ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅಷ್ಟೊಂದು ಇಷ್ಟ ಯಾಕೆ? ಇದೆ ಕಾರಣವಂತೆ

|

Updated on: Oct 23, 2024 | 12:48 PM

ಅಮ್ಮ ಪ್ರೀತಿಯಿಂದ ಆರೈಕೆ ಮಾಡಿದರೆ ತಂದೆ ತನ್ನ ಹೆಗಲ ಮೇಲೆ ಹೊತ್ತು ಪ್ರಪಂಚವನ್ನೇ ತೋರಿಸುತ್ತಾರೆ. ಅದರಲ್ಲಿಯೂ ಈ ಅಪ್ಪನ ಪುಟ್ಟ ರಾಜಕುಮಾರಿಯೇ ಮುದ್ದಿನ ಮಗಳಾಗಿರುತ್ತಾಳೆ ಹೆಣ್ಣು ಮಕ್ಕಳಿಗೂ ತಾಯಿಗಿಂತ ತಂದೆಯ ಮೇಲೆ ಪ್ರೀತಿ ಹೆಚ್ಚು. ಮನೆಯ ಎಲ್ಲರಿಗೂ ಕೂಡ ಶಿಸ್ತಿನ ಸಿಪಾಯಿಯಂತೆ ಕಾಣುವ ಅಪ್ಪನು ಹೆಣ್ಣು ಮಕ್ಕಳಿಗೆ ಪ್ರೀತಿ ಹಾಗೂ ಕಾಳಜಿ ತುಂಬಿದ ವ್ಯಕ್ತಿಯಾಗಿರುತ್ತಾರೆ. ಹಾಗಾದ್ರೆ ಮನೆಯ ಮಗಳು ತಾಯಿಗಿಂತ ತಂದೆಯನ್ನೇ ಹೆಚ್ಚು ಇಷ್ಟ ಪಡುವುದಕ್ಕೆ ಕಾರಣವೇನು? ಎನ್ನುವುದರ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅಷ್ಟೊಂದು ಇಷ್ಟ ಯಾಕೆ? ಇದೆ ಕಾರಣವಂತೆ
Follow us on

ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಇಬ್ಬರೂ ಬಹಳ ಮುಖ್ಯ. ಆದರೆ ಹೆಚ್ಚಿನವರ ಮನೆಯಲ್ಲಿ ಗಂಡು ಮಕ್ಕಳು ತಾಯಿಯನ್ನು ಹೆಚ್ಚು ಇಷ್ಟ ಪಟ್ಟರೆ, ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಎಲ್ಲಾ ಆಗಿರುತ್ತಾರೆ. ಅಪ್ಪ ನಿಗೂ ಕೂಡ ಮಗಳೆಂದರೆ ಜೀವಕ್ಕಿಂತ ಹೆಚ್ಚು. ಮಗನಿಗೆ ಗದರುವ ತಂದೆಯೂ ಮಗಳು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ, ಹೆಚ್ಚು ಮುದ್ದು ಮಾಡ್ತಾರೆ. ಆದರೆ ಮನೆಯ ಮುದ್ದಿನ ಮಗಳು ತನ್ನ ತಂದೆಯನ್ನು ಹೆಚ್ಚು ಇಷ್ಟ ಪಡಲು ಈ ಕಾರಣಗಳು ಸೇರಿವೆಯಂತೆ.

* ಮಗಳಿಗೆ ಅಪ್ಪನೇ ಸೂಪರ್ ಹೀರೋ : ಹೆಣ್ಣು ಮಕ್ಕಳ ಜೀವನದ ಸೂಪರ್ ಹೀರೋನೇ ತಂದೆಯಾಗಿರುತ್ತಾರೆ. ತಾಯಿಯ ಆರೈಕೆ ಹಾಗು ತಂದೆಯ ಪ್ರೀತಿಯಲ್ಲಿ ಬೆಳೆದ ಮಗುವು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಆದರೆ ತಾಯಿಯೂ ಮಗಳಿಗೆ ಪ್ರೀತಿ ತೋರಿದರೂ ಕೂಡ ಹೆಣ್ಣು ಮಕ್ಕಳನ್ನು ತಂದೆ ಹೆಚ್ಚು ಮುದ್ದಿಸುತ್ತಾರೆ. ಅಪ್ಪನು ಕಾಳಜಿ ತೋರುವ ರೀತಿಯೇ ಭಿನ್ನವಾಗಿರುವ ಕಾರಣ ಹೆಣ್ಣು ಮಕ್ಕಳು ತಂದೆಯನ್ನೇ ಸೂಪರ್ ಹೀರೋ ಎಂದು ಭಾವಿಸುತ್ತಾರೆ.

* ತನ್ನ ಮೊದಲ ಪ್ರೀತಿಯೇ ತಂದೆ : ಪ್ರತಿ ಹುಡುಗಿಯ ಜೀವನ ದಲ್ಲಿ ತಂದೆ ಹಾಗೂ ಸಂಗಾತಿಯೂ ಪ್ರಮುಖ ಪಾತ್ರವಹಿಸುತ್ತಾನೆ. ಆದರೆ ಎಷ್ಟೇ ಕಾಳಜಿ ವಹಿಸುವ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಸಂಗಾತಿ ಬಂದರೂ ಕೂಡ ತಂದೆಯ ಪ್ರೀತಿಯನ್ನು ನೀಡಲು ಸಾಧ್ಯವಿಲ್ಲ. ಅವಳನ್ನು ಸದಾ ರಕ್ಷಿಸುವ, ಅವಳ ಅಗತ್ಯ ಹಾಗೂ ಆಸೆಗಳನ್ನು ಪೂರೈಸುವ ವ್ಯಕ್ತಿಯೇ ತಂದೆ. ಹೀಗಾಗಿ ಪ್ರತಿಯೊಬ್ಬ ಹುಡುಗಿಯ ಜೀವನದಲ್ಲಿಯೂ ಮೊದಲ ಪ್ರೀತಿ ಅವಳ ತಂದೆಯೇ ಆಗಿರುತ್ತಾನೆ.

* ಜವಾಬ್ದಾರಿಯೊಂದಿಗೆ ಕನಸುಗಳ ಜೊತೆಗೆ ನಿಲ್ಲುವವನು : ಪ್ರತಿಯೊಬ್ಬ ತಂದೆಗೂ ಮಗಳೆಂದರೆ ಪುಟ್ಟ ಪ್ರಪಂಚವೇ ಆಗಿರುತ್ತಾಳೆ. ಆಕೆ ಬೆಳೆದು ದೊಡ್ಡದವಳಾಗಿದ್ದರೂ ತನ್ನ ಪಾಲಿಗೆ ಇನ್ನು ಮಗುವೇ ಎನ್ನುವ ಭಾವವೊಂದು ತಂದೆಯಲ್ಲಿ ಇರುತ್ತದೆ. ಬೆಳೆಯುತ್ತ ಹೋದಂತೆ ಜವಾಬ್ದಾರಿಗಳನ್ನು ಕಲಿಸಿಕೊಡುವುದರೊಂದಿಗೆ ಆಕೆಯ ಕನಸುಗಳನ್ನು ಬೆಂಬಲಿಸಿ ನನಸಾಗುವಂತೆ ಮಾಡುವ ವ್ಯಕ್ತಿಯೇ ತಂದೆ. ಸಮಾಜ ವಿರೋಧಿಸಿದರೂ ತಂದೆಯೂ ಮಗಳನ್ನು ಸದಾ ಬೆಂಬಲ ನೀಡುತ್ತಾನೆ.

* ಆತ್ಮವಿಶ್ವಾಸ ಹಾಗೂ ಧೈರ್ಯ ತುಂಬುವ ವ್ಯಕ್ತಿ : ಹೆಣ್ಣು ಮಕ್ಕಳು ಜೀವನದಲ್ಲಿ ಕುಗ್ಗಿದಾಗ ಮೊದಲು ನೆನಪಾಗುವ ವ್ಯಕ್ತಿಯೇ ತಂದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏನೇ ಬರಲಿ ಮಗಳೇ, ನಿನ್ನ ಜೊತೆಗೆ ನಾನಿದ್ದೇನೆ ಎನ್ನುವ ಮಾತು ಮಗಳಿಗೆ ಧೈರ್ಯವನ್ನು ನೀಡುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ತಾಯಿಗಿಂತ ತಂದೆಯೊಂದಿಗೆ ಹೆಚ್ಚು ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತಾರೆ.

* ಅಮ್ಮನ ಕೋಪದಿಂದ ಪಾರು ಮಾಡುವ ವ್ಯಕ್ತಿ :ತಂದೆ ಮಗಳನ್ನು ಮುದ್ದಿಸಿದರೆ,ತಾಯಿ ಕೆಲವು ವಿಷಯಗಳಲ್ಲಿ ಮಕ್ಕಳಿಗೆ ಸಲಿಗೆ ನೀಡುವುದಿಲ್ಲ. ಹೀಗಾಗಿ ಮಕ್ಕಳಿಗೆ ತಾಯಿಯ ಬೈಗುಳಗಳು ಸರ್ವೇ ಸಾಮಾನ್ಯ. ಆದರೆ ಇವೆಲ್ಲದರಿಂದ ಮಗಳನ್ನು ರಕ್ಷಿಸಿ, ನಿನಗೆ ಖುಷಿ ಬಂದಂತೆ ಇರು ಮಗಳೇ ಎಂದು ಹೇಳಿ ಪತ್ನಿಯೂ ಕೆಲವೊಮ್ಮೆ ಗದರುವುದಿದೆ. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳಿಗೆ ತಂದೆಯೇ ಇಷ್ಟವಾಗುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ