Sunita Williams: ಭೂಮಿಗೆ ಮರಳಿದ ಬಳಿಕ ಸುನಿತಾ ವಿಲಿಯಮ್ಸ್ ಮೊದಲು ಸವಿದ ಆಹಾರವಿದು, ಈ ಆಹಾರಕ್ಕೂ ತಂದೆಗೂ ಇದೆ ನಂಟು

ಬಾಹ್ಯಾಕಾಶದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಇತ್ತೀಚಿಗಷ್ಟೇ ಭೂಮಿಗೆ ವಾಪಸ್ ಆಗಿರುವುದು ಗೊತ್ತೇ ಇದೆ. ಹೌದು, ಒಂಬತ್ತು ತಿಂಗಳ ಬಳಿಕ ಬಾಹ್ಯಾಕಾಶದಿಂದ ಭೂಮಿಗೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಭಾರತವನ್ನು ಹಾಡಿ ಹೊಗಳಿದ್ದಾರೆ. ಅದಲ್ಲದೇ, ಭೂಮಿಗೆ ಬಂದ ಬಳಿಕ ಮೊದಲು ಏನು ತಿಂದೆ ಎನ್ನುವ ಬಗ್ಗೆಯೇ ಬಹಿರಂಗ ಪಡಿಸಿದ್ದು, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Sunita Williams: ಭೂಮಿಗೆ ಮರಳಿದ ಬಳಿಕ ಸುನಿತಾ ವಿಲಿಯಮ್ಸ್ ಮೊದಲು ಸವಿದ ಆಹಾರವಿದು, ಈ ಆಹಾರಕ್ಕೂ ತಂದೆಗೂ ಇದೆ ನಂಟು
ಸುನಿತಾ ವಿಲಿಯಮ್ಸ್
Edited By:

Updated on: Apr 02, 2025 | 11:36 AM

ವಾಷಿಂಗ್ಟನ್, ಏಪ್ರಿಲ್ 2: ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ (Butch Wilmore) ಅವರು ಸರಿಸುಮಾರು ಒಂಬತ್ತು ತಿಂಗಳ ನಂತರದಲ್ಲಿ ಅಂದರೆ ಮಾರ್ಚ್ 19ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಭೂಮಿಗೆ ಮರಳಿದ ಬಳಿಕ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುನಿತಾ ವಿಲಿಯಮ್ಸ್‌, ಭೂಮಿಗೆ ಬಂದ ಬಳಿಕ ಮೊದಲು ತಿಂದ ಆಹಾರ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್ (grilled cheese sandwich) ಎಂದು ಬಹಿರಂಗ ಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಸುನಿತಾ ವಿಲಿಯಮ್ಸ್ ಅವರನ್ನು, ನೀವು ಭೂಮಿಗೆ ಹಿಂತಿರುಗಿದಾಗ ಮೊದಲು ಏನು ಮಾಡಲು ಬಯಸಿದ್ದೀರಿ? ನಿಮಗೆ ಮೊದಲು ಏನು ತಿನ್ನಬೇಕೆಂಬ ಆಸೆ ಇತ್ತು? ಎಂದು ಪ್ರಶ್ನೆಯನ್ನು ಕೇಳಲಾಗಿದ್ದು, ‘ನಾನು ನನ್ನ ಗಂಡನನ್ನು ಅಪ್ಪಿಕೊಳ್ಳಲು ಬಯಸಿದ್ದೆ ‘ ಎಂದಿದ್ದಾರೆ. ಈ ಸಂದರ್ಭ ಆಹಾರದ ಬಗ್ಗೆ ಮಾತನಾಡಿದ್ದು, ‘ಆಹಾರ ಎಂದ ಕೂಡಲೇ ಮನೆ ನೆನಪಾಗುತ್ತದೆ. ನನ್ನ ತಂದೆ ಶುದ್ಧ ಸಸ್ಯಾಹಾರಿ. ಆದ್ದರಿಂದ ನಾನು ಭೂಮಿಗೆ ಬಂದ ಬಳಿಕ ಮೊದಲು ತಿಂದದ್ದು ಒಳ್ಳೆಯ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್. ಈ ಆಹಾರ ನನಗೆ ಮನೆಯಲ್ಲಿರುವಂತೆ ಭಾಸವಾಗುತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕ್ರೀಡಾಪಟುಗಳು ಆಟದ ಮಧ್ಯದಲ್ಲಿ ಬಾಳೆಹಣ್ಣುಗಳನ್ನು ತಿನ್ನಲು ಕಾರಣವೇನು?

ನಾಸಾ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ

ಭಾರತಕ್ಕೆ ಮರಳುವ ಕುರಿತು ಮಾತನಾಡಿದ್ದು, ‘ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡಿಗೆ ಭೇಟಿ ನೀಡುತ್ತೇನೆ. ಮುಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಭಾರತೀಯ ಪ್ರಜೆಗಳನ್ನು ಭೇಟಿ ಮಾಡುತ್ತೇನೆ. ನನ್ನ ಸುದೀರ್ಘ ಬಾಹ್ಯಾಕಾಶ ವಾಸ್ತವ್ಯದ ಅನುಭವಗಳನ್ನು ನಾನು ಭಾರತೀಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಭಾರತ ಭೇಟಿ ಸಂದರ್ಭದಲ್ಲಿ ನಾನು ಇಸ್ರೋಗೆ ಭೇಟಿ ನೀಡಲು ಬಯಸುತ್ತೇನೆ. ಭಾರತದ ಬಾಹ್ಯಾಕಾಶ ಯೋಜನೆಗಳು ಜಗತ್ತಿನ ಗಮನ ಸೆಳೆಯುತ್ತಿದೆ. ಇಸ್ರೋದ ಈ ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳಲು ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ಸುನಿತಾ ವಿಲಿಯಮ್ಸ್‌ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:13 am, Wed, 2 April 25