ಪ್ರೇಮಿಗಳ ದಿನಕ್ಕೆ ಇನ್ನೇನು ಕೆಲವೇ ದಿನ ಗಳು ಮಾತ್ರ ಬಾಕಿಯಿವೆ..ಆದರೆ ಈಗಾಗಲೇ ಒಂದು ವಾರಕ್ಕೂ ಮುಂಚೆಯೇ ಪ್ರೇಮಿಗಳ ಸಂಭ್ರಮವು ಜೋರಾಗಿದೆ. ಈಗಾಗಲೇ ಜೋಡಿಗಳು ಪ್ರತಿಯೊಂದು ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 12 ನೇ ತಾರೀಕಿನಂದು ಪ್ರೇಮಿಗಳು “ಹಗ್ ಡೇ”(Hug Day ) ಅಥವಾ ಅಪ್ಪುಗೆಯ ದಿನವನ್ನು ಆಚರಿಸುತ್ತಾರೆ. ಪರಸ್ಪರ ಪ್ರೀತಿ ಭಾವನೆಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಬಿಗಿಯಾಗಿ ಅಪ್ಪಿಕೊಂಡು ತಮ್ಮ ಪ್ರೀತಿಯನ್ನು ಪ್ರೇಮಿಗೆ ತಿಳಿಸುತ್ತಾರೆ. ಆದರೆ ಪ್ರೇಮಿಗಳ ವಾರದಲ್ಲಿ ಬರುವ ಹಗ್ ಡೇಯೆನ್ನುವುದು ಪ್ರೇಮಿಗಳಿಗೆ ಮಾತ್ರವಲ್ಲ. ಈ ದಿನದಂದು ತಂದೆ ತಾಯಿ, ಸ್ನೇಹಿತರು, ಸಂಗಾತಿಯನ್ನು ಪರಸ್ಪರ ಆಲಿಂಗಿಸಿಕೊಂಡು ಪರಸ್ಪರ ಪ್ರೀತಿ ಹಂಚಿಕೊಳ್ಳುವ ದಿನವಾಗಿದೆ. ಒಂದು ಪ್ರೀತಿಯ ಅಪ್ಪುಗೆಯಿಂದ ಹಲವಾರು ಲಾಭಗಳಿದ್ದು ಆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.
* ಯಾವುದೇ ಸಂಬಂಧದಲ್ಲಿ ಕೋಪ, ಮನಸ್ತಾಪಗಳು ಉಂಟಾದರೆ ಇಬ್ಬರೂ ಗಟ್ಟಿಯಾಗಿ ಅಪ್ಪುಗೆಯನ್ನು ನೀಡುವುದರಿಂದ ಮನಸ್ಸು ನಿರಾಳವಾಗಿ ಸಂಬಂಧವು ಮೊದಲಿನಂತಾಗುತ್ತದೆ.
* ಮನಸ್ಸನ್ನು ಹಗುರವಾಗಿಸುವ ಬೆಚ್ಚನೆಯ ಅಪ್ಪುಗೆಯು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಆಕ್ಸಿಟೋಸಿಸ್ ಹಾರ್ಮೋನ್ ಪ್ರಮಾಣ ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.
* ದೀರ್ಘಕಾಲವರೆಗೆ ಅಪ್ಪಿಕೊಂಡರೆ ಹೃದಯದ ಆರೋಗ್ಯವು ಸುಧಾರಿಸುವುದರೊಂದಿಗೆ ರಕ್ತದೊತ್ತಡ ಕಡಿಮೆಯಾಗುತ್ತದೆ.
* ಪ್ರೀತಿಯ ಪಾತ್ರರ ಅಪ್ಪುಗೆಯು ನರವ್ಯೂಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ದೇಹಕ್ಕೆ ಹಾಗೂ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.
ಇದನ್ನೂ ಓದಿ: ಅಪ್ಪುಗೆಯ ದಿನ ಈ ರೀತಿ ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡಿ
* ಆಲಿಂಗನದಿಂದ ಪಾಸಿಟಿವ್ ಭಾವವು ಉಂಟಾಗಿ ಸಂತೋಷದ ಹಾರ್ಮೋನ್ ಗಳ ಬಿಡುಗಡೆ ಮಾಡುತ್ತದೆ. ಮನಸ್ಸನ್ನು ನಿರಾಳವನ್ನಾಗಿಸುತ್ತದೆ.
* ಹಾರ್ಮೋನ್ ಗಳ ಬಿಡುಗಡೆಯಿಂದ ಮನಸ್ಸು ಸಂತೋಷದಿಂದ ಕೂಡಿದರೆ ರೋಗ ನಿರೋಧಕ ವ್ಯವಸ್ಥೆಯು ಹೆಚ್ಚಾಗುತ್ತದೆ.
* ಅಪ್ಪುಗೆಯಿಂದ ದೇಹದಲ್ಲಿನ ಎಲ್ಲಾ ಕಾರ್ಯಗಳು ಸಕರಾತ್ಮಕವಾಗಿ ನಡೆಯುತ್ತದೆ.
* ನೋವಿನಲ್ಲಿರುವಾಗ ತಬ್ಬಿಕೊಳ್ಳುವಿಕೆಯು ಸ್ನಾಯುಗಳಲ್ಲಿನ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ಅಪ್ಪುಗೆಯು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
* ಬೆಚ್ಚನೆಯ ಅಪ್ಪುಗೆಯಿಂದ ಜನರು ವಯಸ್ಸಾದಾಗ ಉಂಟಾಗುವ ಒಂಟಿತನದ ಭಾವನೆಗಳ ವಿರುದ್ಧ ಹೋರಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ