AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣಪುಟ್ಟ ವಿಚಾರಗಳಿಗೂ ಅಳು ಬರುತ್ತಾ, ಕಾರಣ ಏನಿರಬಹುದು?

ಸಣ್ಣಪುಟ್ಟ ವಿಚಾರಗಳಿಗೂ ನಿಮಗೆ ಅಳು ಬರುತ್ತಾ, ಯಾಕೋ ಸ್ವಲ್ಪ ದಪ್ಪ ಆಗಿದೀಯಾ ಎಂದರೂ ಅಳು, ಇವತ್ತು ನೀನು ಹಾಕಿರೋ ಬಟ್ಟೆ ಚೆನ್ನಾಗಿಲ್ಲ ಎಂದರೂ ಅಳು, ಕೆಲವರಿಗೆ ಜೋರಾದ ಶಬ್ದ ಕೇಳಿದರೆ, ನಕಾರಾತ್ಮಕ ಆಲೋಚನೆಗಳು ಮನಸ್ಸಲ್ಲಿ ಸುಳಿದಾಡಿದರೆ, ನಿಮಗೆ ತುಂಬಾ ಇಷ್ಟವಾದದ್ದನ್ನು ಬಿಟ್ಟುಕೊಟ್ಟಾಗ ಅಳು ಬರುವುದು ಸಹಜ.ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ದುರ್ಬಲ ಮತ್ತು ಅಸಹಾಯಕತೆಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

ಸಣ್ಣಪುಟ್ಟ ವಿಚಾರಗಳಿಗೂ ಅಳು ಬರುತ್ತಾ, ಕಾರಣ ಏನಿರಬಹುದು?
ಕಣ್ಣೀರುImage Credit source: Healthshots.com
ನಯನಾ ರಾಜೀವ್
|

Updated on: Dec 11, 2023 | 3:31 PM

Share

ಸಣ್ಣಪುಟ್ಟ ವಿಚಾರಗಳಿಗೂ ನಿಮಗೆ ಅಳು ಬರುತ್ತಾ, ಯಾಕೋ ಸ್ವಲ್ಪ ದಪ್ಪ ಆಗಿದೀಯಾ ಎಂದರೂ ಅಳು, ಇವತ್ತು ನೀನು ಹಾಕಿರೋ ಬಟ್ಟೆ ಚೆನ್ನಾಗಿಲ್ಲ ಎಂದರೂ ಅಳು ಶುರು.  ಕೆಲವರಿಗೆ ಜೋರಾದ ಶಬ್ದ ಕೇಳಿದರೆ, ನಕಾರಾತ್ಮಕ ಆಲೋಚನೆಗಳು ಮನಸ್ಸಲ್ಲಿ ಸುಳಿದಾಡಿದರೆ, ನಿಮಗೆ ತುಂಬಾ ಇಷ್ಟವಾದದ್ದನ್ನು ಬಿಟ್ಟುಕೊಟ್ಟಾಗ ಅಳು ಬರುವುದು ಸಹಜ.ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ದುರ್ಬಲ ಮತ್ತು ಅಸಹಾಯಕತೆಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ಕಣ್ಣೀರು ಕಣ್ಣುಗಳನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಆದರೆ ಅದೇ ಸಮಯದಲ್ಲಿ, ಇದು ವ್ಯಕ್ತಿಯನ್ನು ಇತರರ ಮುಂದೆ ದುರ್ಬಲಗೊಳಿಸುತ್ತದೆ.

ಖಿನ್ನತೆ ಕಾರಣ ನೀವು ಖಿನ್ನತೆಗೆ ಒಳಗಾಗಿದ್ದರೆ, ಆಗಾಗ ಅಳುವುದು ತುಂಬಾ ಸಾಮಾನ್ಯವಾಗಿದೆ. ಈ ವ್ಯಕ್ತಿಗಳು ತಮಗಾದ ನೋವನ್ನು ಮರೆಯಲು ವರ್ಷಗಟ್ಟಲೇ ತೆಗೆದುಕೊಳ್ಳುತ್ತಾರೆ. ಚಿಂತೆ ಮಾಡುತ್ತಾರೆ, ತೂಕನಷ್ಟವನ್ನೂ ಅನಭವಿಸುತ್ತಅರೆ.

ನೋವು ಮರೆಯಲು ಸಾಧ್ಯವಾಗದಿರುವುದು ವರ್ಷಗಳ ನಂತರವೂ ಆಗಿದ್ದನ್ನು ಪದೇ ಪದೇ ನೆನಪಿಸಿಕೊಳ್ಳುವುದು, ಇದು ಅವರನ್ನು ಭಾವನಾತ್ಮಕವಾಗಿ ದುರ್ಬಲಗೊಳಿಸುತ್ತದೆ. ಹೆಚ್ಚಿನ ಸಮಯವನ್ನು ಹಳೆಯ ನೆನಪಿನಲ್ಲೇ ಕಳೆಯಲು ಇಷ್ಟಪಡುತ್ತಾರೆ.

ಜನರ ಕಷ್ಟ ನೋಡಿ ಭಾವುಕರಾಗುವುದು ಕೆಲವು ಮಂದಿ ಬೇರೆಯವರ ಕಷ್ಟ ನೋಡಿ ಮರುಗುತ್ತಾರೆ, ನಮ್ಮಲ್ಲಿ ಇದ್ದುದನ್ನೆಲ್ಲಾ ಧಾನ ಮಾಡುತ್ತಾರೆ, ಕೆಲವೊಮ್ಮೆ ಅವರೇ ಪೆಟ್ಟು ತಿಂದಾಗ ಆ ನೋವಿನಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ.

ಮತ್ತಷ್ಟು ಓದಿ: ಉಗುರಿನ ಸುತ್ತ ಕಪ್ಪಾಗಿದೆಯೇ? ಅದಕ್ಕೆ ಪರಿಹಾರ ಇಲ್ಲಿದೆ

ಹಾರ್ಮೋನ್​ಗಳ ಬದಲಾವಣೆ ಹಾರ್ಮೋನುಗಳ ಏರಿಳಿತಗಳಂತಹ ಜೈವಿಕ ಅಂಶಗಳು ಆಗಾಗ ಅಳುವಂತೆ ಮಾಡುತ್ತದೆ, ಹಾರ್ಮೋನುಗಳ ಬದಲಾವಣೆಯಿಂದಾಗಿ, ಮಹಿಳೆಯರು ಆಗಾಗ ಅಳುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ವಿಶೇಷವಾಗಿ ಋತುಚಕ್ರ, ಗರ್ಭಾವಸ್ಥೆ ಅಥವಾ ಋತುಬಂಧದಂತಹ ಕೆಲವು ಹಂತಗಳಲ್ಲಿ ಹೆಚ್ಚು ಭವುಕರಾಗುತ್ತಾರೆ.

ಬೇರೆಯವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಷ್ಟೋ ಬಾರಿ ನಮ್ಮ ಎದುರಿಗಿರುವ ವ್ಯಕ್ತಿ ನಮ್ಮೊಂದಿಗೆ ಮಾತನಾಡುವುದಿಲ್ಲ, ಅಥವಾ ಸ್ನೇಹಿತರೇ ಯಾವುದೋ ಸಂದರ್ಭದಲ್ಲಿ ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸುತ್ತಾರೆ, ಆಗ ಅದು ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಆಗ ಅಂಥವರ ಮಾತಿಗೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಿ. ನಿಮ್ಮ ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿವಹಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ