AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲೇ ಸಣ್ಣ ಜಾಗದಲ್ಲಿ ಈಸಿಯಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್;‌ ಅದು ಹೇಗೆ ಗೊತ್ತಾ?

ಅದ್ಭುತ ರುಚಿಯನ್ನು ಹೊಂದಿರುವ, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್‌ ಫ್ರೂಟ್‌ ಸ್ವಲ್ಪ ದುಬಾರಿ ಹಣ್ಣು. ಆದರೆ ದುಬಾರಿಯಾದ ಈ ಹಣ್ಣನ್ನು ಸ್ವಲ್ಪ ಜಾಗವಿದ್ದರೆ ಸಾಕು ಮನೆಯ ಬಾಲ್ಕನಿ, ಅಂಗಳದಲ್ಲಿ ಬಲು ಸುಲಭವಾಗಿ ಬೆಳೆಯಬಹುದು ಎಂದು ಕೃಷಿ ತಜ್ಞರು ಹೇಳುತ್ತಾರೆ. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಯಲ್ಲೇ ಸಣ್ಣ ಜಾಗದಲ್ಲಿ ಈಸಿಯಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್;‌ ಅದು ಹೇಗೆ ಗೊತ್ತಾ?
ಡ್ರ್ಯಾಗನ್‌ ಫ್ರೂಟ್‌Image Credit source: vecteezy
ಮಾಲಾಶ್ರೀ ಅಂಚನ್​
|

Updated on: Nov 26, 2025 | 5:50 PM

Share

ತನ್ನ ಪೌಷ್ಟಿಕಾಂಶ ಗುಣಗಳಿಗಾಗಿ ಹೆಸರುವಾಸಿಯಾಗಿರುವ ಡ್ರ್ಯಾಗನ್ ಫ್ರೂಟ್‌ (Dragon fruit) ತಿನ್ನಲು ಬಲು ರುಚಿಕರವಾಗಿರುತ್ತದೆ. ಜೊತೆಗೆ ಸ್ವಲ್ಪ ದುಬಾರಿಯೂ ಹೌದು. ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಈ ಹಣ್ಣನ್ನು ಬಹಳ ಸುಲಭವಾಗಿ ನೀವು ಮನೆಯಲ್ಲಿಯೇ ಬೆಳೆಸಬಹುದು. ಇದಕ್ಕೆ ಹೆಚ್ಚಿನ ಶ್ರಮ, ಸ್ಥಳದ ಅವಶ್ಯಕತೆಯಿಲ್ಲ, ಮನೆಯ ಬಾಲ್ಕನಿ, ಟೆರೇಸ್‌, ಅಂಗಳದಲ್ಲಿ ಸುಲಭವಾಗಿ ಬೆಳೆಯಬಹುದು ಎಂದು ಕೃಷಿ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ರೆ ಈಸಿಯಾಗಿ ಡ್ರ್ಯಾಗನ್‌ ಫ್ರೂಟ್‌ ಬೆಳೆಯೋದೇಗೆ ಎಂಬುದನ್ನು ನೋಡೋಣ ಬನ್ನಿ.

ಮನೆಯಲ್ಲಿ ಈಸಿಯಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್‌:

ಡ್ರ್ಯಾಗನ್ ಫ್ರೂಟ್ ಕ್ಯಾಕ್ಟಸ್ ಕುಟುಂಬಕ್ಕೆ ಸೇರಿದ ಸಸ್ಯ. ಇದನ್ನು ಬೆಳೆಯಲು ಹೆಚ್ಚಿನ ಶ್ರಮ ಅಥವಾ ದೊಡ್ಡ ಜಾಗದ ಅವಶ್ಯಕತೆಯಿಲ್ಲ. ಕೇವಲ ಪಾಟ್‌ ಸಾಕು. ಬೀಜಗಳಿಂದ ಸಸಿ ಬೆಳೆಸುವುದಕ್ಕಿಂತ ಕತ್ತರಿಸಿದ ಗಿಡಗದ ರೆಂಬೆಯಿಂದ ಇನ್ನೊಂದು ಗಿಡವನ್ನು ಸುಲಭವಾಗಿ ಬೆಳೆಯಬಹುದು. ಇದಕ್ಕಾಗಿ  12–18 ಇಂಚು ಎತ್ತರದ ಆರೋಗ್ಯಕರ ಸಸ್ಯವನ್ನು ತೆಗೆದುಕೊಂಡು ಕುಂಡದಲ್ಲಿ ನೆಡಿ. ಅದು ಬಳ್ಳಿಯಂತೆ ಬೆಳೆಯುವುದರಿಂದ, ನೀವು ಅದರ ಪಕ್ಕದಲ್ಲಿ ಮರದ ಕೋಲು ಅಥವಾ ಕಬ್ಬಿಣದ ಕಂಬವನ್ನು ಆಧಾರವಾಗಿ ಇಡಬೇಕು.

ಈ ಸಸ್ಯಕ್ಕೆ ಮಣ್ಣಿನ ವಿಷಯದಲ್ಲಿಯೂ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಹಗುರವಾದ, ಮರಳು ಮಿಶ್ರಿತ ಮಣ್ಣನ್ನು ಬಳಸಿದರೆ ಸಾಕು. ಜಾಸ್ತಿ ನೀರು ಹಾಕುವ ಅವಶ್ಯಕತೆಯೂ ಇಲ್ಲ. ಅತಿಯಾಗಿ ನೀರು ಹಾಕಿದರೆ  ಬೇರುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ, ವಾರಕ್ಕೆ ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ನೀರು ಹಾಕಿದರೆ ಸಾಕು.

ಇದನ್ನೂ ಓದಿ: ಚಳಿಗಾಲದಲ್ಲಿ ತುಳಸಿ ಗಿಡ ಒಣಗಬಾರದೆಂದರೆ ಮನೆಯಲ್ಲೇ ತಯಾರಿಸಿದ ಗೊಬ್ಬರ ಹಾಕಿ

ನೆಟ್ಟ 12-14 ತಿಂಗಳ ನಂತರ ಸಸ್ಯವು ತನ್ನ ಮೊದಲ ಹೂವುಗಳನ್ನು ಬಿಡುತ್ತದೆ. ನಂತರ ಕಾಯಿ ಬಿಡುತ್ತದೆ.  ಡ್ರ್ಯಾಗನ್ ಫ್ರೂಟ್‌ ಗಿಡದ ಬೆಳವಣಿಗೆಗೆ ಕಡಿಮೆ ನೀರು ಮತ್ತು ಹೆಚ್ಚಿನ ಸೂರ್ಯನ ಬೆಳಕು ಎರಡು ಮೂಲಭೂತ ಅವಶ್ಯಕತೆಗಳಾಗಿದ್ದು, ಇದನ್ನು ಬೆಳೆಯುವ ಮೂಲಕ ಕಡಿಮೆ ಶ್ರಮದಿಂದ ಹೆಚ್ಚಿನ ಫಲಿತಾಂಶ ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ