ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ಮನೆಯಲ್ಲಿ ಮಾಡಿದ ರುಚಿ ರುಚಿಯಾದ ಆಹಾರವನ್ನು ಸೇವಿಸುವುದು ಕಡಿಮೆಯೇ. ಈಗಿನ ಮಕ್ಕಳಿಗೆ ಬೇಕರಿಯಲ್ಲಿ ಸಿಗುವ ಕುರುಕಲು ತಿನಿಸುಗಳಿದ್ದರೆ ಸಾಕು. ಈ ಆರೋಗ್ಯಕರ ಆಹಾರಗಳಿಗಿಂತ ಚಿಪ್ಸ್, ಚಾಕೊಲೇಟ್ ಮತ್ತು ಇತರ ಸಿಹಿತಿಂಡಿಗಳನ್ನೇ ಹೆಚ್ಚು ತಿನ್ನುತ್ತಾರೆ. ಆದರೆ ಇಂತಹ ಮಕ್ಕಳ ಗಮನ ಸೆಳೆಯುವುದಕ್ಕಾಗಿ ಆರೋಗ್ಯಯುತವಾದ ಪೆಪ್ಪಾ ಪಿಗ್ ಇಡ್ಲಿಯಂತಹ ರೆಸಿಪಿಯ ವಿಡಿಯೋವೊಂದನ್ನು ಐಶು ಪ್ರಕಾಶ್ ಎನ್ನುವವರು ಶೇರ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಐಶು ಪ್ರಕಾಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೆಪ್ಪಾ ಪಿಗ್ ಇಡ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಮಕ್ಕಳು ಈ ಆರೋಗ್ಯಕರವಾದ ಇಡ್ಲಿಯನ್ನು ತಿನ್ನುವಂತೆ ಮಾಡಲು ಮಾಡಿದ ಹೊಸ ತಂತ್ರವನ್ನು ನೋಡಬಹುದಾಗಿದೆ. ಬೀಟ್ರೂಟ್ ನಲ್ಲಿ ಮಾಡಿದ ಗರಿಗರಿಯಾದ ಆಕರ್ಷಕ ಪೆಪ್ಪಾ ಪಿಗ್ ಇಡ್ಲಿಯ ರೆಸಿಪಿಯ ವಿಡಿಯೋ 7.2 ಮಿಲಿಯನ್ ವೀಕ್ಷಣೆ ಕಂಡಿದೆ. 2 ಲಕ್ಷಕ್ಕೂ ಅಧಿಕ ಹೆಚ್ಚು ಲೈಕ್ಸ್ ಹಾಗೂ ಮೆಚ್ಚುಗೆ ಕಾಮೆಂಟ್ ಗಳು ಬಂದಿದೆ.
ಈ ವಿಡಿಯೋದಲ್ಲಿ ಇಡ್ಲಿ ಹಿಟ್ಟಿಗೆ ಬೀಟ್ರೂಟ್ ರಸವನ್ನು ಸೇರಿಸುವ ಮೂಲಕ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮಹಿಳೆಯ ಮುಂದೆ ಇಡ್ಲಿ ಹಿಟ್ಟಿನ ಎರಡು ಬಟ್ಟಲುಗಳಿದ್ದು, ಮೊದಲನೆಯದರಲ್ಲಿ, ಸ್ವಲ್ಪ ಪ್ರಮಾಣದ ಬೀಟ್ರೂಟ್ ರಸವನ್ನು ಸೇರಿಸಲಾಗಿದೆ. ಎರಡನೆಯ ಬಟ್ಟಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬೀಟ್ರೂಟ್ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಲಾಗಿದೆ.
ಇದನ್ನೂ ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ
ಈ ವಿಡಿಯೋ ನೋಡಿದ ಬಳಕೆದಾರರು ಈಕೆಯು ಪೆಪ್ಪಾ ಪಿಗ್ ಇಡ್ಲಿ ಮಾಡಿದ ರೀತಿಯನ್ನು ಶ್ಲಾಘಿಸಿದ್ದಾರೆ. ಅದಲ್ಲದೇ ಬಳಕೆದಾರರೊಬ್ಬರು, “ಒಳ್ಳೆಯ ಉಪಾಯ! ನನ್ನ ಮಗಳಿಗಾಗಿ ನಾನು ಇದನ್ನು ಪ್ರಯತ್ನಿಸಲು ಬಯಸುತ್ತೇನೆ,” ಎಂದಿದ್ದಾರೆ. ಮತ್ತೊಬ್ಬರು, “ನನ್ನ ಜೀವನದಲ್ಲಿ ನಾನು ಏನನ್ನೂ ಬಯಸಲಿಲ್ಲ.” ಎಂದಿದ್ದಾರೆ. ಇನ್ನೊಬ್ಬರು, “ವಾವ್, ನಾನು ಇದನ್ನು ಪ್ರಯತ್ನಿಸಲಿದ್ದೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ