ಕ್ರೀಡಾಪಟುಗಳು ಆಟದ ಮಧ್ಯದಲ್ಲಿ ಬಾಳೆಹಣ್ಣುಗಳನ್ನು ತಿನ್ನಲು ಕಾರಣವೇನು?
ಬಾಳೆಹಣ್ಣು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಶಕ್ತಿಯುತ ಮತ್ತು ನೈಸರ್ಗಿಕ ಆಹಾರವಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ನೈಸರ್ಗಿಕ ಸಕ್ಕರೆ ಮತ್ತು ಫೈಬರ್ ಅಂಶವನ್ನು ಒಳಗೊಂಡಿದ್ದು, ಇದು ಸ್ನಾಯುಗಳ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಕ್ರೀಡೆಗಳಲ್ಲಿ ಭಾಗವಹಿಸುವವರು ಹೆಚ್ಚಾಗಿ ಬಾಳೆಹಣ್ಣುಗಳನ್ನು ತಿನ್ನುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಆಟದ ಮಧ್ಯದಲ್ಲಿ ಬಾಳೆಹಣ್ಣುಗಳನ್ನು ಏಕೆ ತಿನ್ನುತ್ತಾರೆ? ಇದರಿಂದ ಪ್ರಯೋಜನಗಳಿವೆಯೇ ತಿಳಿದುಕೊಳ್ಳಿ.

ಬಾಳೆಹಣ್ಣನ್ನು (Bananas) ಸಾಮಾನ್ಯವಾಗಿ ಪ್ರತಿನಿತ್ಯ ಸೇವನೆ ಮಾಡುತ್ತೇವೆ. ಇದರ ವೆಚ್ಚ ಕಡಿಮೆ ಇರುವುದಲ್ಲದೆ ಇದನ್ನು ಸೇವನೆ ಮಾಡಿದಾಗ ಹೊಟ್ಟೆ ತುಂಬಿದ ಅನುಭವ ಆಗುವುದರಿಂದ ಇದನ್ನು ಹೆಚ್ಚು ಹೆಚ್ಚು ಸೇವನೆ ಮಾಡಲಾಗುತ್ತದೆ. ಅದಲ್ಲದೆ ಈ ಹಣ್ಣು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿರುವುದರಿಂದ ಪ್ರತಿ ಮನೆಗಳಲ್ಲಿಯೂ ಇದನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲಿಯೂ ಕ್ರೀಡೆ (Game) ಗಳಲ್ಲಿ ಭಾಗವಹಿಸುವವರು ಹೆಚ್ಚಾಗಿ ಬಾಳೆಹಣ್ಣುಗಳನ್ನು ತಿನ್ನುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಆಟದ ಮಧ್ಯದಲ್ಲಿ ಬಾಳೆಹಣ್ಣುಗಳನ್ನು ಏಕೆ ತಿನ್ನುತ್ತಾರೆ? ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರೀಡಾಪಟುಗಳು ಬಾಳೆಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಲು ಕಾರಣವೇನು?
- ಕ್ರೀಡೆಯಲ್ಲಿ ಭಾಗವಹಿಸುವವರಿಗೆ ದೈಹಿಕ ಶಕ್ತಿಯ ಅಗತ್ಯತೆ ಹೆಚ್ಚಾಗಿ ಇರುತ್ತದೆ. ಏಕಂದರೆ ನಿರಂತರವಾಗಿ ಓಡುವುದು, ಆಟ ಮುಗಿಯುವವರೆಗೂ ಒಂದೇ ರೀತಿಯ ಉತ್ಸಾಹ ಕಾಪಾಡಿಕೊಳ್ಳಲು, ದೇಹದಲ್ಲಿನ ಶಕ್ತಿಯನ್ನು ತ್ವರಿತವಾಗಿ ಹೊರಹಾಕಬೇಕಾಗುತ್ತದೆ. ಆದ ಕಾರಣ, ಆಟಗಾರರು ಆವೇಗವನ್ನು ಕೊನೆತನಕ ಉಳಿಸಿಕೊಳ್ಳಲು ನೈಸರ್ಗಿಕ ಶಕ್ತಿಯ ಮೂಲವಾಗಿರುವ ಬಾಳೆಹಣ್ಣುಗಳ ಸೇವನೆ ಮಾಡುತ್ತಾರೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಗಳು ಬಹಳ ಬೇಗನೆ ಜೀರ್ಣವಾಗಿ ತಕ್ಷಣದ ಶಕ್ತಿಯನ್ನು ಒದಗಿಸುವುದರಿಂದ ಆಟಗಾರರು ಇದನ್ನು ಸೇವನೆ ಮಾಡುತ್ತಾರೆ.
- ಆಟವಾಡುವಾಗ ದೇಹದ ಮೇಲೆ ಹೆಚ್ಚು ಶ್ರಮ ಬೀಳುವುದರಿಂದ ಬೆವರು ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ನಂತಹ ಪ್ರಮುಖ ಎಲೆಕ್ಟ್ರೋಲೈಟ್ ಗಳು ಬೆವರುವಿಕೆಯ ಮೂಲಕ ಹೊರಹಾಕಲ್ಪಡುತ್ತವೆ. ಇದು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಇದನ್ನು ತಡೆಯಲು ಬಾಳೆಹಣ್ಣಿನ ಸೇವನೆ ಮಾಡಬೇಕು. ಏಕೆಂದರೆ ಈ ಹಣ್ಣಿಯಲ್ಲಿರುವ ಪೊಟ್ಯಾಸಿಯಮ್ ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್ಗಳನ್ನು ಮರುಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
- ಆಟವಾಡುವ ಸಮಯದಲ್ಲಿ ಸಾಕಷ್ಟು ಶಕ್ತಿ ವ್ಯಯವಾಗುವುದರಿಂದ ಆಟಗಾರರಲ್ಲಿ ಜೀರ್ಣಕ್ರಿಯೆ ಬಲವಾಗಿರಬೇಕಾಗುತ್ತದೆ. ಆಗ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಜೊತೆಗೆ ದೇಹವೂ ಕೂಡ ಹಗುರವಾಗುತ್ತದೆ. ಈ ರೀತಿಯ ಆರೋಗ್ಯಕರ ಗುಣಗಳು ಬಾಳೆಹಣ್ಣಿನಲ್ಲಿರುವುದರಿಂದ ಇದರ ಆಯ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ ಆದಲ್ಲದೆ ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಹೊಂದಿದೆ.
- ಪದೇ ಪದೇ ಎನರ್ಜಿ ಡ್ರಿಂಕ್ಸ್ ಕುಡಿಯುವುದಕ್ಕಿಂತ ಬಾಳೆಹಣ್ಣಿನ ಸೇವನೆ ಮಾಡುವುದು ತುಂಬಾ ಆರೋಗ್ಯಕರ. ಏಕೆಂದರೆ ಇದು ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್ ಮತ್ತು ಮಾಲ್ಟೋಸ್ ಗಳನ್ನು ಹೊಂದಿರುತ್ತದೆ. ಅವು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತವೆ. ಅಲ್ಲದೆ ಉತ್ತಮ ಪೋಷಕಾಂಶಗಳು ಮತ್ತು ನೈಸರ್ಗಿಕ ಸಕ್ಕರೆಗಳ ಮಿಶ್ರಣವನ್ನು ಹೊಂದಿರುವ ಬಾಳೆಹಣ್ಣು ನಿಧಾನವಾಗಿ ದೇಹಕ್ಕೆ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಆಟಗಾರರಿಗೆ ದೀರ್ಘಕಾಲದ ವರೆಗೂ ಆಯಾಸದ ಅನುಭವ ಆಗುವುದಿಲ್ಲ.
- ಕ್ರೀಡೆಯಲ್ಲಿ ಒತ್ತಡ ಸಹಜ. ಸಾಮಾನ್ಯವಾಗಿ ಗೆಲ್ಲುವ ಭಯ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮನಸ್ಸಿಗೆ ಶಾಂತಿಯನ್ನು ಒದಗಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಆಟಗಾರರು ಬೆವರಿದಾಗ ದೇಹದಲ್ಲಿನ ನೀರು ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ನೀರು ಮತ್ತು ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ಹೈಡ್ರೇಟ್ ಆಗಿ ಉಳಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದು ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ