Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Special: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ ಆಹಾರಗಳು

ಈ ಬೇಸಿಗೆಯ ಶಾಖವು ಹೊಟ್ಟೆಯಲ್ಲಿ ಉರಿಯುತವನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಹೊಟ್ಟೆಯನ್ನು ತಂಪಾಗಿಸುವ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯವಾಗಿದೆ.

Summer Special: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ ಆಹಾರಗಳು
Image Credit source: NDTV
Follow us
ಅಕ್ಷತಾ ವರ್ಕಾಡಿ
|

Updated on:Mar 24, 2023 | 6:29 PM

ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದೊಂದಿಗೆ, ನಿಮ್ಮ ದೇಹದ ಶಕ್ತಿಯ ಮಟ್ಟವು ಕುಸಿಯುತ್ತಿದೆ. ನಿಮ್ಮ ದೇಹದಲ್ಲಿನ ನೀರಿನಾಂಶ ಕಡಿಮೆಯಾಗಿ ಆಯಾಸವನ್ನು ಅನುಭವಿಸುತ್ತಿದ್ದೇವೆ. ಅಲ್ಲದೆ ಅತಿಯಾದ ಶಾಖವು ನಿಮ್ಮನ್ನು ನಿರ್ಜಲೀಕರಣವನ್ನಾಗಿ ಮಾಡುತ್ತಿದೆ. ಆದ್ದರಿಂದ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವ ಮೂಲಕ ನಿಮ್ಮನ್ನು ನೀವು ಹೈಡ್ರೀಕರಿಸುವುದು ಬಹಳ ಮುಖ್ಯ. ನೀರಿನ ಜೊತೆಗೆ ಹೊಟ್ಟೆಯನ್ನು ತಂಪು ಮಾಡುವ ಹಣ್ಣು ಮತ್ತು ತರಕಾರಿಗಳ ಪಾನೀಯವನ್ನು ಕುಡಿಯುವುದು ಕುಡಾ ಮುಖ್ಯವಾಗಿದೆ. ದೈನಂದಿನ ಆಹಾರಗಳಲ್ಲಿ ಆ ಪಾನೀಯಗಳನ್ನು ಸೇವನೆ ಮಾಡುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಋತುಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಬದಲಿಸುತ್ತಿರಬೇಕು. ಬೇಸಿಗೆಯಲ್ಲಿ ಆದಷ್ಟು ನಮ್ಮ ದೇಹವನ್ನು ತಂಪಾಗಿರಿಸುವಂತಹ ಆಹಾರವನ್ನು ಸೇವಿಸಬೇಕು.

ಬೇಸಿಗೆಯಲ್ಲಿ ಹೊಟ್ಟೆಯನ್ನು ತಂಪಾಗಿರಿಸುವಂತೆ ಮಾಡುವ ಆಹಾರಗಳು:

ಮೊಸರು:

ಮೊಸರು ಕರುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೊಸರು ಮಾತ್ರವಲ್ಲದೆ ಹಾಲು, ಚೀಸ್ ಇತ್ಯಾದಿ ಡೈರಿ ಉತ್ಪನ್ನಗಳು ಪ್ರೋಬಯಾಟಿಕ್ ಅಂಶವನ್ನು ಹೊಂದಿರುತ್ತವೆ. ಬೇಸಿಗೆಯ ದಿನಗಳಲ್ಲಿ ಹೊಟ್ಟೆಯನ್ನು ತಂಪಾಗಿರಿಸಲು ದಿನಕ್ಕೆ ಒಂದು ಬಾರಿಯಾದರೂ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಿ. ಇಲ್ಲವಾದರೆ ಮೊಸರು ಬಜ್ಜಿ ಅಥವಾ ಮೊಸರು ಆಧಾರಿತ ಸ್ಮೂಥಿಗಳನ್ನು ಮಾಡಿ ಕೂಡಾ ಕುಡಿಯಬಹುದು.

ಕಲ್ಲಂಗಡಿ:

ಬೇಸಿಗೆಗಾಲದಲ್ಲಿ ಹಣ್ಣಿನ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣುಗಳು ಕಾಣಸಿಗುತ್ತವೆ. ಈ ರಸಭರಿತ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶವಿದೆ. ಇದು ಬೇಸಿಗೆಯಲ್ಲಿ ಸೇವಿಸಲು ಅತ್ಯುತ್ತಮವಾದ ಹಣ್ಣಾಗಿದೆ. ರೆಫ್ರಿಜರೆಟರ್‌ನಲ್ಲಿ ಇಟ್ಟು ನಂತರ ಈ ಹಣ್ಣನ್ನು ಸೇವಿಸುವುದರಿಂದ ಇದು ಹೆಚ್ಚು ತಂಪಾಗಿರುತ್ತದೆ. ಅಲ್ಲದೆ ನೀವು ಕಲ್ಲಂಗಡಿ ಜ್ಯೂಸ್ ಅಥವಾ ಕಲ್ಲಂಗಡಿ ಸ್ಮೂಥಿಯನ್ನು ಮಾಡಿ ಈ ಸುಡು ಬೇಸಿಗೆಯಲ್ಲಿ ಕುಡಿಯಬಹುದು.

ಇದನ್ನೂ ಓದಿ: ನಿಮ್ಮ ದೈನಂದಿನ ಆಹಾರದಲ್ಲಿ ಗೋಡಂಬಿ ಹಾಲನ್ನು ಸೇರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ

ಓಟ್ಸ್ ಹೊಟ್ಟು:

ಓಟ್ಸ್ ಹೆಚ್ಚಿನ ಪ್ರಮಾಣದ ಫೈಬರ್ ಅಂಶವನ್ನು ಹೊಂದಿದೆ. ಇದು ನಮ್ಮ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಇದು ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಒಳಗೊಂಡಿರುವ ಕಾರಣ ಇದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಓಟ್ಸ್ ಹೊಟ್ಟು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುವ ಖನಿಜಗಳು ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಹಾಗಾಗಿ ಓಟ್ಸ್ ಹೊಟ್ಟಿನಿಂದ ತಯಾರಿಸಿದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ.

ಮೂಲಿಕೆಗಳ ಪಾನೀಯ:

ನಿಮ್ಮನ್ನು ನೀವು ಹೈಡ್ರೇಟ್ ಆಗಿ ಇರಿಸಿಕೊಳ್ಳುವ ಸಲುವಾಗಿ ದಿನವಿಡಿ ಸಾಕಷ್ಟು ನೀರನ್ನು ಕುಡಿದು ಬೇಸತ್ತಿದ್ದೀರಾ? ಚಿಂತಿಸಬೇಡಿ, ನೀರಿನ ಬದಲು ರುಚಿಕರವಾದ ಈ ಮೂಲಿಕೆಗಳ ಪಾನೀಯವನ್ನು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಿ. ಮುದೀನಾ ಹಾಗೂ ನಿಂಬೆಯಂತಹ ಮೂಲಿಕೆಗಳು ದೇಹವನ್ನು ತಂಪಾಗಿರಿಸುವ ಅಂಶವನ್ನು ಹೊಂದಿದೆ. ಒಂದು ಜಾರ್‌ಗೆ ನೀರನ್ನು ತುಂಬಿಸಿ ಅದಕ್ಕೆ ಪುದೀನಾ ಎಲೆಗಳು ಮತ್ತು ನಿಂಬೆ ರಸವನ್ನು ಸೇರಿಸಿ. ಜೊತೆಗೆ ನಿಮ್ಮ ಆಯ್ಕೆಯ ಹಣ್ಣುಗಳನ್ನು ಕೂಡಾ ಅದಕ್ಕೆ ಸೇರಿಸಬಹುದು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿಟ್ಟು ಸ್ವಲ್ಪ ಸಮಯದ ನಂತರ ಕುಡಿಯಿರಿ.

ಸೌತೆಕಾಯಿ:

ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸಲು ಸೌತೆಕಾಯಿಯು ಉತ್ತಮವಾದ ಆಹಾರವಾಗಿದೆ. ಇದನ್ನು ಖಾಲಿ ತಿನ್ನಲು ಇಷ್ಟ ಪಡದವರು ಸೌತೆಕಾಯಿಯ ಸಲಾಡ್ ಮಾಡಿ ಸೇವಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:29 pm, Fri, 24 March 23

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ