Health Tips: ಈ 5 ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ಮಧುಮೇಹವನ್ನು ಅಷ್ಟು ಸುಲಭದಲ್ಲಿ ಗುಣಪಡಿಸಲಾಗದು. ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಅನುಸರಿಸುವ ಮೂಲಕ ಮಾತ್ರ ಅದನ್ನು ನಿಯಂತ್ರಿಸಬಹುದು.

Health Tips: ಈ 5 ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಪ್ರಾತಿನಿಧಿಕ ಚಿತ್ರ
Edited By:

Updated on: Aug 14, 2021 | 7:33 AM

ಮಧುಮೇಹವು ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಹೆಚ್ಚಾಗುವ ಸ್ಥಿತಿಯಾಗಿದೆ. ಒತ್ತಡ, ಅಧಿಕ ತೂಕ ಮತ್ತು ಜೀವನಶೈಲಿಯ ಬದಲಾವಣೆ ಮಧುಮೇಹಕ್ಕೆ ಕಾರಣವಾಗಿದೆ. ಮಧುಮೇಹವನ್ನು ಅಷ್ಟು ಸುಲಭದಲ್ಲಿ ಗುಣಪಡಿಸಲಾಗದು. ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಅನುಸರಿಸುವ ಮೂಲಕ ಮಾತ್ರ ಅದನ್ನು ನಿಯಂತ್ರಿಸಬಹುದು. ಹೀಗಾಗಿ ಮಧುಮೇಹಿ ರೋಗಿಗಳು ಈ ಕೆಲವು ಗಿಡಮೂಲಿಕೆಗಳನ್ನು ಸೇವಿಸುವುದು ಸೂಕ್ತ.

ನಿತ್ಯಹರಿದ್ವರ್ಣ
ನಿತ್ಯಹರಿದ್ವರ್ಣವನ್ನು ಪೆರಿವಿಂಕಲ್ ಎಂದು ಕರೆಯುತ್ತಾರೆ. ಇದು ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಔಷಧೀಯ ಸಸ್ಯವಾಗಿದೆ. ಈ ನಿತ್ಯಹರಿದ್ವರ್ಣ ಮರದ ಎಲೆಗಳು ಮತ್ತು ಹೂವುಗಳು ಟೈಪ್ -2 ಮಧುಮೇಹದ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಮೂಲಿಕೆ ಮಲೇರಿಯಾ ಮತ್ತು ಗಂಟಲಿನ ನೋವಿನಂತಹ ಇತರ ಆರೋಗ್ಯ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ನಿತ್ಯಹರಿದ್ವರ್ಣದ ಎಲೆಗಳನ್ನು ದಿನಂಪ್ರತಿ ಅಗಿಯುವುದು ಸೂಕ್ತ. ಇದನ್ನು ಸೇವಿಸುವ ಇನ್ನೊಂದು ವಿಧಾನವೆಂದರೆ, ನಿತ್ಯಹರಿದ್ವರ್ಣ ಹೂವನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ನಂತರ ಅದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಕಹಿಬೇವು
ಕಹಿಬೇವು ಫ್ಲೇವನಾಲ್​ಗಳು ಮತ್ತು ಗ್ವಾಮರಿನ್ ನಂತಹ ಗುಣಗಳನ್ನು ಹೊಂದಿದೆ. ಇದು ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಹಿಬೇವು ಒಂದು ಆಯುರ್ವೇದ ಮೂಲಿಕೆಯಾಗಿದ್ದು, ಇದನ್ನು ಅಲರ್ಜಿ, ಕೆಮ್ಮು ಮತ್ತು ಮಲಬದ್ಧತೆಯಂತಹ ಅನೇಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಹೊನ್ನೆ ಮರ
ಹೊನ್ನೆ ಮರದ ಎಲೆ ಮತ್ತೊಂದು ಆಯುರ್ವೇದ ಮೂಲಿಕೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ. ಈ ಮೂಲಿಕೆ ಹೈಪರ್ಲಿಪಿಡೆಮಿಕ್ ವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ, ಅತಿಯಾಗಿ ತಿನ್ನುವುದು ಮತ್ತು ಅಂಗಗಳಲ್ಲಿ ಉರಿಯುವಂತಹ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಅಮೃತಬಳ್ಳಿ
ಮಧುಮೇಹ ಮತ್ತು ಮಧುಮೇಹದ ಇತರ ರೋಗಲಕ್ಷಣಗಳನ್ನು ನಿಯಂತ್ರಿಸಲು ಈ ಸಸ್ಯದ ಎಲೆಗಳು ಸಾಕಷ್ಟು ಪರಿಣಾಮಕಾರಿ. ಈ ಮೂಲಿಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ.

ನೇರಳೆ ಎಲೆ
ನೇರಳೆ ಎಲೆಗಳು ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇವು ಪ್ರಯೋಜನಕಾರಿ. ನೇರಳೆ ಬೀಜಗಳು ಮೂತ್ರಪಿಂಡಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಲ್ಲಿ ಗಾಯ ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದಕ್ಕಾಗಿ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನೊಂದಿಗೆ ಒಂದು ಚಮಚ ನೇರಳೆ ಎಲೆಯ ಪುಡಿಯನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ:
ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಸೂಕ್ತವಾದ ಮಧ್ಯಾಹ್ನದ ಊಟ ಯಾವುದು? ಇಲ್ಲಿದೆ ವಿವರ

ಇದು ಮಧುಮೇಹಿಗಳಿಗೆ ಮಾತ್ರ; ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಸುಲಭ ಪರಿಹಾರ