Kannada News Lifestyle These nonverbal clues that someone is highly attracted to you Kannada News
ವ್ಯಕ್ತಿಯಲ್ಲಿ ಈ ನಡವಳಿಕೆ ಕಂಡು ಬಂದ್ರೆ ನಿಮ್ಮ ಮೇಲೆ ಆಕರ್ಷಿತರಾಗಿರುವುದು ಪಕ್ಕಾ
ಕೆಲವೊಮ್ಮೆ ನಮ್ಮ ನಡವಳಿಕೆ, ವ್ಯಕ್ತಿತ್ವ, ಮಾತು ಎಲ್ಲವೂ ಕೂಡ ಕೆಲವರಿಗೆ ಇಷ್ಟವಾಗಿಬಿಡಬಹುದು. ಎಲ್ಲರನ್ನು ತನ್ನತ್ತ ಆಕರ್ಷಿಸುವಂತೆ ಮಾಡಿ ಬಿಡಬಹುದು. ಒಂದು ವೇಳೆ ಯಾರಾದ್ರು ನಿಮ್ಮನ್ನು ಇಷ್ಟ ಪಡುತ್ತಿದ್ದರೆ, ಇಲ್ಲದಿದ್ದರೆ ಕ್ರಶ್ ಆಗಿದ್ದರೆ ಅದನ್ನು ಕಂಡು ಹಿಡಿಯಲು ಕಷ್ಟಪಡಬೇಕಿಲ್ಲ. ಅವರಲ್ಲಿ ಈ ರೀತಿ ಚಿಹ್ನೆಗಳು ಕಾಣಿಸಿಕೊಳ್ಳುತ್ತಿದೆಯೇ, ಅವರ ನಡವಳಿಕೆಯಲ್ಲಿ ಈ ಬದಲಾವಣೆಗಳಾಗಿದೆಯೇ ಎಂದು ಗಮನಿಸಿ.
ಸಾಂದರ್ಭಿಕ ಚಿತ್ರ
Follow us on
ಪ್ರೀತಿ ಕೇಳಿ ಹೇಳಿ ಹುಟ್ಟಲ್ಲ. ಆದರೆ ಆ ಬಗ್ಗೆ ಹೇಳಿಕೊಳ್ಳಲು ಧೈರ್ಯವು ಬೇಕು. ಒಬ್ಬರ ಮೇಲೆ ಪ್ರೀತಿ ಹಾಗೂ ಕ್ರಶ್ ಆಗುವುದು ಸಹಜ ಕೂಡ. ಆದರೆ ಕೆಲವರು ಈ ಬಗ್ಗೆ ನೇರವಾಗಿ ಹೇಳುವುದಿಲ್ಲ. ವ್ಯಕ್ತಿಯೊಬ್ಬರು ನಿಮ್ಮತ್ತ ಆಕರ್ಷಿತರಾಗಿದ್ದರೆ ಆ ಬಗ್ಗೆ ಅವರು ಹೇಳಲೇ ಬೇಕಾಗಿಲ್ಲ. ಅವರ ದೇಹಭಾಷೆ, ನಡವಳಿಕೆ ಹಾಗೂ ಈ ಚಿಹ್ನೆಗಳಿಂದಲೇ ಅರ್ಥ ಮಾಡಿಕೊಳ್ಳಬಹುದು. ಆ ವ್ಯಕ್ತಿಯ ನಡವಳಿಕೆಗಳು ಹಾಗೂ ಮೌಖಿಕ ಚಿಹ್ನೆಗಳು ಹೇಗಿರುತ್ತವೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.
ಕಣ್ಣಿನ ಸಂಪರ್ಕ ಸಾಧಿಸುವುದು : ಎಷ್ಟೋ ಸಲ ಕಣ್ಣುಗಳು ಕೂಡ ಮಾತನಾಡುತ್ತವೆ. ಮಾತಿನ ಮೂಲಕ ಹೇಳದೇ ಇರುವುದು ಕಣ್ಣು ಹೇಳುತ್ತವೆ. ಒಬ್ಬ ವ್ಯಕ್ತಿಯೂ ನಿಮ್ಮತ್ತ ಆಕರ್ಷಿತರಾಗಿದ್ದರೆ ಕಣ್ಣಿನ ಸಂಪರ್ಕ ಸಾಧಿಸುತ್ತಾರೆ. ಎಲ್ಲರೂ ಇದ್ದಾಗ ಕದ್ದು ಮುಚ್ಚಿ ನೋಡುತ್ತಾರೆ. ಈ ಚಿಹ್ನೆಯೂ ವ್ಯಕ್ತಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲವಾದರೆ ಆಕರ್ಷಿತರಾಗಿದ್ದಾರೆ ಎಂದು ಸೂಚಿಸುತ್ತದೆ.
ಸೂಕ್ಷ್ಮವಾದ ಸ್ಪರ್ಶ : ನಿಮ್ಮ ಜೊತೆಗೆ ಸಂವಹನ ನಡೆಸುವಾಗ ಸೂಕ್ಷ್ಮವಾಗಿ ಸ್ಪರ್ಶಿಸುತ್ತಾರೆ. ಜೋರಾಗಿ ನಗುತ್ತಾ ಬೆನ್ನಿಗೆ ಹೊಡೆಯುವುದು. ಕೈಕುಲುಕುವುದು, ಮೃದುವಾದ ಕೈ ಸ್ಪರ್ಶ ಕೂಡ ನೀವು ಅವರಿಗೆ ಇಷ್ಟ ಎಂದು ಹೇಳುತ್ತದೆ.
ನಿಮ್ಮ ಜೊತೆಗೆ ಸಮಯ ಕಳೆಯುವುದು : ಬಿಡುವು ಸಿಕ್ಕಾಗಲೆಲ್ಲಾ ನಿಮ್ಮ ಜೊತೆಗೆ ಸಮಯ ಕಳೆಯುವುದು. ಒಂದೇ ಕಡೆಗಳಲ್ಲಿ ಕೆಲಸ ಮಾಡುವವರಾಗಿ ಬಿಟ್ಟರೆ ಊಟದ ವಿರಾಮ ಸೇರಿದಂತೆ ಸಸಿಗುವ ಸ್ವಲ್ಪ ಸಮಯವನ್ನು ಮಿಸ್ ಮಾಡುವುದೇ ಇಲ್ಲ. ಮಾತಿನಲ್ಲಿ ಈ ಬಗ್ಗೆ ಹೇಳದೇ ಇದ್ದರೂ ನಡವಳಿಕೆಗಳಿಂದ ಅವರಿಗೆ ನೀವಾಂದ್ರೆ ಇಷ್ಟ ಎನ್ನುವುದನ್ನು ಸೂಚಿಸುತ್ತದೆ.
ವಿಚಿತ್ರ ವರ್ತನೆಗಳು : ಯಾರಾದರೂ ನಿಮ್ಮತ್ತ ಆಕರ್ಷಿತರಾದಾಗ ಅವರು ಸ್ವಲ್ಪ ವಿಚಿತ್ರವಾಗಿ ವರ್ತಿಸಬಹುದು. ಚಡಪಡಿಕೆ, ಮಾತಿನ ನಡುವೆ ತೊದಲುವಿಕೆ, ನಾಚಿಕೆ ಸ್ವಭಾವವು ಆ ವ್ಯಕ್ತಿಯಲ್ಲಿ ಕಾಣಿಸುತ್ತದೆ. ಕೆಲವೊಮ್ಮೆ ಕಣ್ಣನ್ನು ನೋಡಿ ಮಾತನಾಡಲು ಹಿಂದೇಟು ಹಾಕುತ್ತಾರೆ. ನಿಮ್ಮ ಜೊತೆಗೆ ಮಾತನಾಡುತ್ತಿದ್ದರೂ ಕಣ್ಣು ಬೇರೆಲ್ಲೊ ನೋಡುತ್ತಿರಬಹುದು. ಇದು ನಾಚಿಕೆ ಸ್ವಭಾವವನ್ನು ಸೂಚಿಸುತ್ತದೆ. ಆ ವ್ಯಕ್ತಿಗಳಿಗೆ ನಿಮ್ಮ ಮೇಲೆ ಸಣ್ಣದೊಂದು ಭಯವಿರುತ್ತದೆ.
ಸಹಾಯ ಮಾಡುವ ಪ್ರಯತ್ನ : ನಿಮ್ಮತ್ತ ಆಕರ್ಷಿತರಾಗಿದ್ದರೆ ಆ ವ್ಯಕ್ತಿಗಳು ನಿಮಗೆ ಕಷ್ಟ ಎಂದಾಗ ಸಹಾಯಕ್ಕೆ ಮುಂದಾಗುತ್ತಾರೆ. ನಿಮ್ಮನ್ನು ಕಷ್ಟಗಳಿಂದ ರಕ್ಷಣೆ ಮಾಡುತ್ತಿರುತ್ತಾರೆ. ಅತಿಯಾದ ಕಾಳಜಿ, ಒಲವು ಅವರ ಕಾರ್ಯಗಳಲ್ಲಿ ವ್ಯಕ್ತವಾಗುತ್ತದೆ. ಈ ಚಿಹ್ನೆಗಳಿಂದ ಅವರಿಗೆ ನಿಮ್ಮ ಮೇಲೆ ಪ್ರೀತಿ ಅಥವಾ ಕ್ರಶ್ ಆಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.
ವಿದಾಯ ವೇಳೆ ಅತಿಯಾಗಿ ಭಾವನೆ ಹೊರಹಾಕುವುದು : ಇಷ್ಟ ಪಡುವ ವ್ಯಕ್ತಿಗಳು ಈ ಬಗ್ಗೆ ಮಾತಿನಲ್ಲಿ ಹೇಳದೇ ಇದ್ದರೂ ಈ ನಡವಳಿಕೆ ಎಲ್ಲವನ್ನು ತಿಳಿಸುತ್ತದೆ. ಯಾರಾದರೂ ನಿಮ್ಮತ್ತ ಆಕರ್ಷಿತರಾದ ವ್ಯಕ್ತಿಗಳು ಭೇಟಿಯನ್ನು ಎಷ್ಟು ಖುಷಿಯಿಂದ ಸ್ವಾಗತಿಸುತ್ತಾರೆಯೋ ಅದೇ ರೀತಿ ವಿದಾಯ ಹೇಳುವುದು ಅವರಿಗೆ ಸುಲಭವಾಗಿರಲ್ಲ. ಆ ಕ್ಷಣವನ್ನು ವಿಸ್ತರಿಸಲು ಬೇಡದ ವಿಷಯಗಳನ್ನು ಮಾತನಾಡುತ್ತಾ ಕಾಲ ಹರಣ ಮಾಡುತ್ತಾರೆ. ವಿದಾಯದ ವೇಳೆ ದೀರ್ಘವಾದ ಅಪ್ಪುಗೆಯೊಂದಿಗೆ ಮೌನವು ವ್ಯಕ್ತಿ ಮುಖದಲ್ಲಿ ಆವರಿಸುತ್ತದೆ.
ಎಲ್ಲರೊಂದಿಗೆ ಇದ್ದರೂ ನಿಮ್ಮದೊಂದಿಗೆ ಹೆಚ್ಚು ಮಾತು : ಗುಂಪಿನಲ್ಲಿದ್ದರೂ ಕೂಡ ನಿಮ್ಮ ಮಾತಿಗೆ ಹೆಚ್ಚು ಸ್ಪಂದಿಸುತ್ತಾರೆ. ತಮ್ಮ ಮಾತು ಹಾಗೂ ದೇಹವನ್ನು ನಿಮ್ಮ ಕಡೆಗೆ ತಿರುಗಿಸಿ, ಎಲ್ಲರಿಗಿಂತ ನೀವೇ ಮುಖ್ಯ ಎನ್ನುವುದನ್ನು ಈ ಮೂಲಕ ತಿಳಿಸುತ್ತಾರೆ. ಅವರು ನೋಡುವ ಏಕೈಕ ವ್ಯಕ್ತಿಯೂ ನೀವೇ ಆಗಿರುತ್ತೀರಿ ಅವರ ದೇಹ ಹಾಗೂ ಮಾತಿನಿಂದ ತಿಳಿದುಕೊಳ್ಳಬಹುದು.
ಜೋಕ್ ಗಳಿಗೆ ನಗುವುದು : ನಿಮ್ಮ ಮೇಲೆ ಆಕರ್ಷಿತರಾಗಿರುವ ವ್ಯಕ್ತಿಗಳು ನಿಮ್ಮ ಹೇಳುವ ಜೋಕ್ ಗಳಿಗೂ ಜೋರಾಗಿ ನಗುತ್ತಾರೆ. ಕೆಲವೊಮ್ಮೆ ಆ ಜೋಕ್ ಚೆನ್ನಾಗಿಲ್ಲದಿದ್ದರೂ ನಗುವ ವ್ಯಕ್ತಿಗಳಿಗೆ ನೀವೆಂದರೆ ಇಷ್ಟ ಎನ್ನುವುದನ್ನು ಸೂಚಿಸುತ್ತದೆ. ಅವರು ನಿಮ್ಮತ್ತ ಈ ರೀತಿ ಸಂಪರ್ಕ ಸಾಧಿಸಲು ಬಯಸುತ್ತಾರೆ.