Winter Skin Care: ಚಂದ್ರನಂತೆ ಹೊಳೆಯುವ ಮುಖ ನಿಮ್ಮದಾಗಲು ಕುಡಿಯಿರಿ ಈ ಜ್ಯೂಸ್
ಹೊಳೆಯುವ ಚರ್ಮ ನಮ್ಮದಾಗಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಅನೇಕರು ದುಬಾರಿ ಕ್ರೀಮ್, ಸ್ಕಿನ್ ಟ್ರೀಟ್‌ಮೆಂಟ್‌ಗಳ ಮೊರೆ ಹೋಗ್ತಾರೆ. ಈ ಬಾಹ್ಯ ಆರೈಕೆಯ ಜೊತೆಗೆ ಒಳಗಿನಿಂದಲೂ ಉತ್ತಮ ಪೋಷಣೆ ಬೇಕಾಗುತ್ತದೆ. ಇದಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರ ಜೊತೆಗೆ ಈ ಚಳಿಗಾಲದಲ್ಲಿ ಈ ಕೆಲವು ಜ್ಯೂಸ್‌ಗಳನ್ನು ಸೇವನೆ ಮಾಡುವುದರಿಂದ ಮುಖ ಚಂದ್ರನಂತೆ ಹೊಳೆಯುತ್ತಂತೆ.

ಚಳಿಗಾಲದಲ್ಲಿನ ಶೀತ ವಾತಾವರಣದ ಕಾರಣದಿಂದಾಗಿ ತ್ವಚೆ ತುಂಬಾನೇ ಡ್ರೈ ಆಗುತ್ತದೆ ಮತ್ತು ಮುಖದ ಕಾಂತಿಯೇ (facial glow) ಮಾಯವಾಗುತ್ತದೆ. ಅದಕ್ಕಾಗಿ ಈ ಸಮಯದಲ್ಲಿ ಹೆಚ್ಚಿನವರು ದುಬಾರಿ ಕ್ರೀಮ್, ಲೋಷನ್‌ಗಳ ಮೊರೆ ಹೋಗ್ತಾರೆ. ತ್ವಚೆಗೆ ಬಾಹ್ಯ ಆರೈಕೆಯ ಜೊತೆಗೆ ಒಳಗಿನಿಂದಲೂ ಸಾಕಷ್ಟು ಪೋಷಣೆ ಬೇಕಾಗುತ್ತದೆ. ಇದಕ್ಕಾಗಿ ಈ ನೀವು ಒಂದಷ್ಟು ಜ್ಯೂಸ್‌ಗಳನ್ನು ಚಳಿಗಾಲದಲ್ಲಿ ಸೇವನೆ ಮಾಡಬೇಕು. ಇವು ನಿಮ್ಮ ತ್ವಚೆಗೆ ಪೋಷಣೆ ನೀವುಡುವದರ ಜೊತೆಗೆ ನಿಮ್ಮ ಮುಖ ಈ ಚಳಿಗಾಲದಲ್ಲೂ ಚಂದ್ರನಂತೆ ಕಾಂತಿಯುತವಾಗಿ ಹೊಳೆಯಲು ಸಹಾಯ ಮಾಡುತ್ತದೆ.
ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿ ಈ ಜ್ಯೂಸ್:
ಸೌತೆಕಾಯಿ ರಸ: ಚಳಿಗಾಲದಲ್ಲಿ ಸೌತೆಕಾಯಿ ರಸ ಕುಡಿಯುವುದರಿಂದ ನಿಮ್ಮ ಚರ್ಮವು ಹೈಡ್ರೇಟ್ ಆಗುತ್ತದೆ. ಮುಖ ಯಾವಾಗಲೂ ಕಾಂತಿಯುತವಾಗಿರುತ್ತದೆ. ನೀವು ಪ್ರತಿದಿನ ಅಥವಾ ವಾರಕ್ಕೆ ಕನಿಷ್ಠ 2 ಬಾರಿ ಸೌತೆಕಾಯಿ ಜ್ಯೂಸ್ ಕುಡಿಯಿರಿ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ಚರ್ಮವನ್ನು ಪುನರ್ಯೌವನಗೊಳಿಸುತ್ತವೆ. ಇದು ಚರ್ಮ ಒಣಗುವುದನ್ನು ತಡೆಯುತ್ತದೆ. ಇದು ಕಣ್ಣುಗಳ ಸುತ್ತಲಿನ ಕಪ್ಪು ವೃತ್ತಗಳನ್ನು ಸಹ ತೆಗೆದುಹಾಕುತ್ತದೆ.
ಟೊಮೆಟೊ ರಸ: ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಟೊಮೆಟೊ ರಸವನ್ನು ಕುಡಿಯಬಹುದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಲೈಕೋಪೀನ್ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಸುಂದರಗೊಳಿಸುವುದರ ಜೊತೆಗೆ ಮೊಡವೆ ಸಮಸ್ಯೆಯನ್ನೂ ದೂರ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ
ಕ್ಯಾರೆಟ್ ಜ್ಯೂಸ್: ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಬಯಸಿದರೆ, ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು, ಮುಖದಿಂದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Sat, 29 November 25




