ಬೇಸಿಗೆ ಬಂದ ಕೂಡಲೇ, ಚರ್ಮದ ಆರೈಕೆ ಅತ್ಯಗತ್ಯ. ಏಕೆಂದರೆ ಈ ಸಮಯದಲ್ಲಿ ಅಸ್ವಸ್ಥತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಆರಂಭವಾಗುತ್ತದೆ. ಇವುಗಳಲ್ಲಿ ಹೆಚ್ಚಿನವು ವಿವಿಧ ಚರ್ಮದ ಸಮಸ್ಯೆ ಉಂಟುಮಾಡುತ್ತವೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದವು ಸನ್ ಬರ್ನ್. ವಾಸ್ತವವಾಗಿ, ಸೂರ್ಯನ ಹೆಚ್ಚಿನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ, ಇದು ದದ್ದುಗಳು, ಚರ್ಮ ಒರಟಾಗುವಿಕೆ, ಟ್ಯಾನಿಂಗ್ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪರಿಣಾಮ, ಮುಖವು ಕಪ್ಪಗಾಗಿ ಚರ್ಮ ಹದಗೆಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ನೀವು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಇವು ಚರ್ಮಕ್ಕೂ ಮತ್ತು ದೇಹಕ್ಕೂ ತುಂಬಾ ಸಹಕಾರಿಯಾಗಿದೆ.
ನಿಂಬೆ-ಜೇನುತುಪ್ಪ: ನಿಂಬೆ ಮತ್ತು ಜೇನುತುಪ್ಪವು ಸನ್ ಟ್ಯಾನ್ ಅನ್ನು ತೆಗೆದುಹಾಕಲು ಸಹಾಯ ಮಾಡುವ ಗುಣಗಳನ್ನು ಹೊಂದಿವೆ. ಬಿಸಿಲಿನ ತಾಪ ಮತ್ತು ಟ್ಯಾನಿಂಗ್ ಸಮಸ್ಯೆಯಿಂದ ನಿಮ್ಮ ತ್ವಚೆ ಹಾಳಾಗಿದ್ದಲ್ಲಿ, ನೀವು ನಿಂಬೆ ರಸ -ಜೇನುತುಪ್ಪವನ್ನು ಬಳಸಬಹುದು. ಒಂದು ಚಿಕ್ಕ ಪಾತ್ರೆ ಅಥವಾ ಗ್ಲಾಸ್ ನಲ್ಲಿ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ. ನಂತರ, ಅದನ್ನು ಟ್ಯಾನ್ ಮಾಡಿದ ಪ್ರದೇಶದಲ್ಲಿ 30 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದು ಟ್ಯಾನಿಂಗ್ ಸಮಸ್ಯೆಯನ್ನು ತೆಗೆದುಹಾಕುವುದು ಮಾತ್ರವಲ್ಲದೆ ನಿಮ್ಮ ಚರ್ಮವನ್ನು ಹೊಳೆಯುವ ಮತ್ತು ಸುಂದರವಾಗಿಸುತ್ತದೆ.
ಇದನ್ನೂ ಓದಿ;Summer Special: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ ಆಹಾರಗಳು
ಟೊಮೆಟೊ: ಟೊಮೆಟೊದಲ್ಲಿರುವ ಲೈಕೋಪೀನ್ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮ ಸತ್ತು ಹೋದಲ್ಲಿ ಅದನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ. ಮೊದಲು ಟೊಮೆಟೊವನ್ನು ತುಂಡು ತುಂಡಾಗಿ ಕತ್ತರಿಸಿ. ನಂತರ ಅದನ್ನು ನಿಮ್ಮ ಚರ್ಮದ ಮೇಲೆ ಅಂದರೆ ಟ್ಯಾನ್ ಆದ ಭಾಗದ ಮೇಲೆ ಸ್ವಲ್ಪ ಸಮಯದವರೆಗೆ ಉಜ್ಜಿ, ನಂತರ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ. ಈ ವಿಧಾನ ಮಾಡುವುದರಿಂದ ನೀವು ಗಮನಾರ್ಹ ವ್ಯತ್ಯಾಸ ಕಾಣಬಹುದಾಗಿದೆ.
ಅಲೋವೆರಾ: ಅಲೋವೆರಾ ಆರೋಗ್ಯಕ್ಕೆ ಮತ್ತು ಕೂದಲು ಹಾಗೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ನಿಮ್ಮ ಚರ್ಮದ ಮೇಲೆ ಸನ್ ಸ್ಕ್ರೀನ್ ರೀತಿಯಲ್ಲೂ ಕಾರ್ಯನಿರ್ವಹಿಸುತ್ತದೆ. ಇದು ಬಿಸಿಲಿನ ತಾಪ ಮತ್ತು ಟ್ಯಾನಿಂಗ್ ಸಮಸ್ಯೆಯನ್ನು ನಿವಾರಿಸುವುದಲ್ಲದೆ, ಚರ್ಮವನ್ನು ತೇವಗೊಳಿಸುತ್ತದೆ. ಸ್ವಲ್ಪ ಪ್ರಮಾಣದ ಅಲೋವೆರಾ ಜೆಲ್ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಮಿಕ್ಸಿಂಗ್ ಬೌಲ್ನಲ್ಲಿ ಸೇರಿಸಿ. ನಂತರ ಅದನ್ನು ಟ್ಯಾನಿಂಗ್ ಆದ ಭಾಗಕ್ಕೆ ಹಚ್ಚುವುದರಿಂದ ಟ್ಯಾನ್ ಹೋಗಲಾಡಿಸಲು ಇದು ಹೆಚ್ಚು ಪರಿಣಾಮಕಾರಿಯಾಗಿದೆ.
ನೈಸರ್ಗಿಕವಾಗಿ ತೆಂಗಿನ ಹಾಲು: ತೆಂಗಿನ ಹಾಲು ನೈಸರ್ಗಿಕವಾಗಿ ಚರ್ಮದ ಸುಟ್ಟುತನವನ್ನು ತೆಗೆದುಹಾಕಲು ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ಚರ್ಮದಲ್ಲಿ ಕಳೆದುಹೋದ ತೇವಾಂಶವನ್ನು ಮತ್ತೆ ನೀಡಲು ಸಹಾಯ ಮಾಡುವ ಪೋಷಕ ಮತ್ತು ಮಾಯಿಶ್ಚರೈಸಿಂಗ್ ಪೋಷಕಾಂಶವನ್ನು ಹೊಂದಿದೆ. ವಿಟಮಿನ್ ಸಿ ಮತ್ತು ಸೌಮ್ಯ ಆಮ್ಲಗಳಿಂದ ಚರ್ಮದ ಕಲೆಗಳನ್ನು ತೆಗೆಯಲು ಕಾರ್ಯನಿರ್ವಹಿಸುತ್ತದೆ. ಇದನ್ನು ತೆಂಗಿನ ಹಾಲಿನಲ್ಲಿ ಹತ್ತಿ ಉಂಡೆಯನ್ನು ನೆನೆಸಿ ಚರ್ಮದ ಮೇಲೆ ಹಚ್ಚಿ. ಅದು ಚರ್ಮಕ್ಕೆ ಸಂಪೂರ್ಣವಾಗಿ ಹೀರಿಕೊಳ್ಳಲು ಬಿಡಿ, ನಂತರ ಮೃದುವಾದ ಕ್ಲೆನ್ಸರ್ನಿಂದ ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಟ್ಯಾನ್ನಿಂದ ಮುಕ್ತಿ ಪಡೆಯಬಹುದಾಗಿದೆ.
ಈ ಮನೆ ಮದ್ದುಗಳನ್ನು ನೀವು ಮನೆಯಲ್ಲಿಯೇ ಮಾಡಬಹುದಾಗಿದ್ದು, ಇದನ್ನು ಬಳಸುವುದರಿಂದ ಯಾವುದೇ ಅಪಾಯವೂ ಇರುವುದಿಲ್ಲ. ಕೆಲವೊಮ್ಮೆ ನಾವು ಸನ್ ಸ್ಕ್ರೀನ್ ಖರೀದಿಸಲು ಹೆಚ್ಚು ಹಣ ಖರ್ಚು ಮಾಡುತ್ತೇವೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಮನೆ ಮದ್ದು ಮಾಡುವುದರಿಂದ ಚರ್ಮಕ್ಕೂ ಒಳ್ಳೆಯದು, ಅಲ್ಲದೆ ದೇಹಕ್ಕೂ ಒಳ್ಳೆಯದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ