Valentine’s Week List 2022: ಪ್ರೇಮಿಗಳ ವಾರದಲ್ಲಿ ಯಾವ ದಿನ ಯಾವುದಕ್ಕೆ ಮೀಸಲು ಗೊತ್ತಾ?ಇಲ್ಲಿದೆ ಮಾಹಿತಿ

ಪ್ರೇಮ‌ ಕುರುಡು, ಪ್ರೇಮಕ್ಕೆ ಸಾವಿಲ್ಲ, ಪ್ರೇಮ ಅಮರ, ಪ್ರೇಮಾಂಕುರ ಹೇಗಾಗುತ್ತದೋ ಗೊತ್ತಿಲ್ಲ... ಹೀಗೆ ಪ್ರೇಮದ ಬಗೆಗಿನ ವ್ಯಾಖ್ಯಾನ ಮುಂದುವರಿಯುತ್ತದೆ. ಪ್ರೇಮ ಅಮರವಾದರೂ ಆಚರಣೆಗಾಗಿ ಒಂದು ವಾರವನ್ನೇ ಮೀಸಲಾಗಿರಿಸಲಾಗಿದೆ.

Valentine's Week List 2022: ಪ್ರೇಮಿಗಳ ವಾರದಲ್ಲಿ ಯಾವ ದಿನ ಯಾವುದಕ್ಕೆ ಮೀಸಲು ಗೊತ್ತಾ?ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
| Updated By: Pavitra Bhat Jigalemane

Updated on:Feb 03, 2022 | 12:32 PM

ವರ್ಷದ ಚಿಕ್ಕ ತಿಂಗಳಾಗಿರುವ ಫೆಬ್ರವರಿ (February) ಪ್ರೇಮಿಗಳ ಪ್ರೀತಿಗೆ ವಿಶೇಷ ದಿನಗಳನ್ನು ನೀಡಿ ಹೊಸತನವನ್ನು ನೀಡುತ್ತದೆ. ಫೆಬ್ರವರಿ ತಿಂಗಳಲ್ಲಿ 28 ದಿನಗಳು ಮಾತ್ರವೇ ಇದ್ದರೂ ಇದೊಂದು ರೀತಿಯ ಪ್ರೀತಿಯ ತಿಂಗಳು. ಯಾಕೆ ಅಂತೀರಾ? ಫೆಬ್ರವರಿ ತಿಂಗಳು ಬಂತೆಂದರೆ ನೆನಪಾಗುವುದೇ ವ್ಯಾಲೆಂಟೈನ್ಸ್​ ಡೇ (Valentin’s Day) ಮತ್ತು ಅದರ ಹಿಂದಿದ 7 ದಿನಗಳು. ಅದನ್ನು ವ್ಯಾಲೆಂಟೈನ್ಸ್​ ವೀಕ್ (Valentine’s week)​ ಎಂದು ಕರೆಯುತ್ತಾರೆ. ಜಗತ್ತಿನಾದ್ಯಂತ ಈ ವ್ಯಾಲೆಂಟೈನ್ಸ್​ ವಾರವನ್ನು ಆಚರಣೆ ಮಾಡಲಾಗುತ್ತದೆ. ಪ್ರೇಮ‌ ಕುರುಡು, ಪ್ರೇಮಕ್ಕೆ ಸಾವಿಲ್ಲ, ಪ್ರೇಮ ಅಮರ, ಪ್ರೇಮಾಂಕುರ ಹೇಗಾಗುತ್ತದೋ ಗೊತ್ತಿಲ್ಲ… ಹೀಗೆ ಪ್ರೇಮದ ಬಗೆಗಿನ ವ್ಯಾಖ್ಯಾನ ಮುಂದುವರಿಯುತ್ತದೆ. ಪ್ರೇಮ ಅಮರವಾದರೂ ಆಚರಣೆಗಾಗಿ ಒಂದು ವಾರವನ್ನೇ ಮೀಸಲಾಗಿರಿಸಲಾಗಿದೆ. ಫೆಬ್ರವರಿ 7ರಿಂದ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಗಿಫ್ಟ್‌ಗಳ ವಿನಿಮಯವಾಗುತ್ತದೆ. ಭರವಸೆಗಳ ಸುರಿಮಳೆಯಾಗುತ್ತದೆ. ಅಷ್ಟೇ ಅಲ್ಲ, ಹೊಸ ಹೊಸ ಪ್ರೇಮಾಂಕುರವಾಗಬಹುದು. ಪ್ರೇಮಿಗಳ‌ ಬಂಧ ಗಟ್ಟಿಯಾಗಬಹುದು. ಪ್ರೇಮ ಗಟ್ಟಿಯಾಗಿ ಮದುವೆಯಾಗಬಹುದು… ಒಂದೇ ಮಾತಲ್ಲಿ ಹೇಳುವುದಾದರೆ ಈ ವಾರವನ್ನು ‘ಪ್ರೇಮೋತ್ಸವ’ ಎನ್ನಬಹುದು. ಪ್ರೇಮಿಗಳ ವಾರದ ಮೊದಲ ದಿನವು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ. ನಂತರ ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಮತ್ತು ಪ್ರೇಮಿಗಳ ದಿನದೊಂದಿಗೆ ಫೆಬ್ರವರಿ 14 ರಂದು ಕೊನೆಗೊಳ್ಳುತ್ತದೆ. ಒಟ್ಟಿನಲ್ಲಿ ಪ್ರೇಮಾಂಕುರವಾಗಿ ಪಲ್ಲವಿಸುವ ಈ ಸಮಯ ಪ್ರೇಮಿಗಳ ಪಾಲಿಗೆ ಶುಭಘಳಿಗೆಯಂತೂ ಹೌದು. ಹಾಗಾದರೆ ಈ ವ್ಯಾಲೆಂಟೈನ್ಸ್​ ವಾರದಲ್ಲಿ ಯಾವ ದಿನ ಯಾವುದಕ್ಕೆ ಸ್ಪೆಶಲ್​ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಇದು ನಿಮ್ಮ ಪ್ರೀತಿಯ ಪಯಣಕ್ಕೆ ಹೊಸ ಫೀಲ್​ ಕೊಡುತ್ತದೆ. ಇಲ್ಲಿದೆ ನೋಡಿ ವ್ಯಾಲೆಂಟೈನ್ಸ್​ ಡೇ ವಾರದ ವಿಶೇಷತೆ.

ರೋಸ್​ ಡೇ : ಫೆ.7 ರಂದು ಪ್ರೇಮಿಗಳ ವಾರದ ಮೊದಲ ದಿನ. ಇದನ್ನು ರೋಸ್​ ಡೇ ಎಂದು ಆಚರಿಸಲಾಗುತ್ತದೆ. ಪ್ರೀತಿಯ ಸಂಕೇತವಾದ ಕೆಂಗುಲಾಬಿ ಹಿಡಿದು ಪ್ರೇಮಿಯ ಎದುರು ನಿಲ್ಲುವ ಈ ದಿನ ಪ್ರೇಮಿಗಳ ಪಾಲಿನ ಪರೀಕ್ಷೆಯ ಮೊದಲ ದಿನ ಎನ್ನಬಹುದು.

ಪ್ರಪೋಸ್​ ಡೇ : ಪ್ರೇಮಿಗಳ ವಾರದ ಎರಡನೇ ದಿನ ಫೆ. 8ರಂದು ಪ್ರಪೋಸ್​ ಡೇ. ಗುಲಾಬಿ ನೀಡಿದ ಬಳಿಕ ಮನದನ್ನೆಯ ಎದುರು ಹೃದಯದ ಭಾವನೆಗಳನ್ನು ವ್ಯಕ್ತಪಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ದಿನ.  ಈ ದಿನವನ್ನು ಅತ್ಯಂತ ರೊಮ್ಯಾಂಟಿಕ್​ ದಿನವೆಂದೇ ಕರೆಯುತ್ತಾರೆ.

ಚಾಕೋಲೇಟ್​ ಡೇ : ಫೆ.9ರಂದು ಚಾಕೋಲೇಟ್​ ಡೇ ಎಂದು ಆಚರಿಸಲಾಗುತ್ತದೆ. ಪ್ರೀತಿಯ ಪಯಣಕ್ಕೆ ಸಿಹಿ ಸೇರಿಸುವ ದಿನ ಈ ಚಾಕೋಲೇಟ್​ ಡೇ. ಈ ದಿನ ನಿಮ್ಮ ಮನದರಸಿಗೆ ಚಾಕೋಲೇಟ್​ ನೀಡಿ ಸಂಬಂಧದ ಸಿಹಿಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬಹುದು.

ಟೆಡ್ಡಿ ಡೇ: ಪ್ರೇಮಿಗಳ ಪಾಲಿನ 4ನೇ ಅತಿ ಮುಖ್ಯ ದಿನ ಫೆ. 10. ಈ ದಿನವನ್ನು ಟೆಡ್ಡಿ ಡೇ ಎಂದು ಸೆಲೆಬ್ರೇಟ್​ ಮಾಡಲಾಗುತ್ತದೆ. ಟೆಡ್ಡಿ ಬೇರ್​ ಗೊಂಬೆಗಳು  ಕ್ಯೂಟ್​ ಲುಕ್​ ಹೊಂದಿರುತ್ತವೆ. ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುವ ಈ ಟೆಡ್ಡಿ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವ್ಯಾಲೆಂಟೈನ್ಸ್​ ವಾರದ ಮತ್ತೊಂದು ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಪ್ರಾಮಿಸ್​ ಡೇ: ಪ್ರತೀ ಪ್ರೇಮಿಗಳೂ ಜೀವನ ಪರ್ಯಂತ ಜತೆಯಾಗಿ ಬಾಳಬೇಕು ಎನ್ನುವ ಬಯಕೆಯನ್ನು ಹೊಂದಿರುತ್ತಾರೆ. ವ್ಯಾಲೆಂಟೈನ್ಸ್​ ವೀಕ್​ನ 5 ನೇ ದಿನವಾದ ಪ್ರಾಮಿಸ್​ ಡೇ ಅಂತಹ ಪ್ರಾಮಿಸ್​ಗಳನ್ನು, ಪರಸ್ಪರ  ಒಟ್ಟಿಗೆ ಇರುವ ನಿರ್ಧಾರವನ್ನು ಕೈಗೊಳ್ಳುವ ದಿನ. ಪೇ. 11ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಹಗ್​ ಡೇ: ಒಂದು ಪ್ರೀತಿಯ ಅಪ್ಪುಗೆ ಸಾವಿರ ನೋವುಗಳನ್ನು ನಿವಾರಿಸಬಲ್ಲದು. ಅದು ಪ್ರೇಮಿಯಿಂದ ಸಿಕ್ಕರೆ ಮತ್ತಷ್ಟು ಖುಷಿಯಾಗುವುದಂತೂ ಸುಳ್ಳಲ್ಲ. ಹೀಗಾಗಿ ವ್ಯಾಲೆಂಟೈನ್ಸ್​ ವಾರದಲ್ಲಿ ಹಗ್​ ಡೇಯನ್ನು ಆಚರಿಸಲಾಗುತ್ತದೆ. ಫೆ. 12 ರಂದು ಹಗ್​ ಡೇ ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗೆ ಒಂದು ಪ್ರೀತಿಯ ಅಪ್ಪುಗೆ ನೀಡಿ ಸದಾಕಾಲ ಜೊತೆಯಿರುವ, ಪ್ರೀತಿಸುವೆನೆಂದ ಭಾವನೆಯನ್ನು ವ್ಯಕ್ತಪಡಿಸಬಹುದಾದ ದಿನವಾಗಿದೆ.

ಕಿಸ್​ ಡೇ: ವ್ಯಾಲೆಂಟೈನ್ಸ್​ ವಾರದ ಏಳನೇ ದಿನ ಕಿಸ್ ಡೇ. ಒಂದು ಮುತ್ತು ಪ್ರೀತಿಯ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಹೀಗಾಗಿ ಈ ದಿನವನ್ನು ಪ್ರೀತಿಯ ಹೃದಯದೊಡೆಯನಿಗೆ/ಹೃದಯದೊಡತಿಗೆ ಮುತ್ತನ್ನು ನೀಡಿ ಪ್ರೀತಿಯನ್ನು ವ್ಯಕ್ತಪಡಿಸಬಹುದಾಗಿದೆ.

ವ್ಯಾಲೆಂಟೈನ್ಸ್​ ಡೇ: ವ್ಯಾಲೆಂಟೈನ್ಸ್​ ವಾರದ ಕೊನೆಯ, ಬಹುಮುಖ್ಯ ದಿನ ವ್ಯಾಲೆಂಟೈನ್ಸ್​ ಡೇ. ಫೆ. 14ರಂದು ಆಚರಿಸುವ ಈ ದಿನ ಪ್ರೀತಿಗೆ ಹೊಸ ಬಾಷ್ಯ ಬರೆಯುವ ದಿನ ಎಂದೇ ಹೇಳಬಹುದು. ಇದನ್ನು 3 ನೇ ಶತಮಾನದ ರೋಮನ್ ಸಂತ ವ್ಯಾಲೆಂಟೈನ್ ನೆನಪಿಗಾಗಿ ಆಚರಿಸಲಾಗುತ್ತದೆ. ಪ್ರೀತಿ ಮತ್ತು ಬದ್ಧತೆಯೊಂದಿಗೆ ಒಬ್ಬ ಪರಿಪೂರ್ಣ ಸಂಗಾತಿಯನ್ನು ಆಯ್ದುಕೊಳ್ಳುವ ವಿಶೇಷ ದಿನ. ಕಳೆದ 8 ದಿನಗಳಲ್ಲಿ ಪ್ರತಿ ಕ್ಷಣವನ್ನು ಮರೆಯಲಾಗದಂತೆ ಮಾಡಿ ಒಂದು ಅರ್ಥಪೂರ್ಣ  ಬದುಕಿಗೆ ನಾಂದಿ ಹಾಡುವ ದಿನ ವ್ಯಾಲೆಂಟೈನ್ಸ್​ ಡೇ.

ಇದನ್ನೂ ಓದಿ:

Relationship Tips: ಸಂಗಾತಿಯೊಂದಿಗಿನ ಜಗಳ ಉತ್ತಮ; ಆದರೆ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

Published On - 11:59 am, Thu, 3 February 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ