ನೀವು ಬೇಗನೇ ವಯಸ್ಸಾದವರಂತೆ ಕಾಣಲು ನಿಮ್ಮ ಈ ಅಭ್ಯಾಸಗಳೇ ಕಾರಣ

ಕೆಲವು ಜನರು ತಮ್ಮ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತಾರೆ. ಹೌದು. ಕೆಲವರಿಗೆ ವಯಸ್ಸು 25 ರಿಂದ 30 ಆಗಿದ್ದರೂ ಸಹ ಅವರು 40 ರಿಂದ 50 ವರ್ಷದವರಂತೆ ಕಾಣಿಸಿಕೊಳ್ಳುತ್ತಾರೆ. ಹೀಗೆ ಅಕಾಲಿಕ ವಯಸ್ಸಾಗುವಿಕೆಗೆ ಕೆಲವೊಂದು ಅಭ್ಯಾಸಗಳೇ ಮುಖ್ಯ ಕಾರಣವಂತೆ. ಆ ಅಭ್ಯಾಸಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಬೇಗನೇ ವಯಸ್ಸಾದವರಂತೆ ಕಾಣಲು ನಿಮ್ಮ ಈ ಅಭ್ಯಾಸಗಳೇ ಕಾರಣ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Dec 08, 2025 | 3:23 PM

ಪ್ರತಿಯೊಬ್ಬರಿಗೂ ವಯಸ್ಸು ಹೆಚ್ಚುತ್ತಲೇ ಹೋಗುತ್ತದೆ. ಅದರಲ್ಲಿ ಕೆಲವರು ಎಷ್ಟೇ ವಯಸ್ಸಾದ್ರೂ ಯೌವ್ವನದಿಂದ ಇರುವಂತೆ ಕಂಡ್ರೆ ಅನೇಕರು  ತಮ್ಮ ಸಣ್ಣ ವಯಸ್ಸಿನಲ್ಲೇ 40, 50 ವರ್ಷದವರಂತೆ ಕಾಣಿಸುತ್ತಾರೆ. ದೈನಂದಿನ ಜೀವನದ ಕೆಲವೊಂದು ಅಭ್ಯಾಸಗಳೇ ಈ ಅಕಾಲಿಕ ವಯಸ್ಸಾಗುವಿಕೆಗೆ (premature aging) ಮುಖ್ಯ ಕಾರಣವಂತೆ. ಹೌದು ದೈನದಿಂದ ಜೀವನದ ಕೆಲವು ಅಭ್ಯಾಸಗಳು ತುಂಬಾ ಅಪಾಯಕಾರಿಯಾಗಿದ್ದು, ಅವು ನಿಮ್ಮನ್ನು ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣುವಂತೆ ಮಾಡಬಹುದು. ಹಾಗಾಗಿ ಆ ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೇಗನೇ ವಯಸ್ಸಾದವರಂತೆ ಕಾಣಲು ಈ ಅಭ್ಯಾಸಗಳೇ ಕಾರಣ:

ಯಾವಾಗಲೂ ಒತ್ತಡದಲ್ಲಿರುವುದು: ನಿರಂತರ ಒತ್ತಡವು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ, ಅದರ ಪರಿಣಾಮಗಳು ಮುಖದ ಮೇಲೂ ಸ್ಪಷ್ಟವಾಗಿ ಗೋಚರಿಸುತ್ತವೆ. ತಜ್ಞರು ಹೇಳುವಂತೆ ಒತ್ತಡವು ನಿಮ್ಮ ಚರ್ಮವನ್ನು ಆಯಾಸಗೊಳಿಸುತ್ತದೆ ಮತ್ತು ಅಕಾಲಿಕವಾಗಿ ವಯಸ್ಸಾಗುವಂತೆ ಮಾಡುತ್ತದೆ.

ತಡ ರಾತ್ರಿಯವರೆಗೆ ಎಚ್ಚರದಿಂದಿರುವುದು: ನಿದ್ರೆಯ ಕೊರತೆಯು ಚರ್ಮದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಅಕಾಲಿಕ ವಯಸ್ಸಿಗೆ ಕಾರಣವಾಗುತ್ತದೆ. ಆದ್ದರಿಂದ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಅತ್ಯಗತ್ಯ.

ಜಂಕ್ ಫುಡ್, ಸಿಹಿತಿಂಡಿಗಳ ಅತಿಯಾದ ಸೇವನೆ: ನೀವು ಸಿಹಿ ಪದಾರ್ಥ ಮತ್ತು ಫಾಸ್ಟ್ ಫುಡ್‌ಗಳನ್ನು ಅತಿಯಾಗಿ ಸೇವನೆ ಮಾಡಿದರೆ ಅದರ ನೇರ ಪರಿಣಾಮವು ನಿಮ್ಮ ಮುಖದಲ್ಲಿ ಗೋಚರಿಸುತ್ತದೆ. ಸಕ್ಕರೆ ಚರ್ಮದ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಮತ್ತು ಇದು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ, ಸಾಕಷ್ಟು ತರಕಾರಿಗಳು, ಹಣ್ಣುಗಳನ್ನು ಸೇವಿಸಿ ಮತ್ತು ನೀರನ್ನು ಕುಡಿಯಿರಿ.

ಸನ್‌ಸ್ಕ್ರೀನ್ ಹಚ್ಚಿಕೊಳ್ಳದಿರುವುದು: ಹೆಚ್ಚಿನವರು ಮನೆಯಲ್ಲಿದ್ದಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದಿಲ್ಲ. ತಜ್ಞರು ಹೇಳುವಂತೆ ಯುವಿ ಕಿರಣಗಳು ಒಳಾಂಗಣದಲ್ಲಿಯೂ ಸಹ ನಮ್ಮ ಚರ್ಮಕ್ಕೆ ಹಾನಿ ಮಾಡುತ್ತವೆ. ಆದ್ದರಿಂದ, ಯಾವುದೇ ಹವಮಾನವಿದ್ದರೂ ಪ್ರತಿದಿನ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಲೇಬೇಕು.

ಇದನ್ನೂ ಓದಿ: ಚಂದ್ರನಂತೆ ಹೊಳೆಯುವ ಮುಖ ನಿಮ್ಮದಾಗಲು ಕುಡಿಯಿರಿ ಜ್ಯೂಸ್‌

ಧೂಮಪಾನ, ಮದ್ಯಪಾನ: ಅತಿಯಾದ ಧೂಮಪಾನ ಮತ್ತು ಮದ್ಯಪಾನ ಕೂಡ ಅಕಾಲಿಕ ವಯಸ್ಸಾಗುವಿಕೆಗೆ ಮುಖ್ಯ ಕಾರಣ. ಆದ್ದರಿಂದ ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿದರೆ ಚರ್ಮಕ್ಕೂ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು,

ನಿರ್ಜಲೀಕರಣ: ಸಾಕಷ್ಟು ನೀರು ಕುಡಿಯದಿರುವ ಅಭ್ಯಾಸವೂ ವಯಸ್ಸಾಗುವಿಕೆಗೆ ಕಾರಣ.  ನೀರಿನ ಕೊರತೆಯಿಂದ ಚರ್ಮವು ತೇವಾಂಶ ಕಳೆದುಕೊಳ್ಳುತ್ತದೆ, ಇದರಿಂದ ತ್ವಚೆ ಶುಷ್ಕ ಮತ್ತು ಮಂದವಾಗಿ ಕಾಣುತ್ತದೆ. ಮತ್ತು ಇದು ನಿಮ್ಮನ್ನು ಅಕಾಲಿಕವಾಗಿ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ