ಉದ್ಯಮಿ ಮುಕೇಶ್ (mukesh ambani) ಅಂಬಾನಿ ಅವರ ಪತ್ನಿ ನೀತಾ ಅಂಬಾನಿ (Nita Ambani) ಅವರು ತಮ್ಮ ವಿಶಿಷ್ಟ ಸ್ಟೈಲ್ ಸ್ಟೇಟ್ಮೆಂಟ್ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ತೊಡುವ ದುಬಾರಿ ಬಟ್ಟೆಗಳಿಂದ ಹಿಡಿದು ಆಭರಣಗಳವರೆಗೆ ಅವರ ಸ್ಟೈಲ್ ಸ್ಟೇಟ್ಮೆಂಟ್ ಫ್ಯಾಶನ್ ಪ್ರಿಯರನ್ನು ಬೆರಗಾಗಿಸುತ್ತದೆ. ನೀತಾ ಅಂಬಾನಿ ಅವರು ಹೈ ಪ್ರೊಫೈಲ್ ಮದುವೆಯೊಂದರಲ್ಲಿ ಧರಿಸಿದ್ದ ಪಚ್ಚೆ ರತ್ನಗಳ ಹೊದಿಕೆಯಿರುವ ಸೀರೆಯನ್ನು ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಹೇಳಲಾಗುತ್ತಿದೆ. ದುಬಾರಿ ಬೆಲೆಯ ಡಿಸೈನರ್ ಉಡುಪುಗಳನ್ನು ಧರಿಸುವ ನೀತಾ ಅಂಬಾನಿ, 2015ರಲ್ಲಿ ಮಾಜಿ ರಾಜ್ಯಸಭಾ ಸಂಸದ ಪರಿಮಳ ನಾಥ್ವಾಣಿ ಅವರ ಪುತ್ರನ ಮದುವೆಯಲ್ಲಿ ಪಚ್ಚೆ ರತ್ನಗಳು ಹಾಗೂ ಇತರ ಹರುಳುಗಳಿಂದ ಕೂಡಿದ ಗುಲಾಬಿ ಬಣ್ಣದ ವಿಶ್ವದ ಅತ್ಯಂತ ದುಬಾರಿ ಸೀರೆಯನ್ನು ಧರಿಸಿದ್ದರು. ಈ ವಿವಾಹ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿದ್ದರು.
ವಿವಾಹ ಪತ್ತು ಎಂದು ಕರೆಯಲ್ಪಡುವ ಚೆನ್ನೈ ಸಿಲ್ಕ್ಸ್ನ ನಿರ್ದೇಶಕ ಶಿವಲಿಂಗಂ ಅವರು ವಿನ್ಯಾಸಗೊಳಿಸಿದ್ದಾರೆ. ಇವರು ರೂಪಿಸಿದ ಸೀರೆಯ ವಿಸ್ತಾರವಾದ ಥ್ರೆಡ್ ವರ್ಕ್, ಸುಂದರವಾದ ಪಲ್ಲು ಮತ್ತು ರವಿಕೆಯ ವಿಶಿಷ್ಟ ವಿನ್ಯಾಸ ಎಲ್ಲರ ಗಮನ ಸೆಳೆದಿತ್ತು.
ಈ ಸೀರೆಯ ಬೆಲೆ 40 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ನೀತಾ ಅಂಬಾನಿಯವರ ಈ ಸೀರೆ ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಸೀರೆ ಎಂದು ಗುರುತಿಸಲ್ಪಟ್ಟಿದೆ. ಗುಲಾಬಿ ಬಣ್ಣದ ಸೀರೆಗೆ ನಿಜವಾದ ಮುತ್ತುಗಳು, ಪಚ್ಚೆಗಳು, ಮಾಣಿಕ್ಯ ಮತ್ತು ಇತರ ರತ್ನಗಳಿಂದ ಕೈಯಲ್ಲಿ ಕಸೂತಿ ಮಾಡಲಾಗಿದೆ. ಈ ಸೀರೆಯ ಗಮನ ಸೆಳೆಯುವ ವೈಶಿಷ್ಟ್ಯವೆಂದರೆ ಕುಪ್ಪಸ. ಇದರಲ್ಲಿ ನಾಥದ್ವಾರದ ಕೃಷ್ಣನ ಚಿತ್ರವನ್ನು ರೂಪಿಸಲಾಗಿದೆ. ಶಿವಲಿಂಗಂ ಅವರು ಡಿಸೈನ್ ಮಾಡಿದ ಈ ದುಬಾರಿ ಸೀರೆಯನ್ನು ಕಾಂಚೀಪುರಂನ 35 ಮಹಿಳಾ ಕುಶಲಕರ್ಮಿಗಳು ರಚಿಸಿದ್ದಾರೆ.
ಇದನ್ನೂ ಓದಿ:Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?
ಬರೋಬ್ಬರಿ 8 ಕೆಜಿಗೂ ಹೆಚ್ಚು ತೂಕವಿರುವ ಈ ಸೀರೆಯನ್ನು ಇದೀಗ ವಿಶ್ವದ ದುಬಾರಿ ಸೀರೆಯೆಂದು ಹೇಳಲಾಗುತ್ತಿದೆ. ಇನ್ನೂ ನೀತಾ ಅಂಬಾನಿಯವರ ಮಗಳು ಇಶಾ ಅಂಬಾನಿಯವರ ಮದುವೆಯ ಲೆಹೆಂಗಾ 90 ಕೋಟಿ ಮೌಲ್ಯದ್ದಾಗಿದೆ. ಇದು ಇದುವರೆಗೆ ವಿನ್ಯಾಸಗೊಳಿಸಲಾದ ವಿಶ್ವದ ಅತ್ಯಂತ ದುಬಾರಿ ಲೆಹೆಂಗಾವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: