AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Skin Care: ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ

ಚಳಿಗಾಲದಲ್ಲಿ ತ್ವಚೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಶೀತ ವಾತಾವರಣದ ಕಾರಣದಿಂದಾಗಿ ತ್ವಚೆ ಡ್ರೈ ಆಗಿ ಬಿಡುತ್ತದೆ. ಇದರಿಂದಾಗಿ ಮುಖದ ಸೌಂದರ್ಯವೇ ಕೆಡುತ್ತದೆ. ಹಾಗಾಗಿ ತ್ವಚೆಯನ್ನು ತೇವಭರಿತವಾಗಿ ಇಟ್ಟುಕೊಳ್ಳಲು, ಡ್ರೈ ಸ್ಕಿನ್‌ ಸಮಸ್ಯೆಯನ್ನು ತೊಡೆದು ಹಾಕಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ.

Winter Skin Care: ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Nov 27, 2025 | 8:48 AM

Share

ಚಳಿಗಾಲ (winter) ಆರಂಭವಾಗಿದೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳ ಜೊತೆಗೆ ತ್ವಚೆ ಸಂಬಂಧಿ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಹೌದು ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವ ಕಾರಣ ಚರ್ಮದಲ್ಲಿರುವ ತೇವಾಂಶ ಬೇಗನೆ ಡ್ರೈ ಆಗುತ್ತದೆ. ಇದರಿಂದ ಚರ್ಮ ಕಾಂತಿಯೂ ಮಂದವಾಗುತ್ತದೆ. ಮತ್ತು ಈ ಒಣ ಚರ್ಮ ಸಮಸ್ಯೆಯ ಕಾರಣದಿಂದಾಗಿ ಮುಖದ ಸೌಂದರ್ಯವೇ ಹಾಳಾಗಬಹುದು. ಹೀಗಿರುವಾಗ ಈ ನೈಸರ್ಗಿಕ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಮೃದುವಾಗಿ ಮಾಯಿಶ್ಚರೈಸ್ಡ್‌  ಆಗಿ ಇರಿಸಿಕೊಳ್ಳಬಹುದು.

ಚಳಿಗಾಲದಲ್ಲಿ ಶುಷ್ಕ ತ್ವಚೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸಲಹೆ:

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಚಳಿಗಾಲದಲ್ಲಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಇದನ್ನು ಮುಖಕ್ಕೆ ಹಚ್ಚಿ ಮೃದುವಾದ  ಮಸಾಜ್ ಮಾಡುವುದರಿಂದ ತ್ವಚೆ ಮೃದುವಾಗಿರುತ್ತದೆ.

ಜೇನುತುಪ್ಪ: ಜೇನುತುಪ್ಪವು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಮುಖ ತೊಳೆಯುವ 10-15 ನಿಮಿಷಗಳ ಮೊದಲು ಇದನ್ನು ನಿಮ್ಮ ಮುಖಕ್ಕೆ ಹಚ್ಚಿ. ಇದು ನಿಮ್ಮ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

ಅಲೋವೆರಾ ಜೆಲ್: ಅಲೋವೆರಾ ಜೆಲ್ ಆರ್ಧ್ರಕ ಗುಣಗಳನ್ನು ಹೊಂದಿದೆ. ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಇದು ಶುಷ್ಕತೆಯನ್ನು ತಡೆಯುತ್ತದೆ.

ಇದನ್ನೂ ಓದಿ: ಚಳಿಗಾಲದ ಸೋಮಾರಿತನವನ್ನು ಹೋಗಲಾಡಿಸಲು ಬೆಳಗ್ಗೆ ಎದ್ದ ತಕ್ಷಣ ಕೆಲಸಗಳನ್ನು ಮಾಡಿ

ರೋಸ್ ವಾಟರ್: ಚಳಿಗಾಲದಲ್ಲಿ ರೋಸ್‌ ವಾಟರ್ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಮೃದುವಾಗಿರುತ್ತದೆ.

ಮಾಯಿಶ್ಚರೈಸರ್ ಅತ್ಯಂತ ಮುಖ್ಯ: ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಹೆಚ್ಚು ಬೇಕಾಗುತ್ತದೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಾಯಿಶ್ಚರೈಸರ್ ಹಚ್ಚಿ. ಶಿಯಾ ಬೆಣ್ಣೆ, ಗ್ಲಿಸರಿನ್ ಅಥವಾ ಹೈಲುರಾನಿಕ್ ಆಮ್ಲದಂತಹ ಪದಾರ್ಥಗಳನ್ನು ಹೊಂದಿರುವ ಮಾಯಿಶ್ಚರೈಸರ್‌ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ