World Cancer Day 2022 Date: ಜೀವಕ್ಕೆ ಕುತ್ತು ತರುವ ಕ್ಯಾನ್ಸರ್​ ಬಗ್ಗೆ ಅರಿವು ಮುಖ್ಯ

| Updated By: Pavitra Bhat Jigalemane

Updated on: Feb 03, 2022 | 3:17 PM

ಈ ಬಾರಿ ವಿಶ್ವ ಕ್ಯಾನ್ಸರ್​ ದಿನದ ಅಂಗವಾಗಿ 2022-2024ರವರೆಗೆ ಕ್ಲೋಸ್​ ದಿ ಕೇರ್​ ಗ್ಯಾಪ್​ ಎನ್ನುವ ಥೀಮ್​ ಮೂಲಕ ಆಚರಿಸಲಾಗುತ್ತಿದೆ.

World Cancer Day 2022 Date: ಜೀವಕ್ಕೆ ಕುತ್ತು ತರುವ ಕ್ಯಾನ್ಸರ್​ ಬಗ್ಗೆ ಅರಿವು ಮುಖ್ಯ
ಸಾಂಕೇತಿಕ ಚಿತ್ರ
Follow us on

ಕ್ಯಾನ್ಸರ್ (Cancer)​ ಎಂದರೆ ಜೀವಕ್ಕೆ ಕುತ್ತು ತರುವ ಕಾಯಿಲೆ ಎಂದೇ ಪರಿಗಣಿಸಲಾಗುತ್ತದೆ. ಒಂದು ರೀತಿಯಲ್ಲಿ ನಿಜವೂ ಹೌದು. ಆದರೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಕ್ಯಾನ್ಸರ್​ಅನ್ನು ಕೂಡ ನಿಯಂತ್ರಣದಲ್ಲಿಡಬಹುದಾಗಿದೆ. ಅದಕ್ಕೂ ಮೊದಲು ಕ್ಯಾನ್ಸರ್​ ಕುರಿತು ಸರಿಯಾದ ರೀತಿಯ ಅರಿವು ಇದ್ದರೆ ಮಾತ್ರ ಅದನ್ನು ಎದುರಿಸಲು ಸಾಧ್ಯ. ಕ್ಯಾನ್ಸರ್​ ಕುರಿತು ಜಾಗೃತಿಯಿದ್ದರೆ ಮಾತ್ರ ಅದನ್ನು ಬರದಂತೆ ತಡೆಯಬಹುದು. ಹೀಗಾಗಿ ಕ್ಯಾನ್ಸರ್​ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಫೆ. 4ರಂದು ವಿಶ್ವ ಕ್ಯಾನ್ಸರ್​ ದಿನವಾಗಿ (World Cancer Day) ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕ್ಯಾನ್ಸರ್​ ನಿಯಂತ್ರಣ ಒಕ್ಕೂಟವು (Union of International Cancer Control )ಕ್ಯಾನ್ಸರ್​ ಬಗೆಗೆ ಅರಿವು ಮೂಡಿಸಲು, ರೋಗವನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಲು ಹಾಗೂ ಕ್ಯಾನ್ಸರ್​ ಪೀಡಿತರಿಗೆ ಧೈರ್ಯ ತುಂಬುವ ನಿಟ್ಟನಲ್ಲಿ ಈ ದಿನವನ್ನು ಜಾರಿಗೆ ತಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಒಗ್ಗೂಡಿಸಿ, ಕ್ಯಾನ್ಸರ್​ ರೋಗಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವುದು ಈ ಕಾರ್ಯಕ್ರಮದ ಸಾರ್ವಕಾಲಿಕ ಮತ್ತು ಪ್ರಮುಖ ಉದ್ದೇಶವಾಗಿದೆ. 

ಕ್ಯಾನ್ಸರ್​ ದಿನದ ಇತಿಹಾಸ  ಮತ್ತು ಮಹತ್ವ

ವಿಶ್ವ ಕ್ಯಾನ್ಸರ್​ ದಿನವನ್ನು 2000, ಫೆಬ್ರವರಿ 4 ರಂದು ಜಾರಿಗೆ ತರಲಾಯಿತು. ಪ್ಯಾರಿಸ್​ನಲ್ಲಿ ನಡೆದ  ಅಂತಾರಾಷ್ಟ್ರೀಯ ಕ್ಯಾನ್ಸರ್​  ಕಾನ್ಫರೆನ್ಸ್​ನಲ್ಲಿ ಕ್ಯಾನ್ಸರ್​​ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಕ್ಯಾನ್ಸರ್​ ದಿನ ಆಚರಣೆಗೆ ಸಹಿ ಮಾಡಲಾಯಿತು. ಇದಕ್ಕೆ ಯುನೆಸ್ಕೋ, ಫ್ರೆಂಚ್​​ ಅಧ್ಯಕ್ಷ ಸೇರಿದಂತೆ ಜಗತ್ತಿನ ಗಣ್ಯರು ಸಹಿ ಹಾಕಿದ್ದರು. ಅಂದಿನಿಂದ ಫೆ.4ರಂದು ವಿಶ್ವ ಕ್ಯಾನ್ಸರ್​ ದಿನ ಎಂದು ಆಚರಿಸಲಾಗುತ್ತದೆ.

ಈ ದಿನ ಜಗತ್ತಿನಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕ್ಯಾನ್ಸರ್​ನಿಂದ ಉಂಟಾಗುವ ಮರಣ ಪ್ರಮಾಣವನ್ನು ತಡೆಯಲು ಮತ್ತು ಕ್ಯಾನ್ಸರ್​ ಒಂದು ಕಳಂಕ ಎನ್ನುವ ಭಾವನೆಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಕ್ಯಾನ್ಸರ್​ ದಿನವನ್ನು  ಕ್ಯಾನ್ಸರ್​ ಬಗ್ಗೆ ಇರುವ ಕಟ್ಟು ಕತೆಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ನಿಜಾಂಶವನ್ನು ಜಗತ್ತಿಗೆ ತಿಳಿಸುವ ಮಹತ್ವದ ಕಾರ್ಯವಾಗಿದೆ.

ವಿಶ್ವ ಕ್ಯಾನ್ಸರ್​ ದಿನದ ಥೀಮ್​

ಈ ಬಾರಿ ವಿಶ್ವ ಕ್ಯಾನ್ಸರ್​ ದಿನದ ಅಂಗವಾಗಿ 2022-2024ರವರೆಗೆ ‘ಕ್ಲೋಸ್​ ದಿ ಕೇರ್​ ಗ್ಯಾಪ್​’ ಎನ್ನುವ ಥೀಮ್​ ಮೂಲಕ ಆಚರಿಸಲಾಗುತ್ತಿದೆ. ಮೂರು ವರ್ಷಗಳ ಈ ಅವಧಿಯಲ್ಲಿ  ಕ್ಯಾನ್ಸರ್​ ಬಗ್ಗೆ ಅರಿವು ಮೂಡಿಸಿ, ಅದರ ಚಿಕಿತ್ಸೆಯ ಬಗ್ಗೆ ತಿಳಿಸುವ ಉದ್ದೇಶ ಹೊಂದಿದೆ. ಜತೆಗೆ ಜಾಗತಿಕವಾಗಿ ಇರುವ ಅಸಮಾನೆತyನ್ನು ಹೋಗಲಾಡಿಸಿ ಕ್ಯಾನ್ಸರ್​ ರೋಗಿಗಳಲ್ಲಿ ಜೀವನೋತ್ಸಾಹ ತುಂಬುವ ಗುರಿ ಹೊಂದಿದೆ.

ಇದನ್ನೂ ಓದಿ:

Cervical Cancer: ಗರ್ಭಕಂಠದ ಕ್ಯಾನ್ಸರ್ ಎಂದರೇನು? ಪ್ರತಿಯೊಬ್ಬ ಮಹಿಳೆಯು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

Published On - 3:14 pm, Thu, 3 February 22