Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟಿಸಂ ಜಾಗೃತಿ ದಿನ: ಈ ದಿನವನ್ನು ಯಾಕಾಗಿ ಆಚರಣೆ ಮಾಡಬೇಕು? ಉದ್ದೇಶವೇನು?

ಮಕ್ಕಳು ಆರೋಗ್ಯವಾಗಿದ್ದರೆ, ಇಡೀ ಕುಟುಂಬ ಸಂತೋಷವಾಗಿರುತ್ತದೆ. ಆದರೆ ಕೆಲವು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅನಾರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಇದರಲ್ಲಿ ಆಟಿಸಂ ಕೂಡ ಒಂದು. ಇದೊಂದು ನರ ಸಂಬಂಧಿತ ಕಾಯಿಲೆ. ಅನುವಂಶಿಕವಾಗಿ ಅಥವಾ ನರಗಳ ದೋಷದಿಂದ ಬರುವ ಈ ಕಾಯಿಲೆಯ ಬಗ್ಗೆ ಸರಿಯಾದ ರೀತಿಯಲ್ಲಿ ಅರಿವು ಮೂಡಿಸಬೇಕಾಗಿದೆ. ಆಗ ಮಾತ್ರ ಈ ಕಾಯಿಲೆ ಕುರಿತಾದ ಪೂರ್ವಾಗ್ರಹಗಳು ನಿವಾರಣೆಯಾಗಿ, ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಬೆರೆಯಲು ಸಾಧ್ಯವಾಗುತ್ತದೆ.

ಆಟಿಸಂ ಜಾಗೃತಿ ದಿನ: ಈ ದಿನವನ್ನು ಯಾಕಾಗಿ ಆಚರಣೆ ಮಾಡಬೇಕು? ಉದ್ದೇಶವೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 02, 2025 | 9:35 AM

ಆಟಿಸಂ (Autism) ಬಗ್ಗೆ ಕೇಳದವರಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಹಿಂದೆ ಈ ಶಬ್ದ ಕೇಳಿಬರುವುದು ಬಹಳ ಅಪರೂಪವಾಗಿತ್ತು ಆದರೆ ಈಗ ಹಾಗಲ್ಲ ಇದು ಪ್ರಪಂಚದಾದ್ಯಂತ ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಯಾಗಿದೆ. ಇದು ಒಂದು ರೀತಿಯ ಮಾನಸಿಕ ಬೆಳವಣಿಗೆಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು ಮಕ್ಕಳಲ್ಲಿ ಕಂಡು ಬರುತ್ತದೆ. 2ನೇ ವರ್ಷದವರೆಗೆ ಇದರ ಲಕ್ಷಣಗಳು ಅವ್ಯಕ್ತವಾಗಿರುವುದರಿಂದ ಸರಿಸುಮಾರು 3ನೇ ವರ್ಷದಲ್ಲಿ ಇದನ್ನು ಗುರುತಿಸಬಹುಡಗಿದೆ. ಸಾಧ್ಯವಾದಷ್ಟು ಬೇಗನೆ ಇದನ್ನು ಪತ್ತೆಹಚ್ಚಿದರೆ ಇದನ್ನು ಗುಣಪಡಿಸಬಹುದು ಆದರೆ ಇದು ತಡವಾದಲ್ಲಿ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಾಧ್ಯವಾಗದೆ ಹೋಗಬಹುದು. ಈ ನಿಟ್ಟಿನಲ್ಲಿ ಜನರಿಗೆ ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಈ ಕಾಯಿಲೆ ಕುರಿತಾದ ಪೂರ್ವಾಗ್ರಹಗಳು ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯು ಇದಕ್ಕಾಗಿಯೇ ಏ. 2 ರಂದು ಆಟಿಸಂ ಜಾಗೃತಿ ದಿನ ಅಥವಾ ವರ್ಲ್ಡ್‌ ಆಟಿಸಂ ಡೇ (World Autism Awareness Day) ಯನ್ನು ಜಾರಿಗೆ ತಂದಿದೆ.

ಆಟಿಸಂ ಜಾಗೃತಿ ದಿನದ ಇತಿಹಾಸವೇನು?

ವಿಶ್ವದಲ್ಲಿ160 ಮಕ್ಕಳಲ್ಲಿ ಒಬ್ಬರು ಇಂತಹ ಸಮಸ್ಯೆಗೆ ಒಳಗಾಗುವರು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ತಿಳಿಸಿದೆ. ಈ ಕಾಯಿಲೆಯನ್ನು ಸ್ವಲೀನತೆ ಎಂದು ಕೂಡ ಕರೆಯಲಾಗುತ್ತದೆ. ಆಟಿಸಂ ಇರುವ ಮಕ್ಕಳು ಬೇರೆಯವರಂತೆ ಒಳ್ಳೆಯ ಜೀವನ ಸಾಗಿಸಬೇಕು ಮತ್ತು ಅವರು ಕೂಡ ಸಮಾಜದ ಒಂದು ಅಂಗ ಆಗಬೇಕು ಎನ್ನುವ ಉದ್ದೇಶದಿಂದ 2007 ನವೆಂಬರ್ 1ರಂದು ವಿಶ್ವ ಸಂಸ್ಥೆಯು ಏ. 2 ರಂದು ವಿಶ್ವ ಆಟಿಸಂ ದಿನ ಅಥವಾ ವರ್ಲ್ಡ್‌ ಆಟಿಸಂ ಡೇ ಯನ್ನು ಆಚರಿಸಬೇಕು ಎಂದು ನಿರ್ಣಯ ಕೈಗೊಂಡಿತು. ಹಾಗಾಗಿ ಈ ದಿನವನ್ನು 2008ರಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಈ ದಿನದ ಉದ್ದೇಶವೇನು?

ಮೊದಲು ಆಟಿಸಂ ಅನ್ನು ಬುದ್ಧಿಮಾಂದ್ಯ ಕಾಯಿಲೆ ಎಂದು ತಿಳಿದು, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿತ್ತು. ಹಾಗಾಗಿ ಅವರಿಗೆ ಅಗತ್ಯವಿರುವ ವಿಶೇಷ ಆರೈಕೆಗಳು ಸಿಗುತ್ತಿರಲಿಲ್ಲ. ಆದರೆ ಆಟಿಸಂ ಮಕ್ಕಳು ಬುದ್ಧಿಮಾಂದ್ಯರಲ್ಲ. ಅಂತಹ ಮಕ್ಕಳು ಇತರ ಮಕ್ಕಳಂತೆಯೇ ಇರುತ್ತಾರೆ. ಅವರ ಕೆಲವು ನಡವಳಿಕೆಗಳು ಭಿನ್ನವಾಗಿರಬಹುದು. ಸಮಾಜದಲ್ಲಿ ಇತರ ಮಕ್ಕಳಂತೆ ಶಿಕ್ಷಣ ಪಡೆಯುವ, ವಿಶೇಷ ಕೌಶಲ್ಯಗಳನ್ನು ಕಲಿಯುವ ಹಕ್ಕು ಅವರಿಗೂ ಇದೆ. ಅವರೂ ಕೂಡ ಬುದ್ಧಿವಂತರು ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಜೊತೆಗೆ ಈ ಕಾಯಿಲೆ ಕುರಿತಾದ ಪೂರ್ವಾಗ್ರಹಗಳು ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ
Image
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
Image
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
Image
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
Image
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಪತ್ತೆ ಮಾಡಲು ಈ ರೀತಿ ಮಾಡಿ

ಇದನ್ನು ಗುರುತಿಸುವುದು ಹೇಗೆ?

ಮಗು ಹುಟ್ಟಿ ಒಂದು ವರ್ಷದ ಅವಧಿಯಲ್ಲಿ ಮುಗುಳ್ನಗು ತೋರದಿದ್ದಲ್ಲಿ ಅಥವಾ ಯಾವುದೇ ರೀತಿಯ ಸಂತೋಷ ವ್ಯಕ್ತಪಡಿಸದಿದ್ದಲ್ಲಿ, ಕೈ ಚಲನೆಯನ್ನು ಗುರುತಿಸುವಲ್ಲಿ ಹಿಂದುಳಿದಿದ್ದರೆ ಹಾಗೂ 2 ವರ್ಷದ ನಂತರವೂ ನಿಮ್ಮ ಮಗು ಒಂದೆರಡು ಶಬ್ದಗಳನ್ನು ಮಾತನಾಡದಿದ್ದಲ್ಲಿ ಆಟಿಸಂ ಕಂಡುಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಹಾಗಾಗಿ ಪೋಷಕರು ಇಂತಹ ಸಮಸ್ಯೆಯನ್ನು ಬೇಗ ಪತ್ತೆ ಹಚ್ಚಬೇಕು. ಏಕೆಂದರೆ ಈ ಸಮಸ್ಯೆಯನ್ನು ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಲ್ಲಿ ಈ ಮಕ್ಕಳೂ ಸಮಾಜದಲ್ಲಿ ಸಾಮಾನ್ಯ ಜೀವನವನ್ನು ನಡೆಸಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Wed, 2 April 25

ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು