Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಶ್ವಾನಗಳಿಗೆ ಸಾರ್ವಜನಿಕ ನೀರಿನ ತೊಟ್ಟಿಗಳಲ್ಲಿ ನೀರು ಕುಡಿಯಲು ಬಿಡುತ್ತೀರಾ? ಇದು ಆರೋಗ್ಯಕ್ಕೆ ಅಪಾಯಕಾರಿ

ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆಯ ವೇಳೆ ಮನೆಯ ಶ್ವಾನದೊಂದಿಗೆ ವಾಕಿಂಗ್ ಹೋಗುವುದು ಮಾಮೂಲಿ. ಆದರೆ ಈ ವೇಳೆ ಬಾಯಾರಿಕೆಯಾದಾಗ ಪ್ರಾಣಿಗಳು ಕುಡಿಯುವ ನೀರಿನ ತೊಟ್ಟಿಯಲ್ಲಿರುವ ನೀರನ್ನು ಕುಡಿಯುತ್ತವೆ. ಆದರೆ ಈ ನೀರಿನ ತೊಟ್ಟಿಯೂ ಹಾನಿಕಾರಕ ಬ್ಯಾಕ್ಟೀರಿಯಾ, ಪರಾವಲಂಬಿಗಳು ಮತ್ತು ವಿಷಕಾರಿ ವಸ್ತುಗಳನ್ನು ಹೊಂದಿರಬಹುದು ಎಂದು ಪಶುವೈದ್ಯರಾದ ಟೆಲ್ಲರ್ ಎಚ್ಚರಿಸಿದ್ದಾರೆ. ಇದು ನಾಯಿಗಳಿಗೆ ಗಂಭೀರ ಆರೋಗ್ಯ ಅಪಾಯವನ್ನುಂಟು ಮಾಡಬಹುದು. ಹೀಗಾಗಿ ಮಾಲೀಕರು ಮನೆಯಿಂದ ಶುದ್ಧ ನೀರನ್ನು ತರುವಂತೆ ಮತ್ತು ತಮ್ಮ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಹೈಡ್ರೀಕರಿಸಿಟ್ಟುಕೊಳ್ಳಲು ಸಲಹೆ ನೀಡಲಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಮನೆಯ ಶ್ವಾನಗಳಿಗೆ ಸಾರ್ವಜನಿಕ ನೀರಿನ ತೊಟ್ಟಿಗಳಲ್ಲಿ ನೀರು ಕುಡಿಯಲು ಬಿಡುತ್ತೀರಾ? ಇದು ಆರೋಗ್ಯಕ್ಕೆ ಅಪಾಯಕಾರಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 01, 2025 | 2:03 PM

ಬಿರು ಬಿಸಿಲು ಜೋರಾಗಿದೆ. ಈ ಬೇಸಿಗೆ (Summer) ಯಲ್ಲಿ ಪ್ರಾಣಿ ಪಕ್ಷಿಗಳು ಬಾಯಾರಿಕೆ ನೀಗಿಸಲು ಪರದಾಡುವುದನ್ನು ನೋಡಿರಬಹುದು. ಮನುಷ್ಯರಿಗೆ ದಾಹವಾದರೆ ಬಾಟಲಿ ನೀರು (water) ಖರೀದಿಸಿ ಕುಡಿಯುತ್ತಾರೆ. ಆದರೆ ಪ್ರಾಣಿಗಳ ಬಾಯಾರಿಕೆ ನೀಗಿಸಲು ರಸ್ತೆಬದಿ (road side), ಪಾರ್ಕ್ (park) ಸೇರಿದಂತೆ ಇನ್ನಿತ್ತರ ಸ್ಥಳ ಗಳಲ್ಲಿ ಕುಡಿಯುವ ನೀರಿನ ತೊಟ್ಟಿ (public water bowls) ಸೇರಿದಂತೆ ಮಡಿಕೆ ಕುಡಿಕೆಗಳಲ್ಲಿ ನೀರನ್ನು ಇಟ್ಟಿರುತ್ತಾರೆ. ಸಂಜೆಯ ವೇಳೆ ವಾಕಿಂಗ್ ಗೆಂದು ಮನೆಯ ಶ್ವಾನ (dog) ವನ್ನು ಕರೆದುಕೊಂಡು ಹೋದಾಗ ಈ ನೀರಿನ ತೊಟ್ಟಿಗಳಲ್ಲಿ ನೀರು ಕುಡಿದು ತಮ್ಮ ದಾಹ ತೀರಿಸಿಕೊಳ್ಳುತ್ತವೆ. ಆದರೆ ಈ ನೀರಿನ ಮೂಲಗಳು ನಿಮ್ಮ ಮನೆಯ ಸಾಕುಪ್ರಾಣಿಗಳಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಹಾಗಾದ್ರೆ ಸಾರ್ವಜನಿಕ ನೀರಿನ ತೊಟ್ಟಿಗಳಲ್ಲಿ ನೀರಿನ ಬದಲಾಗಿ ಮನೆ ಮಾಲೀಕನು ಸಾಕು ಪ್ರಾಣಿಗೆ ಕುಡಿಯಲು ಬೇಕಾದ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಬಹುದು? ನೀರಿನ ತೊಟ್ಟಿಗಳಲ್ಲಿ ನೀರು ಕುಡಿಯುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ? ಎಂದು ಟೆಕ್ಸಾಸ್ ಎ ಹಾಗೂ ಎಂ ಸ್ಕೂಲ್ ಆಫ್ ವೆಟರ್ನರಿ ಮೆಡಿಸಿನ್ ಮತ್ತು ಬಯೋಮೆಡಿಕಲ್ ಸೈನ್ಸಸ್‌ನ ಕ್ಲಿನಿಕಲ್ ಪ್ರೊಫೆಸರ್ ಡಾ. ಲೋರಿ ಟೆಲ್ಲರ್ (Dr. Lori Teller, clinical professor at the Texas A and M School of Veterinary Medicine and Biomedical Sciences) ವಿವರಿಸಿದ್ದಾರೆ.

ಪಶುವೈದ್ಯ ಟೆಲ್ಲರ್ ಹೇಳುವ ಪ್ರಕಾರ, ‘ಸಾಕುಪ್ರಾಣಿ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ನೀರಿನ ತೊಟ್ಟಿಗಳಲ್ಲಿ ನೀರು ಕುಡಿಯಲು ಬಿಡುವ ಮೊದಲು ಈ ನೀರಿನ ಗುಣಮಟ್ಟವನ್ನು ಮೌಲ್ಯಮಾಪನ ಮಾಡಬೇಕು. ಕುಡಿಯುವ ನೀರಿನ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಅಥವಾ ನೀರು ದೀರ್ಘಕಾಲದವರೆಗೆ ನಿಂತಿದ್ದರೆ ಇದು ಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ನೀರಿನ ತೊಟ್ಟಿಯಲ್ಲಿ ತರಗೆಲೆಗಳು, ಪರಿಸರ ಮಾಲಿನ್ಯಕಾರಕಗಳು ಹಾಗೂ ವಿಷಕಾರಿ ವಸ್ತುಗಳು ಸೇರಿಕೊಳ್ಳಬಹುದು. ಹೀಗಾಗಿ ಶ್ವಾನಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ, ಈ ಬಗ್ಗೆ ಮಾಲೀಕರು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ನೀರಿನ ತೊಟ್ಟಿಯಿಂದ ಹರಡಬಹುದಾದ ರೋಗಗಳು ಹೀಗಿವೆ

  • ಕೆನ್ನೆಲ್ ಕೆಮ್ಮು: ಇದೊಂದು ಉಸಿರಾಟದ ಸೋಂಕಾಗಿದ್ದು, ಅತಿಯಾಗಿ ಕೆಮ್ಮುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹಸಿವಿನ ಕೊರತೆ, ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ.
  • ಪ್ಯಾಪಿಲೋಮ : ಲಾಲಾರಸದ ಮೂಲಕ ಹರಡುವ ವೈರಸ್ ಇದಾಗಿದ್ದು, ಇದು ಬಾಯಿಯ ಒಳಗೆ ಮತ್ತು ಸುತ್ತಲೂ ನರಹುಲಿಗಳನ್ನು ಉಂಟುಮಾಡುತ್ತದೆ.
  • ಸಾಲ್ಮೊನೆಲ್ಲಾ ಸೋಂಕು : ಇದು ಕರುಳಿನ ಬ್ಯಾಕ್ಟೀರಿಯಾದ ಸೋಂಕಾಗಿದ್ದು, ರಕ್ತಸಿಕ್ತ ಅತಿಸಾರ, ಜ್ವರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
  • ಗಿಯಾರ್ಡಿಯಾ : ಗಿಯಾರ್ಡಿಯಾ ಎನ್ನುವ ಸಣ್ಣ ಪರಾವಲಂಬಿಯಿಂದ ಉಂಟಾಗುವ ಕರುಳಿನ ಸೋಂಕಾಗಿದ್ದು ,ತೂಕ ನಷ್ಟ, ಅತಿಸಾರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
  • ಲೆಪ್ಟೊಸ್ಪೈರೋಸಿಸ್ : ಇದು ಪ್ರಾಣಿಗಳ ಮೂತ್ರ ವಿಸರ್ಜನೆಯಿಂದ ಸಾಮಾನ್ಯವಾಗಿ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ. ಇದು ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತದೆ. ಇದರಿಂದ ನಾಯಿಗಳಿಗೆ ಸಾವು ಸಂಭವಿಸಬಹುದು ಎಂದು ಪಶು ವೈದ್ಯರು ತಿಳಿಸಿದ್ದಾರೆ.

‘ಮನೆಯ ಮಾಲೀಕರು ತಮ್ಮ ಮನೆಯ ನಾಯಿಗೆ ನೀಡಲು ಮಡಿಸಬಹುದಾದ, ಪೋರ್ಟಬಲ್ ಬಟ್ಟಲು ಮತ್ತು ಸ್ವಲ್ಪ ತಾಜಾ ನೀರನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಉತ್ತಮ. ಇಲ್ಲದಿದ್ದರೆ ರೆಸ್ಟೋರೆಂಟ್ ಅಥವಾ ಅಂಗಡಿಯಲ್ಲಿ ನೀರು ಖರೀದಿಸಿ ಬಾಯಾರಿಕೆ ಅದರ ನೀಗಿಸುವುದು ಒಳ್ಳೆಯದು. ಸಾರ್ವಜನಿಕವಾಗಿ ಲಭ್ಯವಿರುವ ನೀರಿನ ತೊಟ್ಟಿಗಳಲ್ಲಿ ಶ್ವಾನಗಳಿಗೆ ನೀರು ಕುಡಿಯಲು ಬಿಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂದಿದ್ದಾರೆ ಪಶುವೈದ್ಯರು.

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಇದನ್ನೂ ಓದಿ: ಕೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಹೇಗೆ ಪ್ರಯೋಜನಕಾರಿ?

ಅದಲ್ಲದೇ, ಕುಡಿಯುವ ನೀರಿನ ತೊಟ್ಟಿಗಳಿಗೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳನ್ನು ಪರಿಗಣಿಸುವುದರ ಜೊತೆಗೆ, ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸಾಕುಪ್ರಾಣಿಗಳಿದ್ದರೆ ಅದರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೌದು, ಒಂದೇ ಬಟ್ಟಲಿನಲ್ಲಿ ಆಹಾರ ತಿನ್ನುವುದರಿಂದ ಆದರಿಂದ ಉಂಟಾಗುವ ಅಪಾಯಗಳನ್ನು ಸಹ ಮಾಲೀಕರು ಪರಿಗಣಿಸಬೇಕು. ಮನೆಯಲ್ಲಿರುವ ಸಾಕುಪ್ರಾಣಿಗಳ ನೀರಿನ ಬಟ್ಟಲು ಅಥವಾ ಆಹಾರ ಬಟ್ಟಲುಗಳು ನಿಯಮಿತವಾಗಿ ಸೋಪು ಮತ್ತು ಬಿಸಿ ನೀರಿನಿಂದ ತೊಳೆಯುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ