Skin Care Tips: ಚರ್ಮದ ಆರೈಕೆಯಲ್ಲಿ ಕರ್ಪೂರ ಬಳಸಿ; ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕರ್ಪೂರವು ಸುಟ್ಟಗಾಯಗಳನ್ನು ಮತ್ತು ಗಾಯದಿಂದ ಉಂಟಾದ ಉರಿಯೂತವನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. ಕರ್ಪೂರದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚುವುದರಿಂದ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಜೊತೆಗೆ ಸುಟ್ಟ ಗಾಯಗಳಿಂದ ಉಂಟಾದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ. ಇನ್ನಷ್ಟು ವಿವರ ಇಲ್ಲಿದೆ.

Skin Care Tips: ಚರ್ಮದ ಆರೈಕೆಯಲ್ಲಿ ಕರ್ಪೂರ ಬಳಸಿ; ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Camphor
Image Credit source: Pinterest

Updated on: Nov 15, 2023 | 1:01 PM

ಚರ್ಮದ ಆರೈಕೆಯಲ್ಲಿ ಕರ್ಪೂರ ತುಂಬಾ ಉಪಯುಕ್ತವಾಗಿದೆ. ಕರ್ಪೂರವನ್ನು ವಿಶೇಷವಾಗಿ ಚರ್ಮಕ್ಕೆ ಹಚ್ಚುವುದರಿಂದ ತುರಿಕೆ ಮತ್ತು ದದ್ದುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಕರ್ಪೂರದ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆ, ಕಿರಿಕಿರಿಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಕರ್ಪೂರವು ಸುಟ್ಟಗಾಯಗಳನ್ನು ಮತ್ತು ಗಾಯದಿಂದ ಉಂಟಾದ ಉರಿಯೂತವನ್ನು ನಿವಾರಿಸುತ್ತದೆ. ಕರ್ಪೂರದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚುವುದರಿಂದ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಜೊತೆಗೆ ಸುಟ್ಟ ಗಾಯಗಳಿಂದ ಉಂಟಾದ ಕಲೆಗಳನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ.

ಮೊಡವೆ ಸಮಸ್ಯೆ ನಿವಾರಣೆಗೆ ಕರ್ಪೂರ:

ಮೊಡವೆ ಸಮಸ್ಯೆಗಳನ್ನು ಕಡಿಮೆ ಮಾಡಲು ಕರ್ಪೂರ ಸಹಾಯ ಮಾಡುತ್ತದೆ. ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಮೊಡವೆ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೊಡವೆಗಳಿಗೆ ಚಿಕಿತ್ಸೆ ನೀಡಲು ನೀವು ಕರ್ಪೂರವನ್ನು ಬಳಸಬಹುದು.

ಒಡೆದ ಹಿಮ್ಮಡಿ ಸಮಸ್ಯೆಗೆ ಕರ್ಪೂರ :

ಚಳಿಗಾಲದಲ್ಲಿ ಕಣಕಾಲುಗಳು ಬಿರುಕು ಬಿಡುವ ಸಾಧ್ಯತೆ ಹೆಚ್ಚು. ಕರ್ಪೂರವು ಬಿರುಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಕರ್ಪೂರವನ್ನು ಜಾಕಿ ನೆನೆಸಿದ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ಇಡಿ. ಆ ನಂತರ ಪೆಟ್ರೋಲಿಯಂ ಜೆಲ್ಲಿ ಅಥವಾ ಮಾಯಿಶ್ಚರೈಸರ್ ಅನ್ನು ಪಾದಗಳಿಗೆ ಹಚ್ಚಿದರೆ ಬಿರುಕುಗಳು ಮಾಯವಾಗುತ್ತವೆ.

ಇದನ್ನೂ ಓದಿ: ಒಂದು ವಾರದಲ್ಲೇ ಮೊಡವೆ ಸಮಸ್ಯೆ ಹೋಗಲಾಡಿಸಲು ಪುದೀನಾ ಫೇಸ್ ಪ್ಯಾಕ್

ಉಗುರಿನ ಸೋಂಕು:

ಉಗುರುಗಳ ಮೂಲೆಯಲ್ಲಿ ಸೋಂಕು ಮತ್ತು ನೋವು ಇದ್ದರೆ ಕರ್ಪೂರವನ್ನು ಬಳಸಬಹುದು. ಕರ್ಪೂರದ ಎಣ್ಣೆಯು ಉಗುರುಗಳ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ನಂಜುನಿರೋಧಕ ಮತ್ತು ಆಂಟಿಫಂಗಲ್ ಪದಾರ್ಥಗಳನ್ನು ಹೊಂದಿರುತ್ತದೆ. ಆದ್ದರಿಂದ ಉಗುರಿನಲ್ಲಿ ನೋವು ಕಾಣಿಸಿಕೊಂಡರೆ ಕರ್ಪೂರದ ಎಣ್ಣೆ ಬಳಸಿ.

ಕೂದಲಿನ ಸಮಸ್ಯೆ:

ಕರ್ಪೂರ ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕರ್ಪೂರದ ಎಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚಿದರೆ ಚಳಿಗಾಲದಲ್ಲಿ ತಲೆಹೊಟ್ಟು ಮತ್ತು ತುರಿಕೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: