Personality Test : ನಿಮ್ಮ ತುಟಿಗಳ ಆಕಾರವು ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ, ತುಟಿ ನೋಡಿಯೇ ಸ್ವಭಾವ ತಿಳಿಯಿರಿ
ಒಬ್ಬ ವ್ಯಕ್ತಿಗೆ ಹೋಲಿಕೆ ಮಾಡಿದರೆ ಮತ್ತೊಬ್ಬ ವ್ಯಕ್ತಿಯ ಗುಣ ಸ್ವಭಾವವು ಸಂಪೂರ್ಣ ಭಿನ್ನವಾಗಿರುತ್ತದೆ. ಆದರೆ ವ್ಯಕ್ತಿಯ ಗುಣವನ್ನು ಕಣ್ಣು, ಅಂಗೈ, ಮುಷ್ಟಿ, ಮಾತನಾಡುವ ಶೈಲಿಯಿಂದಲೇ ಕಂಡುಹಿಡಿಯಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ತುಟಿಯನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಹೇಗೆಂದು ನಿರ್ಣಯಿಸಬಹುದು ಎಂದರೆ ನೀವು ನಂಬುತ್ತೀರಾ. ಹೌದು, ತುಟಿಯ ಆಕಾರದಿಂದ ನಿಮ್ಮ ಗುಣಸ್ವಭಾವವನ್ನು ಹೇಳಬಹುದಂತೆ, ಈ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬ ವ್ಯಕ್ತಿಯೂ ನೋಡಲು ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ಆತನ ವ್ಯಕ್ತಿತ್ವ ಗುಣಸ್ವಭಾವಗಳು ಭಿನ್ನ ಆಗಿರುತ್ತದೆ. ಆದರೆ ತುಟಿಯ ಆಕಾರದಿಂದಲೇ ವ್ಯಕ್ತಿಯೂ ಹೇಗೆಂದು ಹೇಳಬಹುದು. ಎಲ್ಲರ ತುಟಿಗಳು ಒಂದೇ ರೀತಿ ಇರುವುದಿಲ್ಲ. ಒಬ್ಬರ ತುಟಿಯು ಸ್ವಲ್ಪ ದಪ್ಪ ಇದ್ದರೆ, ಮತ್ತೊಬ್ಬರಿಗೆ ಸಣ್ಣ, ಇನ್ನೊಬ್ಬರಿಗೆ ಉದ್ದ ಹೀಗೆ ಬೇರೆ ಬೇರೆ ಆಕಾರದಲ್ಲಿರುತ್ತದೆ. ಆದರೆ ನಿಮ್ಮ ತುಟಿಯಾಕಾರದಿಂದಲೇ ನಿಮ್ಮ ವ್ಯಕ್ತಿತ್ವ ಹೇಗೆಂದು ತಿಳಿಯುವುದು ಸುಲಭ.
- ಸಣ್ಣದಾದ ತುಟಿಯಿರುವವರು : ಕೆಲವು ವ್ಯಕ್ತಿಗಳ ತುಟಿಗಳು ಸಣ್ಣದಾಗಿರುತ್ತದೆ. ಈ ವ್ಯಕ್ತಿಗಳು ತಮ್ಮ ವಿಷಯಗಳನ್ನು ಜನರಿಂದ ಮರೆಮಾಡುತ್ತಾರೆ. ಬಹಳ ಚಿಂತನಶೀಲವಾಗಿ ಮಾತನಾಡುತ್ತಾರೆ. ಅದಲ್ಲದೇ ಈ ವ್ಯಕ್ತಿಗಳು ಅಷ್ಟು ಸುಲಭವಾಗಿ ಇತರರ ಮಾತುಗಳನ್ನು ನಂಬುವುದಿಲ್ಲ. ಒಬ್ಬ ಮೇಲೆ ನಂಬಿಕೆ ಇಡಬೇಕಾದರೆ ಸಾವಿರ ಸಲ ಯೋಚಿಸುತ್ತಾರೆ.
- ದೊಡ್ಡ ತುಟಿಯಿರುವವರು : ದೊಡ್ಡ ತುಟಿಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ತುಂಬಾ ಬುದ್ಧಿವಂತರಾಗಿದ್ದಾರೆ. ಈ ಜನರು ಸುತ್ತ ಮುತ್ತಲಿನ ಜನರ ಮನಸ್ಸನ್ನು ಗೆಲ್ಲೋದು ಹೇಗೆ ಎನ್ನುವುದನ್ನು ತಿಳಿದಿರುತ್ತಾರೆ. ದೊಡ್ಡ ತುಟಿಗಳನ್ನು ಹೊಂದಿರುವಜನರು ಇತರರಿಂದ ಹೊಗಳಿಸಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ.
- ದಪ್ಪ ತುಟಿಯಿರುವವರು : ದಪ್ಪ ತುಟಿಗಳನ್ನು ಹೊಂದಿರುವವರನ್ನು ಪ್ರೇಮಿಗಳು ಎಂದು ಹೇಳಲಾಗುತ್ತದೆ. ಈ ಜನರು ಬೇಗನೇ ಎಲ್ಲರ ಮಾತಿಗೂ ಮರುಳಾಗುತ್ತಾರೆ. ಈ ವ್ಯಕ್ತಿಗಳ ದೌರ್ಬಲ್ಯವೆಂದರೆ ಬೇಗನೆ ಭ್ರಮನಿರಸನಗೊಳ್ಳುತ್ತಾರೆ. ಇದರಿಂದಲೇ ಈ ವ್ಯಕ್ತಿಗಳ ಮನಸ್ಸಿಗೆ ಘಾಸಿಯಾಗುವ ಸಾಧ್ಯತೆಯೇ ಹೆಚ್ಚು ಎನ್ನಬಹುದು.
- ತೆಳುವಾದ ತುಟಿಯಿರುವವರು : ತೆಳ್ಳಗಿನ ತುಟಿಗಳನ್ನು ಹೊಂದಿರುವ ವ್ಯಕ್ತಿ ಬೌದ್ಧಿಕವಾಗಿ ಹೆಚ್ಚು ಸ್ಟ್ರಾಂಗ್ ಆಗಿರುತ್ತಾರೆ. ಸ್ವಾವಲಂಬಿಯಾಗಿರಲು ಬಯಸುವ ಈ ವ್ಯಕ್ತಿಗಳು ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ತೀರಾ ಕಡಿಮೆ. ಅಂತರ್ಮುಖಿಗಳಾಗಿದ್ದು, ನಾಚಿಕೆ ಸ್ವಭಾವದವರಾಗಿರುತ್ತಾರೆ. ಜೀವನದಲ್ಲಿ ಎದುರಾತ್ವ ಸಮಸ್ಯೆಯನ್ನು ಪರಿಹರಿಸುವಲ್ಲಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
- ಪೂರ್ಣ ತುಟಿಯಿರುವವರು : ಪೂರ್ಣ ತುಟಿಯನ್ನು ಹೊಂದಿರುವವರು ಹೆಚ್ಚು ಪ್ರೀತಿಯುಳ್ಳವರು, ಆಶಾವಾದಿಗಳಾಗಿರುತ್ತಾರೆ. ಸ್ವಂತಕ್ಕಿಂತ ಹೆಚ್ಚಾಗಿ ಇತರರ ಅಗತ್ಯತೆಗಳನ್ನು ಪೂರೈಸಲು ಒದ್ದಾಡುತ್ತಾರೆ. ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದು, ಹಠಮಾರಿ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಅತಿಯಾಗಿ ಮಾತನಾಡುವವರಾಗಿದ್ದು, ಮಾತಿನ ಮೂಲಕವೇ ತಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಾರೆ. ಕೋಪವನ್ನು ತಡೆದುಕೊಳ್ಳುವ ಸಾಮರ್ಥ್ಯವು ಕಡಿಮೆಯಾಗಿರುವ ಕಾರಣ, ತಕ್ಷಣವೇ ತಮ್ಮ ಸಿಟ್ಟನ್ನು ತೋರಿಸಿ ಬಿಡುತ್ತಾರೆ.
- ಪೂರ್ಣ ಕೆಳತುಟಿ ಹೊಂದಿರುವವರು : ತುಟಿಯೂ ಈ ರೀತಿಯ ಆಕಾರದಲ್ಲಿದ್ದರೆ ಅಂತಹ ಜನರು ಸಾಮಾನ್ಯವಾಗಿ ಸಂತೋಷವಾಗಿರುತ್ತಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುತ್ತಾರೆ. ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸಲು, ಹೊಸ ಅನುಭವಗಳನ್ನು ಪಡೆಯಲು ಹಾಗೂ ಹೊಸ ಸ್ಥಳಗಳನ್ನು ತೆರಳಲು ಇಷ್ಟಪಡುತ್ತಾರೆ.
- ಬಿಲ್ಲಿನ ಆಕಾರದ ತುಟಿಗಳು : ತುಟಿಗಳ ಆಕಾರವು ಬಿಲ್ಲಿನಂತಿದ್ದರೆ ಅಂತಹ ಜನರು ಉತ್ತಮ ಸಂವಹನಕಾರರಾಗಿರುತ್ತಾರೆ. ಹೀಗಾಗಿ ತಮ್ಮ ಮಾತುಗಳಿಂದ ಜನರ ಮೇಲೆ ವಿಭಿನ್ನ ಪ್ರಭಾವ ಬೀರುತ್ತಾರೆ. ಈ ಜನರು ರೋಮ್ಯಾಂಟಿಕ್ ಆಗಿರುತ್ತಾರೆ. ಎಲ್ಲಿಯಾದರೂ ಸರಿಯೇ ತಮ್ಮದೇ ಆದ ಸ್ಥಾನಮಾನವನ್ನು ಗಳಿಸಿಕೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ