AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mens Fashion Tips: ನಿಮ್ಮ ಬಟ್ಟೆಗೆ ಅನುಗುಣವಾಗಿ ಈ ರೀತಿ ಶೂ ಧರಿಸಿದ್ರೆ ಸಖತ್ ಸ್ಟೈಲಿಶ್ ಆಗಿ ಕಾಣ್ತಿರಾ

ಫ್ಯಾಷನ್ ಲೋಕವೇ ಹಾಗೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಹಳೆಯ ಫ್ಯಾಷನ್ ಗಳು ಮತ್ತೆ ಮರುಕಳಿಸುತ್ತದೆ. ಮಾರುಕಟ್ಟೆಗೆ ಪುರುಷರ ವಿವಿಧ ವಿನ್ಯಾಸದ ಸ್ಟೈಲಿಶ್ ಶೂಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುತ್ತದೆ. ಆದರೆ ಸಮಯ ಕಳೆದಂತೆ ಟ್ರೆಂಡ್ ಹಾಗೂ ಆಯ್ಕೆಗಳು ಬದಲಾಗುತ್ತದೆ. ಆದರೆ ತಮ್ಮ ಉಡುಗೆಗೆ ಅನುಗುಣವಾಗಿ ಶೂ ಧರಿಸುವ ಮೂಲಕ ಆಕರ್ಷಕವಾಗಿ ಕಂಗೊಳಿಸಬಹುದು. ಹಾಗಾದ್ರೆ ನೀವು ಧರಿಸುವ ಬಟ್ಟೆಗೆ ಹೊಂದುವಂತಹ ಶೂ ಯಾವುದು? ಯಾವ ರೀತಿ ಶೂ ಆಯ್ಕೆ ಮಾಡಿಕೊಂಡರೆ ಒಳ್ಳೆಯದು? ಎನ್ನುವ ಮಾಹಿತಿ ಇಲ್ಲಿದೆ.

Mens Fashion Tips: ನಿಮ್ಮ ಬಟ್ಟೆಗೆ ಅನುಗುಣವಾಗಿ ಈ ರೀತಿ ಶೂ ಧರಿಸಿದ್ರೆ ಸಖತ್ ಸ್ಟೈಲಿಶ್ ಆಗಿ ಕಾಣ್ತಿರಾ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 02, 2025 | 6:10 PM

Share

ಈ ದಿನವಿರುವ ಫ್ಯಾಷನ್ ನಾಳೆಯಿರಲ್ಲ. ಈ ಫ್ಯಾಷನ್ ಜಗತ್ತಿನಲ್ಲಿ ಕಾಲಕಳೆದಂತೆ ಎಲ್ಲವೂ ಬದಲಾಗುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುವ ಶೂಗಳು ಪುರುಷರಿಗೆ ಹೊಸ ಲುಕ್ ನೀಡುತ್ತದೆ. ಕೆಲವರು ಒಂದು ಜೊತೆ ಶೂ ಇದ್ದರೆ ಸಾಕು ಅದನ್ನೇ ಎಲ್ಲಾ ಉಡುಗೆಗಳಿಗೂ ಧರಿಸಿಕೊಂಡು ಹೋಗುತ್ತಾರೆ. ಮ್ಯಾಚಿಂಗ್ ಶೂ ತೊಡದಿದ್ದರೆ ಲುಕ್ ಬದಲಾಗುವುದರೊಂದಿಗೆ ದುಬಾರಿ ಹಣ ಕೊಟ್ಟು ಖರೀದಿಸಿದ ಬಟ್ಟೆಗೆ ಬೆಲೆನೇ ಇಲ್ಲದಂತಾಗುತ್ತದೆ.ಆದರೆ ನೀವು ಧರಿಸುವ ಉಡುಗೆ ಯಾವ ರೀತಿಯದ್ದು ಎನ್ನುವುದರ ಮೇಲೆ ಶೂ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.

  • ಫಾರ್ಮಲ್ಸ್ ಬಟ್ಟೆಗಳಿಗೆ ಈ ರೀತಿ ಶೂ ಧರಿಸಿ : ನೀವೇನಾದರೂ ಆಫೀಸಿಗೆ ಫಾರ್ಮಲ್ ಉಡುಗೆ ಧರಿಸುತ್ತಿದ್ದರೆ ಆಗ ಸ್ಟೈಲಿಶ್ ಶೂಗಳನ್ನು ಹಾಕಬೇಡಿ. ಈ ಫಾರ್ಮಲ್ಸ್ ಬಟ್ಟೆ ತೊಟ್ಟರೆ ಫಾರ್ಮಲ್ ಶೂ ಧರಿಸುವುದು ಸೂಕ್ತ. ಇಲ್ಲದಿದ್ದರೆ ಈ ಬಟ್ಟೆಯ ಲುಕ್ ಬದಲಾಗುತ್ತದೆ. ಈ ಫಾರ್ಮಲ್ಸ್ ಉಡುಗೆಗೆ ಕಪ್ಪು ಹಾಗೂ ಕಂದು ಬಣ್ಣದ ಶೂಗಳನ್ನೇ ಆಯ್ಕೆ ಮಾಡಿಕೊಂಡರೆ ಇನ್ನು ಉತ್ತಮ.
  • ಕಪ್ಪು ಬಣ್ಣಗಳ ಶೂ ಯಾವ ಬಟ್ಟೆಗೆ ಬೆಸ್ಟ್ : ಹೆಚ್ಚಿನವರು ಎಲ್ಲಾ ಕಪ್ಪು ಬಣ್ಣದ ಶೂಗಳನ್ನೆ ಹೆಚ್ಚು ಇಷ್ಟ ಪಡುತ್ತಾರೆ. ಯಾವುದೇ ರೀತಿಯ ಉಡುಗೆ ಧರಿಸಿದರೂ ಈ ಕಪ್ಪು ಬಣ್ಣದ ಶೂಗಳು ಹೊಂದಿಕೆಯಾಗುತ್ತದೆ. ಈ ಫಾರ್ಮಲ್ ಉಡುಗೆಗಳಿಗೆ ಈ ಕಪ್ಪು ಬಣ್ಣದ ಶೂ ಉತ್ತಮ ಮ್ಯಾಚ್ ಆಗಿದೆ.
  • ಈ ರೀತಿಯ ಬಟ್ಟೆಗೆ ಕಂದು ಬಣ್ಣದ ಶೂ ಧರಿಸಿ : ಇತ್ತೀಚೆಗಿನ ದಿನಗಳಲ್ಲಿ ಕಪ್ಪು ಬಣ್ಣದ ಶೂ ಜೊತೆಗೆ ಕಂದು ಬಣ್ಣದ ಶೂಗಳನ್ನು ಹೆಚ್ಚು ಖರೀದಿಸುತ್ತಾರೆ. ಈ ಶೂ ನಿಜಕ್ಕೂ ಸ್ಟೈಲಿಶ್ ಲುಕ್ ನೀಡುತ್ತದೆ. ಜೀನ್ಸ್ ಪ್ಯಾಂಟ್, ಫಾರ್ಮಲ್ಸ್ ಪ್ಯಾಂಟ್ ಧರಿಸುವಿರಿಯಾದರೆ ಕಂದು ಬಣ್ಣದ ಶೂ ಮ್ಯಾಚ್ ಆಗುತ್ತದೆ. ಇದರಲ್ಲಿ ನೀವು ಸ್ಟೈಲಿಶ್ ಆಗಿಯೂ ಕಾಣುತ್ತೀರಿ.
  • ಜೀನ್ಸ್ ಪ್ಯಾಂಟ್ ಗೆ ಈ ಶೂ ಆಯ್ಕೆ ಮಾಡಿ : ಜೀನ್ಸ್ ಪ್ಯಾಂಟ್ ಗೆ ಸ್ಟೈಲಿಶ್ ಶೂ ಧರಿಸಿದರೇನೇ ಚಂದ. ಜೀನ್ಸ್ ಪ್ಯಾಂಟ್ ಗೆ ಲೇಸ್ ಇಲ್ಲದ ಶೂಗಳು, ಲೋಫರ್ಸ್ ಶೂಗಳು ಬೆಸ್ಟ್ ಆಯ್ಕೆಯಾಗಿದ್ದು, ಇದು ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದೀಗ ಈ ಡ್ರೆಸ್ ಗೂ ಕಂದು ಬಣ್ಣದ ಶೂಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
  • ಮಲ್ಟಿ ಹಾಗೂ ಡಾರ್ಕ್ ಕಲರ್ ಶೂ ಆಯ್ಕೆ ಮಾಡಿಕೊಳ್ಳಿ : ಇತ್ತೀಚೆಗಿನ ದಿನಗಳಲ್ಲಿ ಕಪ್ಪು, ಬೂದು ಹಾಗೂ ಬಿಳಿ ಬಣ್ಣದ ಶೂಗಳಷ್ಟೆ ಅಲ್ಲ, ಡಾರ್ಕ್ ಹಾಗೂ ಮಲ್ಟಿ ಕಲರ್ ಶೂಗಳು ಟ್ರೆಂಡಿಂಗ್ ನಲ್ಲಿದೆ. ಪಾರ್ಟಿಗೆ ಹೋಗುತ್ತಿದ್ದರೆ ಈ ರೀತಿಯ ಶೂಗಳನ್ನೆ ಆಯ್ಕೆ ಮಾಡಿ. ಇದು ದೂರದಿಂದಲೇ ಎಲ್ಲರನ್ನು ಆಕರ್ಷಿಸುತ್ತವೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರಿಗೆ ಈ ಶೂಗಳು ಹೊಸ ಲುಕ್ ನೀಡುವುದಲ್ಲದೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ