ಮನಸ್ಥಿತಿಯನ್ನು ಸುಧಾರಿಸಲು, ಸಕಾರಾತ್ಮಕತೆಯನ್ನು ಹೆಚ್ಚಿಸಲು ಮನೆಯಲ್ಲಿ ಈ ಗಿಡಗಳನ್ನು ನೆಡಿ
ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಮನೆಯ ಸೌಂದರ್ಯ ದುಪ್ಪಟ್ಟಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನವರು ತಮ್ಮ ಮನೆಯಲ್ಲಿ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಡುತ್ತಾರೆ. ಇದು ಮಾತ್ರವಲ್ಲದೆ ಮನೆಯಲ್ಲಿ ಸಸ್ಯ ನೆಡುವುದರಿಂದ ಮನೆಯ ಅಂದ ಹೆಚ್ಚುವುದು ಮಾತ್ರವಲ್ಲದೆ ಇದು ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ಹೀಗಿರುವಾಗ ಮನಸ್ಥಿತಿಯನ್ನು ಸುಧಾರಿಸಲು, ಸಕಾರಾತ್ಮಕತೆಯನ್ನು ಹೆಚ್ಚಿಸಲು ಮನೆಯೊಳಗೆ ಯಾವ ಗಿಡಗಳನ್ನು ನೆಟ್ಟರೆ ಸೂಕ್ತ ಎಂಬುದನ್ನು ನೋಡೋಣ ಬನ್ನಿ.

ಗಿಡಗಳು (plants) ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಹೆಚ್ಚಿನವರು ಮನೆಯೊಳಗೆ ಸುಂದರ ಗಿಡಗಳನ್ನು ನೆಡುತ್ತಾರೆ. ಈ ಸಸ್ಯಗಳು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದಂತೆ. ಹೌದು ಒಳಾಂಗಣ ಸಸ್ಯಗಳು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಕಾರ್ಟಿಸೋಲ್ ಒತ್ತಡದ ಹಾರ್ಮೋನ್ ಆಗಿದ್ದು, ದೇಹದಲ್ಲಿ ಈ ಹಾರ್ಮೋನ್ ಹೆಚ್ಚಾದರೆ, ಒತ್ತಡದ ಮಟ್ಟವೂ ಹೆಚ್ಚಾಗುತ್ತದೆ. ಹೀಗಿರುವಾಗ ಕೆಲವು ಒಳಾಂಗಣ ಸಸ್ಯಗಳು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದ್ದು, ಇವು ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸುತ್ತವೆ. ಹಾಗಿದ್ದರೆ ಒತ್ತಡವನ್ನು ಕಡಿಮೆ ಮಾಡಲು ಮನೆಯಲ್ಲಿ ಯಾವ ಗಿಡವನ್ನು ನೆಟ್ಟರೆ ಸೂಕ್ತ ಎಂಬುದನ್ನು ತಿಳಿಯಿರಿ.
ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿ ಈ ಗಿಡಗಳು:
ಲ್ಯಾವೆಂಡರ್ ಗಿಡ: ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನು ಸುಧಾರಿಸಲು ಲ್ಯಾವೆಂಡರ್ ಸಸ್ಯ ತುಂಬಾ ಪರಿಣಾಮಕಾರಿ. ಇದು ಒತ್ತಡ ಮತ್ತು ಆತಂಕ ಎರಡನ್ನೂ ಕಡಿಮೆ ಮಾಡುತ್ತದೆ. ಇದರ ಆಹ್ಲಾದಕರ ಪರಿಮಳವು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮನೆಯೊಳಗೆ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ.
ಮನಿ ಪ್ಲಾಂಟ್: ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಮನಿಪ್ಲಾಂಟ್ ಕೂಡ ಪರಿಣಾಮಕಾರಿ. ಈ ಸಸ್ಯ ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ, ಆತಂಕ ಮತ್ತು ಚಡಪಡಿಕೆಯನ್ನು ಶಮನಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
ಪೀಸ್ ಲಿಲ್ಲಿ ಗಿಡ: ಪೀಸ್ ಲಿಲ್ಲಿ ಹೂವುಗಳು ನಿಮ್ಮ ಮನೆಗೆ ತಾಜಾತನದ ಭಾವನೆಯನ್ನು ತರುತ್ತವೆ ಮತ್ತು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತವೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ನಿಮ್ಮ ಯೋಗಕ್ಷೇಮ ಸುಧಾರಿಸುತ್ತದೆ ಮತ್ತು ಆತಂಕ ಕಡಿಮೆಯಾಗುತ್ತದೆ.
ಸ್ಪೈಡರ್ ಪ್ಲಾಂಟ್: ಈ ಸಸ್ಯವು ಯಾವುದೇ ಪರಿಮಳವನ್ನು ಹೊಂದಿಲ್ಲದಿರಬಹುದು, ಆದರೆ ಇದು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಈ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈ ಗಿಡವನ್ನು ಸಹ ನೀವು ಮನೆಯಲ್ಲಿ ನೆಡಬಹುದು.
ಇದನ್ನೂ ಓದಿ: ನಿಮ್ಮ ಬೆಳಗಿನ ದಿನಚರಿ ಹೀಗಿದ್ದರೆ ಒತ್ತಡದ ಕಡಿಮೆಯಾಗಿ ಮನಸ್ಸಿಗೆ ಶಾಂತಿ ಸಿಗೋದಂತೂ ಗ್ಯಾರಂಟಿ
ಜಿನ್ಸೆಂಗ್: ಜಿನ್ಸೆಂಗ್ ಸಾಂಪ್ರದಾಯಿಕವಾಗಿ ಚೀನೀ ಔಷಧದಲ್ಲಿ ಬಳಸಲಾಗುವ ಒಂದು ಗಿಡಮೂಲಿಕಾ ಸಸ್ಯವಾಗಿದೆ. ಇದನ್ನು ನೆಡುವುದು ಕೂಡ ಒಳ್ಳೆಯದು. ಇದು ನಮ್ಮ ದೇಹದಲ್ಲಿ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ನಿಯಂತ್ರಿಸುವ ಮೂಲಕ ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿದೆ.
ಗಿಡಮೂಲಿಕಾ ಸಸ್ಯಗಳು: ನಿಮ್ಮ ಮನೆಯಲ್ಲಿ ತುಳಸಿ, ಮಲ್ಲಿಗೆ, ಲೆಮನ್ ಗ್ರಾಸ್, ಪುದೀನದಂತಹ ಸಸ್ಯಗಳನ್ನು ನೆಡುವುದು ಸಹ ಒಳ್ಳೆಯದು. ಇವುಗಳ ಪರಿಮಳ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ಮನಸ್ಥಿತಿಯನ್ನು ಸುಧಾರಿಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




