ಒತ್ತಡದ ಬದುಕಿನಲ್ಲೂ ಸುಮಧುರ ಸಂಬಂಧಕ್ಕೆ ಈ ಟಿಪ್ಸ್ ಅನುಸರಿಸಿ; ಪ್ರಯಾಸದ ಪ್ರಣಯಕ್ಕೆ ಬೈ ಬೈ ಹೇಳಿ

ಕಟ್ಟಿದ ಕನಸನ್ನು ಜೊತೆಯಾಗಿ ಪೂರೈಸುವ ನಿರ್ಧಾರ. ಅದರ ಜೊತೆಗೆ ಇನ್ನೊಂದಿಷ್ಟು ಜಂಟಿಯಾಗಿ ಕಟ್ಟಿದ ಕನಸುಗಳು ಎಲ್ಲವನ್ನೂ ಸರಿದೂಗಿಸಿಕೊಂಡು ಇಬ್ಬರ ಬದುಕು ಒಂದೇ ಎನ್ನುವಂತೆ ಬದುಕುವುದೇ ದಾಂಪತ್ಯ.

ಒತ್ತಡದ ಬದುಕಿನಲ್ಲೂ ಸುಮಧುರ ಸಂಬಂಧಕ್ಕೆ ಈ ಟಿಪ್ಸ್ ಅನುಸರಿಸಿ; ಪ್ರಯಾಸದ ಪ್ರಣಯಕ್ಕೆ ಬೈ ಬೈ ಹೇಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 30, 2022 | 12:16 PM

ಜೀವನ (Life) ನಿಂತಿರುವುದೇ ಬಂಧ- ಸಂಬಂಧಗಳ(Relationship) ಮೇಲೆ. ನಂಬಿಕೆ, ವಿಶ್ವಾಸಗಳ ಆಧಾರದಲ್ಲಿ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದರೂ ಪ್ರತಿಯೊಬ್ಬರೂ ಉತ್ತಮ ಸಂಗಾತಿಗಾಗಿ ಹಾತೊರೆಯುತ್ತಾರೆ. ಬೊಗಸೆ ಪ್ರೀತಿಗಾಗಿ (Love) ಸದಾ ಹಂಬಲಿಸುತ್ತಾರೆ. ಆರೋಗ್ಯಕರ, ಸಂತಸಭರಿತ, ತೃಪ್ತಿಕರ ಪ್ರಣಯದ ಬಯಕೆ ಹೊಂದಿರುತ್ತಾರೆ. ಪ್ರಣಯವು ಸಂಬಂಧ ಏರಿಳಿತಗಳ ಸಮ್ಮಿಲನ. ಸಂಗಾತಿಯೊಂದಿಗಿನ ಸಂಬಂಧವನ್ನೂ ಅಷ್ಟೇ ಜೋಪಾನವಾಗಿ ಕಾಪಿಟ್ಟುಕೊಳ್ಳುವ ಅಂಶಗಳನ್ನು ತಿಳಿದಿರಬೇಕು. ಒಮ್ಮೆ ಪ್ರೀತಿಸಿದ ವ್ಯಕ್ತಿಯನ್ನು ಜೀವನಪರ್ಯಂತ ಉಳಿಸಿಕೊಳ್ಳುವುದನ್ನು ತಿಳಿದಿರಬೇಕು. ಸಂಬಂಧಗಳು ಕನ್ನಡಿಯಲ್ಲಿರುವ ಗಾಜಿನಂತೆ. ಒಂದು ಬಾರಿ ಒಡೆದರೆ ಮತ್ತೆ ಜೋಡಿಸುವುದು ಕಷ್ಟ. ಒಂದು ವೇಳೆ ಜೋಡಿಸಿದರೂ  ಅದರ ನಿಜವಾದ ಅಸ್ತಿತ್ವವನ್ನು ಕಳೆದುಕೊಂಡಿರುತ್ತದೆ. ಅದೇ ರೀತಿ ಸಂಬಂಧಗಳೂ ಕೂಡ. ಗಂಡ ಹೆಂಡತಿಯ ನಡುವಿನ ಬಂಧ ಒಂದೆರಡು ದಿನದ್ದಲ್ಲ. ಒಂದು ಬಾರಿ ಜೊತೆಯಾಗಿ ಬದುಕಬೇಕು ಎಂದು ನಿರ್ಧರಿಸಿ ಮದುವೆಯಾದ ಮೇಲೆ ಹೊಂದಿಕೊಂಡು ಬದುಕಬೇಕು. ಕಷ್ಟವೋ ಸುಖವೋ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕಬೇಕು

ಕಟ್ಟಿದ ಕನಸನ್ನು ಜೊತೆಯಾಗಿ ಪೂರೈಸುವ ನಿರ್ಧಾರ. ಅದರ ಜೊತೆಗೆ ಇನ್ನೊಂದಿಷ್ಟು ಜಂಟಿಯಾಗಿ ಕಟ್ಟಿದ ಕನಸುಗಳು ಎಲ್ಲವನ್ನೂ ಸರಿದೂಗಿಸಿಕೊಂಡು ಇಬ್ಬರ ಬದುಕು ಒಂದೇ ಎನ್ನುವಂತೆ ಬದುಕುವುದೇ ದಾಂಪತ್ಯ. ಭಾರತೀಯ ಸಂಸ್ಕೃತಿಯಲ್ಲಿ ಅದ್ಭುತ ಸಂಬಂಧ ಎಂದು ಹೇಳುವ ಗಂಡ ಹೆಂಡತಿಯ ಬಾಂಧವ್ಯ ಋಣಾನುಬಂಧವೇ ಸರಿ. ಹೀಗಿದ್ದಾಗ ಒಂದು ಬಾರಿ ಜತೆಯಾದ ಮೇಲೆ ಒಂದಷ್ಟು ‘ನನ್ನದು’ ಎನ್ನುವ ಭಾವನೆ ಬದಲಾಗಿ ‘ನಮ್ಮದು’ ಎನ್ನುವುದು ಸೇರಿಕೊಳ್ಳುತ್ತದೆ. ಎಲ್ಲವನ್ನು ಹೊಂದಿಕೊಂಡು ಹೊಸ ಪರಿಸರವನ್ನು, ಹೊಸ ಕುಟುಂಬವನ್ನು ಒಪ್ಪಿಕೊಂಡು ಸಾಗುವ ಜವಾಬ್ದಾರಿ ಇಬ್ಬರಿಗೂ ಇರುತ್ತದೆ

ಸಂಬಂಧಗಳನ್ನು ಸದಾ ಹಸಿರಾಗಿ ಇರಿಸಿಕೊಳ್ಳಬೇಕೆಂದರೆ ನೀವು ಒಂದಷ್ಟು ಅಂಶಗಳನ್ನು ಪಾಲಿಸಲೇಬೇಕು. ಹಾಗಾದರೆ ಯಾವೆಲ್ಲಾ ಅಂತೀರಾ ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್

ಮುಖಾಮುಖಿಯಾಗಿ ಕುಳಿತು ಸಮಯ ಕಳೆಯಿರಿ ಡಿಜಿಟಲ್​ ಬದುಕು ಸಂಗಾತಿಯೊಂದಿಗೆ ಸದಾ ಕಾಲ ಸಂಪರ್ಕದಲ್ಲಿರುವಂತೆ ಮಾಡುತ್ತದೆ. ಆದರೆ ಅದರಲ್ಲಿ ಮುಖದ ಭಾವನೆಗಳು ಕಾಣಸಿಗುವುದಿಲ್ಲ. ಮುಖಾಮುಖಿ ಕುಳಿತು ಮಾತನಾಡಿದಷ್ಟು ಅನುಭೂತಿ ಸಿಗುವುದಿಲ್ಲ. ಹೀಗಾಗಿ ಆದಷ್ಟು ಎದುರಿಗೆ ಕುಳಿತು ಮಾತನಾಡಿ​​. ಪ್ರತಿದಿನ ಎಷ್ಟೇ ಕೆಲಸದ ಒತ್ತಡವಿದ್ದರೂ ಒಂದಷ್ಟು ಸಮಯವಾದರೂ ಸಂಗಾತಿಯೊಂದಿಗೆ ಕಳೆಯಿರಿ. ಇಬ್ಬರಿಗೂ ಇಷ್ಟವಾಗುವ ಕೆಲಸಗಳನ್ನು ಮಾಡಿ. ಈ ವೇಳೆ ತಮಾಷೆ, ತರಲೆ, ನಗು ಎಲ್ಲವೂ ಕೂಡಿರಲಿ. ಆಕೆಯ/ಅವನ ಸಣ್ಣ ವಿಚಾರವನ್ನೂ ಕೇಳಿಸಿಕೊಳ್ಳಿ. ಸ್ಪಂದಿಸಿ. ಇವೆಲ್ಲವೂ ಸಾಧ್ಯವಾಗುವುದು ಜತೆಯಾಗಿ ಕುಳಿತು ಮಾತನಾಡಿದಾಗ ಅಥವಾ ಒಟ್ಟಿಗೆ ಇರುವಾಗ ಮಾತ್ರ.

ಉತ್ತಮ ಸಂವಹನ ಕಾಯ್ದುಕೊಳ್ಳಿ ಸಂವಹನ ಪ್ರತೀ ಸಂಬಂಧದ ಉಸಿರು ಎಂದರೆ ತಪ್ಪಲ್ಲ. ನಿಮ್ಮ ಪ್ರತಿಯೊಂದು ಕೆಲಸದ ಬಗ್ಗೆಯೂ ನಿಮ್ಮ ಸಂಗಾತಿಗೆ ತಿಳಿಸಿ. ಇದರಿಂದ ಅವರಿಗೂ ಒಂದು ಧೈರ್ಯವಿರುತ್ತದೆ. ನಿಮ್ಮ ಆಸೆಗಳ ಬಗ್ಗೆ  ಓಪನ್ ಆಗಿ ಹೇಳಿಕೊಳ್ಳಿ. ಕೆಲವರು ಹೇಳುತ್ತಾರೆ ಒಂದಷ್ಟು ವರ್ಷ ಜತೆಗಿದ್ದು ಅರ್ಥ ಮಾಡಿಕೊಂಡರೆ ಅವರ ಭಾವನೆಗಳು ತಿಳಿಯುತ್ತದೆ ಎಂದು. ಆದರೆ ಅದು ಭಾಗಷಃ ಮಾತ್ರ ಸತ್ಯ ಏಕೆಂದರೆ ಕಾಲಕಾಲಕ್ಕೆ ವ್ಯಕ್ತಿಯ ಆಸೆ, ಅಭಿರುಚಿ ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ನಿಮ್ಮ ನಡುವಿನ ಮಾತುಕತೆ ಪಾರದರ್ಶಕವಾಗಿರಲಿ. ವರ್ಬಲ್​ ಕಮ್ಯುನಿಕೇಷನ್​ಗಿಂತ ನಾನ್​ ವರ್ಬಲ್​ ಕಮ್ಯುನಿಕೇಷನ್​​ ಹೆಚ್ಚು ಹತ್ತಿರವಾಗಿಸುತ್ತದೆ. ಹೀಗಾಗಿ ನಿಮ್ಮ ಸಂಗಾತಿಯ ಕಣ್ಣಿನ ದೃಷ್ಟಿ, ಕೈ ಹಿಡಿದುಕೊಂಡು ಮಾತನಾಡುವುದು ಇವುಗಳನ್ನು ಗಮನಿಸಿ. ಇದರಿಂದ ನಿಮ್ಮ ಸಂಗಾತಿಗೆ ಇನ್ನಷ್ಟು ಹತ್ತಿರವಾಗಬಹುದು.

ದೈಹಿಕ ಅನ್ಯೋನ್ಯತೆಯನ್ನು ಉಳಿಸಿಕೊಳ್ಳಿ ಸಂಬಂಧ ಎಷ್ಟೇ ಗಟ್ಟಿಯಾಗಿದ್ದರೂ ದೈಹಿಕ ಆಕರ್ಷಣೆ ಎಲ್ಲರಲ್ಲೂ ಇರುತ್ತದೆ. ಅದು ಕೈ ಹಿಡಿದುಕೊಳ್ಳುವುದಿರಬಹುದು, ಹೆಗಲ ಮೇಲೆ ಕೈ ಇಟ್ಟು ಮಾತನಾಡುವುದಿರಬಹುದು. ನಿಮ್ಮ ಸಂಗಾತಿಗೆ ಯಾವುದು ಕಂಪರ್ಟ್​ ಫೀಲ್​ ಕೊಡುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ. ಕೆಲವು ವಿಚಾರಗಳನ್ನು ಮಾತನಾಡುವಾಗಲೂ ನೇರವಾಗಿ ಮಾತಿನಲ್ಲಿ ಹೇಳುವುದಕ್ಕಿಂತ  ಕೈ ಹಿಡಿದುಕೊಂಡು ಅಥವಾ ಪಕ್ಕದಲ್ಲಿ ಕುಳಿತು ಹೇಳುವುದರಿಂದ ಸಂಪೂರ್ಣ ಗಮನ ನಿಮ್ಮ ಹಾಗೂ ನಿಮ್ಮ ಮಾತಿನ ಮೇಲಿರುತ್ತದೆ. ಹೀಗಾಗಿ ದೈಹಿಕ ಅನ್ಯೋನ್ಯತೆ ಪ್ರತೀ ಸಂಬಂಧದಲ್ಲಿ ಮುಖ್ಯವಾಗಿರುತ್ತದೆ.

ಕೊಡುವುದನ್ನು ಮತ್ತು ತೆಗೆದುಕೊಳ್ಳುವುದನ್ನು ಅಭ್ಯಸಿಸಿಕೊಳ್ಳಿ ವಸ್ತುವಿರಬಹುದು ಅಥವಾ ಸಮಯವನ್ನೇ ಇರಬಹುದು. ನಿಮ್ಮ ಸಂಗಾತಿಗೆ ಖುಷಿ ನೀಡುವ ಕೆಲಸಗಳನ್ನು ಅಭ್ಯಸಿಸಿಕೊಳ್ಳಿ. ಅದೇ ರೀತಿ ಅವರ ಕಡೆಯಿಂದ ಬಂದ ಭಾವನೆಗಳನ್ನುಗೌರವಿಸಿ ಅದೇ ರೀತಿ ಸ್ವೀಕರಿಸಿಕೊಳ್ಳಿ. ಇದರಿಂದ ನಿಮ್ಮ ನಡುವೆ ಜಗಳಗಳು ತಪ್ಪುತ್ತವೆ. ಅಲ್ಲದೆ ನಿಮ್ಮ ಸಂಗಾತಿಗೆ ಯಾವುದು ಅಗತ್ಯ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ನಾನೇ ಗೆಲ್ಲಬೇಕು ಎನ್ನುವ ಹಠ ಬೇಡ. ಸಂಬಂಧದಲ್ಲಿ ಇಬ್ಬರ ಗೆಲುವನ್ನೂ ಆನಂದಿಸಿ ಸೋಲಿನಿಂದ ಎದ್ದು ಬರುವುದು ಹೇಗೆ ಎನ್ನುವುದನ್ನು ಚರ್ಚಿಸಿ.

ಏಳು ಬೀಳುಗಳಿಗೆ ಸಿದ್ಧವಾಗಿರಿ ಜೀವನ ಎಂದ ಮೇಲೆ ಏಳು ಬೀಳು ಸಹಜ ಎಲ್ಲದಕ್ಕೂ ಸಿದ್ಧರಾಗಿರಿ. ನಿಮ್ಮ ಸಂಗಾತಿಯ ಪ್ರತಿಯೊಂದು ವಿಷಯಗಳೂ ನಿಮಗೆ ಸಂಬಂಧಪಟ್ಟಿರುತ್ತದೆ. ಹೀಗಾಗಿ ಸಂಗಾತಿಯ ಸಮಸ್ಯೆಯಿಂದ ನುಣುಚಿಕೊಳ್ಳದೆ ಜತೆಯಾಗಿರಿ. ಇದು ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಬದಲಾವಣೆಗಳಿಗೆ ಹೊಂದಿಕೊಳ್ಳಿ. ಕಷ್ಟಗಳು, ಸಮಸ್ಯೆಗಳು ಯಾವ ರೀತಿ ಬರುತ್ತದೆ ಎಂದು ಊಹಿಸಲು ಅಸಾಧ್ಯ ಅಂತಹ ಸಂದರ್ಭಗಳಲ್ಲಿ ಮನಸ್ತಾಪ ಮಾಡಿಕೊಳ್ಳದೆ ಪಾಸಿಟಿವ್​ ಆಗಿ ಯೋಚಿಸಿ. ಹೊರಗಿನವರ ಸಹಾಯ ಕೇಳುವ ಮೊದಲು ಇಬ್ಬರ ಯೋಚನೆಗಳನ್ನು ವಿನಿಮಯ ಮಾಡಿಕೊಳ್ಳಿ. ಸಮಸ್ಯಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ:

Relationship Tips: ಸಂಗಾತಿಯೊಂದಿಗಿನ ಜಗಳ ಉತ್ತಮ; ಆದರೆ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಲವ್ ಶುರುವಾದ ಆರಂಭದ ದಿನಗಳಲ್ಲಿ ಗೆಳೆಯನ ಬಳಿ ಇವುಗಳ ಬಗ್ಗೆ ಮಾತನಾಡಲೇಬೇಡಿ

Published On - 12:03 pm, Sun, 30 January 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್