ್ರ ಸಿದ್ಧಪಡಿಸುತ್ತಿದ್ದಳು. ಇದೇ ಮಾರ್ಚ್ ಎರಡನೇ ವಾರದ ವೇಳೆಗೆ ಬಿಯಾಂಕಾ ಬ್ರೆಡ್ ಮಾರಿ ಗಳಿಸಿದ ಹಣದಿಂದ ಸುಮಾರು 3000 ದಿರಾಮ್ ಮೌಲ್ಯದ ಐಫೋನ್ 14 ಮೊಬೈಲ್ ಫೋನ್‌ನ್ನು ಖರೀದಿ ಮಾಡುತ್ತಾಳೆ.

ಆಕೆಗೆ ಎದುರಾದ ಸವಾಲುಗಳು:

ಶಾಲೆಯಲ್ಲಿ ಬ್ರೆಡ್ ಮಾರಾಟ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ ಎಂದು ಬಿಯಾಂಕಾ ಹೇಳುತ್ತಾಳೆ. ಒಂದು ಹಂತದಲ್ಲಿ ಆಕೆಯನ್ನು ವಿದ್ಯಾರ್ಥಿಗಳು ಗೇಲಿ ಮಾಡಿದ್ದು ಉಂಟು. ಕೆಲವು ವಿದ್ಯಾರ್ಥಿಗಳು ನನ್ನನ್ನು ಕೀಳಾಗಿ ನೋಡಿದರು. ಅವರು ತಮ್ಮತಮ್ಮಲ್ಲೇ ಅವಳು ಬ್ರೆಡ್ ಮಾರಾಟ ಮಾಡುವ ಬದಲು ನೇರವಾಗಿ ಆಕೆಯ ಪೋಷಕರ ಬಳಿ ಬೇಕೆಂದು ಕೇಳಬಹುದಲ್ವಾ ಎಂದು ಮಾತನಾಡಿಕೊಂಡರು. ಜೊತೆಗೆ ಅವರು ನನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಪ್ರಶ್ನಿಸಿದ್ದಾರೆ ಎಂದು ಬಿಯಾಂಕ ಹೇಳುತ್ತಾಳೆ.

ಆದರೆ ನಾನು ನನ್ನ ಗುರಿಯನ್ನು ತಲುಪುವವರೆಗೂ ನಾನು ನನ್ನ ಗಮನವನ್ನು ಕೇಂದ್ರೀಕರಿಸಿ ಮುಂದುವರೆದುಕೊಂಡು ಬಂದಿದ್ದೇನೆ. ನನ್ನ ಪೋಷಕರು, ಸಹಪಾಠಿಗಳು, ಶಿಕ್ಷಕರು ಮತ್ತು ನೆರೆಹೊರೆಯವರು ನನ್ನ ಕೆಸವನ್ನು ಪ್ರೋತ್ಸಾಹಿಸಿದ್ದಾರೆ ಜೊತೆಗೆ ಪ್ರೇರಣೆಯನ್ನು ನೀಡಿದ್ದಾರೆ. ಅವರಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಬಿಯಾಂಕಾ ಹೇಳಿದ್ದಾಳೆ. ಬಿಯಾಂಕ ತನ್ನ ಈ ಉದ್ಯಮಶೀಲ ಪ್ರಯಾಣವನ್ನು ಮುಂದುವರಿಸಬೇಕೆಂದು ಪ್ರತಿಜ್ಞೆ ಮಾಡಿದ್ದಾಳೆ. ಜೊತೆಗೆ ತನ್ನ ಸ್ವಂತ ಬೇಕರಿ ಮತ್ತು ಕಾಫಿ ಶಾಪ್ ತೆರೆಯಬೇಕು ಎಂಬ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದಳು. ತಾಯಿ ಜೆಮಿನಿ ಮಗಳ ಈ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾ, ಬಿಯಾಂಕಾಳ ಕಥೆ ಯುವ ಪೀಳಿಗೆಗೆ ಸ್ಪೂರ್ತಿ ನೀಡಬಹುದು ಎಂದು ಹೇಳಿದರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:13 pm, Sun, 26 March 23